For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮುಂಬೈ ಸಿಟಿ ಎಫ್‌ಸಿಗೆ ಮನೆಯಂಗಣದಲ್ಲಿ ಗೆದ್ದ ಹರುಷ

By Isl Media
ISL: Sougou’s brace powers Mumbai to first home win

ಮುಂಬೈ, ಡಿಸೆಂಬರ್ 30: ಹೈದರಾಬಾದ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮನೆಯಂಗಣದಲ್ಲಿ ಮೊದಲ ಜಯ ಗಳಿಸಿ ಹೊಸ ವರುಷಕ್ಕೆ ಜಯದ ಮುನ್ನುಡಿ ಬರೆಯಿತಲ್ಲದೆ, ನಾಲ್ಕನೇ ಸ್ಥಾನ ತಲುಪಿತು. ಮೌಡೌ ಸೊಗೌ (6 ಮತ್ತು 78ನೇ ನಿಮಿಷ) ಎರಡು ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಹೈದರಾಬಾದ್ ಪರ ಬೊಬೊ (81ನೇ ನಿಮಿಷ) ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆಯಾಯಿತು. ಈಗ ಮುಂಬೈ ಹಾಗೂ ಬೆಂಗಳೂರು ತಂಡಗಳು ಅಂಕಪಟ್ಟಿಯಲ್ಲಿ ಸಮಬಲ ಸಾಧಿಸಿದ್ದು, ಮುಂಬೈ ನಾಲ್ಕನೇ ಸ್ಥಾನಕ್ಕೆ ತಲುಪಿತು.

ಮುಂಬೈಗೆ ಮುನ್ನಡೆ
ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲಿಯೇ ಮುಂಬೈ ಸಿತಿ ತಂಡಕ್ಕೆ ಮೊಡೌ ಸೊಗೌ ಅವರು ಗಳಿಸಿದ ಗೋಲಿನಿಂದ 1-0 ಗೋಲಿನಿಂದ ಮೇಲುಗೈ ಸಾಧಿಸಿತು. 23ನೇ ನಿಮಿಷದಲ್ಲಿ ಹೈದರಾಬಾದ್ ತಂಡಕ್ಕೆ ಸಮಬನಗೊಳಿಸುವ ಅವಕಾಶ ಸಿಕ್ಕಿತು. ಆದರೆ ಬೊಬೊ ಅವರು ಮಾಡಿದ ಹೆಡರ್ ಗೋಲ್ ಬಾಕ್ಸ್ ನ ಹೊರಗಿನಿಂದ ಸಾಗಿತ್ತು. 33ನೇ ನಿಮಿಷದಲ್ಲೂ ಹೈದರಾಬಾದ್ ತಂಡಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿತ್ತು. ಆದರೆ ರೋಹಿತ್ ಕುಮಾರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾದರು. 42ನೇ ನಿಮಿಷದಲ್ಲಿ ಆಶಿಶ್ ರಾಯ್ ಗೆ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಎರಡು ಬಾರಿ ಗೋಲು ಬಾಕ್ಸ್ ಗೆ ಗುರಿ ಇಟ್ಟ ಚೆಂಡನ್ನು ಕಮಲ್ಜಿತ್ ಸಿಂಗ್ ತಡೆದು ತಂಡಕ್ಕೆ ನೆರವಾದರು.

ISL: Sougou’s brace powers Mumbai to first home win

ಮುಂಬೈಗೆ ನಾಲ್ಕನೇ ಸ್ಥಾನದ ಗುರಿ
2019ರ ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ತಂಡಗಳು ಮುಖಾಮುಖಿಯಾದವು. ಹೊಸ ವರುಷದಲ್ಲಿ ಜಯ ಗಳಿಸಿ ನಾಲ್ಕನೇ ಸ್ಥಾನಕ್ಕೆ ತಲಪುವ ಗುರಿಯೊಂದಿಗೆ ಮುಂಬೈ ತಂಡ ಅಂಗಣಕ್ಕಿಳಿದರೆ, ಹೈದರಾಬಾದ್ ಜಯದ ನಿರೀಕ್ಷಯೊಂದಿಗೆ ಹೆಜ್ಜೆ ಹಾಕಿತು. 9ನೇ ಸ್ಥಾನದಲ್ಲಿರುವ ಹೈದರಾಬಾದ್ ಗೆ ಕೇವನ ಜಯ ಗಳಿಸಿದರೆ ಸಾಲದು ಗೋಲುಗಳ ಅಂತರದಲ್ಲೂ ಅಂದರೆ 7 ಗೋಲಗಳ ಮುನ್ನಡೆಯೊಂದಿಗೆ ಜ ಯ ಗಳಿಸಬೇಕಾಗಿದೆ. ಇದು ಅಸಾಧ್ಯವಾದುದು. ಹೈದರಾಬಾದ್ ತಂಡವು ಅಂಗಣದ ಎರಡೂ ವಿಭಾಗಗಳಲ್ಲಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಆಡಿರುವ 9 ಪಂದ್ಯಗಳಲ್ಲಿ 19 ಗೋಲುಗಳನ್ನು ನೀಡಿರುವುದೇ ಇದಕ್ಕೆ ಸಾಕ್ಷಿ. ಕಳೆದ ಎರಡು ಪಂದ್ಯಗಳಲ್ಲಿ ಬೊಬೊ 3 ಗೋಲುಗಳನ್ನು ಗಳಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಮುಂಬೈ ಸಿಟಿ ತಂಡ ಇಲ್ಲಿ ಜಯ ಗಳಿಸಿದರೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲಪುವುದಲ್ಲದೆ ಬೆಂಗಳೂರು ಎಫ್ ಸಿ ಜತೆ ಅಂಕ ಹಂಚಿಕೊಳ್ಳಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಮುಂಬೈ ತಂಡ ಅಂತಿಮ ಕ್ಷಣದಲ್ಲಿ ಗೋಲು ಗಳಿಸಿ ಜಯ ಸಾಧಿಸಿತ್ತು. ಪೌಲೊ ಮಚಾಡೋ ಹಾಗೂ ರೌಲಿನ್ ಬೋರ್ಗಸ್ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಒಂದು ತಂಡ ಮನೆಯಿಂದ ಹೊರಗಡೆ ಒಂದೂ ಅಂಕ ಗಳಿಸಿಲ್ಲ, ಅದೇ ರೀತಿ ಮುಂಬೈ ಸಿಟಿ ತಂಡ ಕೂಡ ಮನೆಯಂಗಣದಲ್ಲಿ ಜಯ ಗಳಿಸಿಲ್ಲ.

Story first published: Monday, December 30, 2019, 14:16 [IST]
Other articles published on Dec 30, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+