Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಪ್ಲೇ ಆಫ್ ಗಾಗಿ ಚೆನ್ನೈಯಿನ್-ಜೆಮ್ಷೆಡ್ಪುರ ಮಧ್ಯೆ ಸೆಣಸಾಟ

The race for the playoff spots is set to get hotter as Chennaiyin FC host Jamshedpur FC at the Jawaharlal Nehru stadium here on Thursday.

ಚೆನ್ನೈ, ಜನವರಿ 23: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗ ಸೆಮಿಫೈನಲ್ ಸ್ಥಾನಕ್ಕಾಗಿ ಹಣಾಹಣಿ ತೀವ್ರಗೊಂಡಿದೆ, ಗುರುವಾರ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಚೆನ್ನೈಯಿನ್ ಎಫ್ ಸಿ ಹಾಗೂ ಜೆಮ್ಷೆಟ್ಪುರ ತಂಡಗಳು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಎರಡು ತಂಡಗಳ ನಡುವಿನ ಅಂತರ ಕಡಿಮೆ ಇರುವುದರಿಂದ ಇದು ಇತ್ತಂಡಗಳಿಗೆ ಅತ್ಯಂತ ಪ್ರಮುಖ ಪಂದ್ಯವೆನಿಸಲಿದೆ.

15 ಅಂಕಗಳೊಂದಿಗೆ ಚೆನ್ನೈಯಿನ್ ಏಳನೇ ಸ್ಥಾನದಲ್ಲಿದ್ದು, ಇದಕ್ಕೂ ಮುನ್ನ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿತ್ತು. ಸತತ ಆರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಜೆಮ್ಷೆಡ್ಪುರ ಎಫ್ ಸಿ, 33-2 ಗೋಲುಗಳ ಅಂತರದಲ್ಲಿ ಕೇರಳ ಬ್ನಾಸ್ಟರ್ಸ್ ವಿರರುದ್ಧ ಜಯ ಗಳಿಸಿದ ನಂತರ ನಾಲ್ಕರ ಹಂತ ತಲುಪುವತ್ತ ಆಸಕ್ತಿಯಿಂದ ಹೆಜ್ಜೆ ಇಟ್ಟಿತು. ಇನ್ನೊಂದೆಡೆ ಜೆಮ್ಷೆಡ್ಪುರ 3-2 ಗೋಲುಗಳ ಅಂತರದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿ ಜಯದ ಲಯ ಕಂಡುಕೊಂಡಿತು.

''ಮೂರು ತಂಡಗಳು ಪ್ನೇ ಆಫ್ ನ ಮೊದಲ ಮೂರು ಸ್ಥಾನವನ್ನು ತಮ್ಮದಾಗಿಸಿಕೊಳ್ಳುವುದು ಸ್ಪಷ್ಟವಾಗಿದೆ, ನಮಗೆ ಒಂದು ಸ್ಥಾನದ ಅವಕಾಶ ಇದೆ. ಇದರಲ್ಲಿ ಮೂರು ತಂಡಗಳು ನಿಜವಾದ ಸ್ಪರ್ಧೆಯಲ್ಲಿವೆ. ಇದು ನಮ್ಮ ಪಾಲಿಗೆ ಫೈನಲ್ ಪಂದ್ಯ,'' ಎಂದು ಜೆಮ್ಷೆಟ್ಪುರ ಎಫ್ ಸಿ ಕೋಚ್ ಆಂಟೋನಿಯೋ ಇರಿಯಾಂಡೋ ಹೇಳಿದ್ದಾರೆ.

ISL: Surging Chennaiyin host revitalised Jamshedpur in the chase for playoffs

ಮನೆಯಂಗಣದಲ್ಲಿ ಚೆನ್ನೈಯಿನ್ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರ್ಪಡಿಸುವ ತವಕದಲ್ಲಿದೆ. ಕಳೆದ ಐದು ಪಂದ್ಯಗಳಲ್ಲಿ ಚೆನ್ನೈಯಿನ್ ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಜತೆಯಲ್ಲಿ 12 ಗೋಲು ಗಳಿಸಿದೆ. ಜೆಮ್ಷೆಡ್ಪುರ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಕಳೆದ ಋತುವಿನಿಂದ ಉಕ್ಕಿನ ತಂಡ ಮನೆಯಂಗಣದ ಹೊರಗಡೆ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ.

ಓವೆನ್ ಕೊಯ್ಲ್ ಆಗಮನದ ನಂತರ ಮರಿನಾ ಮಚಾನ್ಸ್ ಅತ್ಯಂತ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ನೂತನ ಕೋಚ್ ಆಗಮನದ ನಂತರ ಚೆನ್ನೈಯಿನ್ ತಂಡ 12 ಗೋಲುಗಳನ್ನು ಗಳಿಸಿದದ್ದು, ಕೇವಲ ಆರು ಪಂದ್ಯಗಳಲ್ಲಿ. ರಫಾಯಲ್ ಕ್ರಿವೆಲ್ಲಾರೊ ಮತ್ತು ನಿರಿಜುಸ್ ವಾಸ್ಕಿಸ್ ಅವರ ಪಾತ್ರ ಪ್ರಮುಖವಾಗಿದೆ.

''ಜೆಮ್ಷೆಡ್ಪುರ ತಂಡ ಮನೋಬಲವನ್ನು ಹೆಚ್ಚಿಸುವ ಜಯದೊಂದಿಗೆ ಇಲ್ಲಿಗೆ ಆಗಮಿಸಿವೆ. ಕೇರಳ ಬ್ನಾಸ್ಟರ್ಸ್ ವಿರುದ್ಧ ಯಶಸ್ಸು ಕಂಡಿದೆ. ನಾವು ಗೋಲು ಗಳಿಸಬೇಕಾಗಿರುವುದು ಪ್ರಮುಖ ಅಂಶ. ನಾವು ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಸಾಬೀತು ಮಾಡಿದ್ದೇವೆ. ಆದರೆ ನಾವು ಒಂದಿಷ್ಟು ಹೊಂದಾಣಿಕೆಯನ್ನು ಕಾಯ್ದುಕೊಳ್ಳಬೇಕಾಗಿದೆ,'' ಎಂದು ಕೊಯ್ಲ್ ಹೇಳಿದ್ದಾರೆ.

''ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ನಮಗೆ ಗೋಲು ಗಳಿಸಲು ಉತ್ತಮ ಅವಕಾಶಗಳಿದ್ದಿತ್ತು, ಆದರೆ ನಾವು ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದೆವು. ನಾವು ನಮ್ಮ ಗೋಲು ಗಳಿಕೆಯಲ್ಲಿ ಸುಧಾರಣೆ ಕಂಡುಕೊಂಡಿದ್ದೇವೆ. ಆದರೆ ಇನ್ನೂ ಉತ್ತಮಪಡಿಸಿಕೊಳ್ಳಬೇಕಿದೆ, ಗೋಲ್ ಬಾಕ್ಸ್ ನ ಮುಂಭಾಗದಲ್ಲಿ ನಾವು ಇನ್ನೂ ಉತ್ತಮವಾಗಿ ಆಡಬೇಕಿದೆ,'' ಎಂದು ಅವರು ಹೇಳಿದರು.

''ಚೆನ್ನೈಯಿನ್ ತಂಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ರಮಣಕಾರಿ ಆಟಗಾರರಿದ್ದಾರೆ. ಅವರು ಕೋಚ್ ಬದಾಯಿಸಿದ ನಂತರ ಆಟದ ಶೈಲಿಯೇ ಬದಲಾಗಿತ್ತು. ತಿರಿ ಡಿಫೆನ್ಸ್ ವಿಭಾಗದಲ್ಲಿ ಇಲ್ಲ ಎಂಬುದು ನಮಗೆ ಗೊತ್ತು. ನಾವು ಆಯ್ಕೆ ಮಾಡುವ ಆಟಗಾರರು ಉತ್ತಮ ಪ್ರದರ್ಶನ ನೀಡಬಲ್ಲರು ಎಂಬ ಆತ್ಮವಿಶ್ವಾಸವಿದೆ,'' ಎಂದು ಇರಿಯಾಂಡೋ ಹೇಳಿದ್ದಾರೆ.

Story first published: Wednesday, January 22, 2020, 23:55 [IST]
Other articles published on Jan 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+