Euro 2020: ಆರಂಭಿಕ ಪಂದ್ಯದಲ್ಲಿ ಟರ್ಕಿ ವಿರುದ್ಧ ಸುಲಭವಾಗಿ ಗೆದ್ದ ಇಟಲಿ

ರೋಮ್: ರೋಮ್‌ನ ಸ್ಟೇಡಿಯೋ ಒಲಿಂಪಿಕೋ ಅರೆನಾದಲ್ಲಿ ಶನಿವಾರ (ಜೂನ್ 12) ನಡೆದ ಯೂರೋ 2020 ಉದ್ಘಾಟನಾ ಪಂದ್ಯದಲ್ಲಿ ಟರ್ಕಿ ವಿರುದ್ಧ ಇಟಲಿ 3-0ಯಿಂದ ಗೆದ್ದಿದೆ. ಮೆರಿಹ್ ಡೆಮಿರಲ್, ಸಿರೋ ಇಮ್ಮೊಬೈಲ್ ಮತ್ತು ಲೊರೆಂಜೊ ಇನ್ಸೈನ್ ಇಟಲಿ ಗೆಲುವಿನ ರುವಾರಿಗಳೆನಿಸಿದರು.
ವಿಶೇಷವೆಂದರೆ ಪಂದ್ಯದಲ್ಲಿ ದಾಖಲಾದ ಮೂರೂ ಗೋಲ್‌ಗಳೂ ದ್ವಿತೀಯಾರ್ಧದಲ್ಲಿ ಸಿಡಿದಿದ್ದು. ಅದರಲ್ಲೂ ಮೊದಲನೇ ಗೋಲ್ ಅಂದರೆ 53ನೇ ನಿಮಿಷದಲ್ಲಿ ಟರ್ಕಿಯ ಮೆರಿಹ್ ಡೆಮಿರಲ್ ತಾನೇ ಎದುರಾಳಿ ತಂಡಕ್ಕೆ ಮೊದಲ ಗೋಲ್ ಬಾರಿಸಿ ತಂಡದ ಆರಂಭಿಕ ಹಿನ್ನಡೆಗೆ ಕಾರಣರಾದರು. ಅದಾಗಿ ಸಿರೋ ಇಮ್ಮೊಬೈಲ್ 66ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ಮುನ್ನಡೆ ಅಂತರ ಹೆಚ್ಚಿಸಿಕೊಂಡರು.
ಕೊನೇ ಕ್ಷಣದಲ್ಲಿ ಅಂದರೆ 79ನೇ ನಿಮಿಷದಲ್ಲಿ ಲೊರೆಂಜೊ ಇನ್ಸೈನ್ ಮೂರನೇ ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಗ್ರೂಪ್ 'ಎ'ಯಲ್ಲಿರುವ ಇಟಲಿ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಸೋತ ಟರ್ಕಿ ಕೊನೇ ಸ್ಥಾನದಲ್ಲಿದೆ.
ಗ್ರೂಪ್ 'ಎ'ಯಲ್ಲಿ ಇಟಲಿ, ಟರ್ಕಿಯಲ್ಲದೆ ಸ್ವಿಟ್ಜರ್ಲ್ಯಾಂಡ್ ಮತ್ತು ವೇಲ್ಸ್ ರಾಷ್ಟ್ರಗಳಿವೆ. ಇವತ್ತು ಸಂಜೆ 6.30 PMಗೆ ವೇಲ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ತಂಡಗಳ ಮಧ್ಯೆ ದ್ವಿತೀಯ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications