ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಪುಣೆಯಲ್ಲಿ ಸಮಬಲದ ಹೋರಾಟ

ISL: Pune make life difficult for ATK

ಪುಣೆ, ಫೆಬ್ರವರಿ 10: ಪುಣೆ ತಂಡದ ಪರ 17ನೇ ನಿಮಿಷದಲ್ಲಿ ಎಟಿಕೆಯ ಜಾನ್ ಜಾನ್ಸನ್ ನೀಡಿದ ಉಡುಗೊರೆ ಗೋಲು ಹಾಗೂ ರಾಬಿನ್ ಸಿಂಗ್ 76ನೇ ನಿಮಿಷದಲ್ಲಿ ಗಳಿಸಿದ ಅದ್ಭುತ ಗೋಲು ಪಂದ್ಯವನ್ನು ಸಮಬಲ ಗೊಳಿಸುವಲ್ಲಿ ನೆರವಾಯಿತು.

ಎಟಿಕೆ ಪರ 23ನೇ ನಿಮಿಷದಲ್ಲಿ ಜಯೇಶ್ ರಾಣಾ ಹಾಗೂ 61ನೇ ನಿಮಿಷದಲ್ಲಿ ಎಡು ಗಾರ್ಷಿಯ ಗಳಿಸಿದ ಗೋಲು ಪಂದ್ಯವನ್ನು 2-2 ಗೋಲಿನಿಂದ ಸಮಬಲ ಗೊಳಿಸಿತು. ಈ ಫಲಿತಾಂಶ ಇತ್ತಂಡಗಳಿಗೂ ಖುಷಿ ತರುವ ವಿಷಯವಲ್ಲ.

ಐಎಸ್‌ಎಲ್‌: ಬೆಂಗಳೂರನ್ನು ಸೋಲಿನಿಂದ ಪಾರು ಮಾಡಿದ ಛೆಟ್ರಿ, ಉದಾಂತ್ ಐಎಸ್‌ಎಲ್‌: ಬೆಂಗಳೂರನ್ನು ಸೋಲಿನಿಂದ ಪಾರು ಮಾಡಿದ ಛೆಟ್ರಿ, ಉದಾಂತ್

ಸಮಬಲದ ಹೋರಾಟ
ಮೊದಲ ಅವಧಿಯಲ್ಲಿ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು. ಇತ್ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಮಾರ್ಸೆಲೋ ಪೆರೆರಾ ಮಿಂಚಿನ ಆಟಕ್ಕೆ ಚಾಲನೆ ನೀಡಿದರು. ಜಾನ್ ಜಾನ್ಸನ್ 17ನೇ ನಿಮಿಷದಲ್ಲಿ ನೀಡಿದ ಉಡುಗೊರೆ ಗೋಲಿನಿಂದ ಪುಣೆ ಮೇಲುಗೈ ಸಾಧಿಸಿತು, ಆದರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, 23ನೇ ನಿಮಿಷದಲ್ಲಿ ಎಟಿಕೆ ಗೋಲಿನ ಖಾತೆ ತೆರೆಯಿತು. ಆರು ನಿಮಿಷ ಕಳೆಯುತ್ತಿದ್ದಂತೆ ಜಯೇಶ್ ರಾಣೆ ಗಳಿಸಿದ ಗೋಲಿನಿಂದ ಪಂದ್ಯ ಸಮಬಲ ಸಾಧಿಸಿತು.

1
1042960

ಇಲ್ಲಿ ಇತ್ತಂಡಗಳಿಗೂ ಜಯದ ಅಗತ್ಯ ಇದ್ದ ಕಾರಣ ಮಿಂಚಿನ ಆಟದ ಅನಿವಾರ್ಯತೆ ಇದ್ದಿತ್ತು. ಆದರೆ ಎಟಿಕೆ ಉಡುಗೊರೆ ಗೋಲು ನೀಡಬಹುದು ಎಂದು ಯಾರೂ ಊಹಿಸಿರಲಿಲ್ಲ, 17ನೇ ನಿಮಿಷದಲ್ಲಿ ಎಟಿಕೆ ತಂಡದಲ್ಲಿ ಈ ದುರಂತದ ಗೋಲು ಸಂಭವಿಸಿತು. ರಾಬಿನ್ ಸಿಂಗ್ ನೀಡಿದ ಪಾಸು ಮಾರ್ಕೋ ಸ್ಟಾಂಕೋವಿಕ್ ಕಡೆಗೆ ಸಾಗಿತು. ಅವರು ಚೆಂಡನ್ನು ಜಾನ್ ಜಾನ್ಸನ್ ಕಡೆಗೆ ತುಳಿದರು. ಆದರೆ ಎಟಿಕೆ ಪಾಲಿಗೆ ಆ ಪಾಸು ಒಳಿತು ಮಾಡಲಿಲ್ಲ. ಎದುರಾಳಿ ತಂಡಕ್ಕೆ ಗೋಲಾಗಿ ಪರಿವರ್ತನೆಗೊಂಡಿತು.

ಐಎಸ್‌ಎಲ್‌ 2019: ಗೋಲಿಲ್ಲದ ನೀರಸ ಪಂದ್ಯಕ್ಕೆ ಸಾಕ್ಷಿಯಾದ ಡೆಲ್ಲಿ ಐಎಸ್‌ಎಲ್‌ 2019: ಗೋಲಿಲ್ಲದ ನೀರಸ ಪಂದ್ಯಕ್ಕೆ ಸಾಕ್ಷಿಯಾದ ಡೆಲ್ಲಿ

ಇಂಡಿಯನ್ ಸೂಪರ್ ಲೀಗ್‌ನ 74ನೇ ಪಂದ್ಯ ಅತ್ಯಂತ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದಿತ್ತು. ಎಫ್ ಸಿ ಪುಣೆ ಸಿಟಿ ಹಾಗೂ ಎಟಿಕೆ ಪಾಲಿಗೆ ಇದು ಪ್ರಮುಖ ಪಂದ್ಯ. ಆತಿಥೇಯ ಪುಣೆ ತಂಡ ಈಗ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ, ಸತತ ಮೂರನೇ ಜಯ ಗಳಿಸುವ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿಯಿತು. ಅಂತಿಮ ನಾಲ್ಕರ ಹಂತ ತಲುಪಬೇಕಾದರೆ ಪುಣೆ ತಂಡಕ್ಕೆ ಈ ಪಂದ್ಯ ಸೇರಿದಂತೆ ಉಳಿದಿರುವ ಪ್ರತಿಯೊಂದು ಪಂದ್ಯದಲ್ಲೂ ಜಯ ಗಳಿಸಬೇಕಾಗಿದೆ.

ಋತುವಿನಲ್ಲಿ ಪುಣೆ ತಂಡ ಗಳಿಸಿರುವುದು ಕೇವಲ 13 ಗೋಲು. ಇದು ತಂಡವೊಂದು ಗಳಿಸಿದ ಅತಿ ಕಡಿಮೆ ಗೋಲು ಕೂಡ ಆಗಿದೆ. ಎದುರಾಳಿ ತಂಡಕ್ಕೆ 22 ಗೋಲುಗಳನ್ನು ನೀಡಿದೆ. ಎಟಿಕೆ ತಂಡ 14 ಪಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿದೆ. ಇತ್ತೀಚಿನ ಪಂದ್ಯಗಳಲ್ಲಿ ಎಟಿಕೆ ಉತ್ತಮ ಪ್ರದರ್ಶನ ನೀಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಕೋಲ್ಕೊತಾ ಪಡೆ ಎದುರಾಳಿ ತಂಡಕ್ಕೆ ಕೇವಲ ಒಂದು ಗೋಲನ್ನು ಗಳಿಸುವ ಅವಕಾಶವನ್ನು ನೀಡಿದೆ. ಇತ್ತಂಡಗಳು ಒಂಬತ್ತು ಪಂದ್ಯಗಳನ್ನು ಆಡಿದ್ದು ಅಂದರಲ್ಲಿ ಪುಣೆ ಐದು ಗೋಲುಗಳನ್ನು ನೀಡಿದೆ. ಇಲ್ಲಿ ಸೋಲುವ ತಂಡದ ಸೆಮಿಫೈನಲ್ ಹಾದಿ ಕಠಿಣವಾಗುವುದು ಸ್ಪಷ್ಟ.

Story first published: Monday, February 11, 2019, 11:59 [IST]
Other articles published on Feb 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X