ಫೀಫಾ ವಿಶ್ವಕಪ್ 2018: 2-2ರಿಂದ ಜಪಾನ್-ಸೆನೆಗಲ್ ಪಂದ್ಯ ಡ್ರಾ


ಮಾಸ್ಕೋ, ಜೂ. 24: ರಷ್ಯಾದ ಎಕಟೆರಿನ್ಬರ್ಗ್ ಅರೆನಾದಲ್ಲಿ ಫೀಫಾ ವಿಶ್ವಕಪ್ ಎಚ್ ಗ್ರೂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ತಂಡಗಳು 2-2ರ ಸಮಬಲ ಸಾಧಿಸಿವೆ. ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳು ತಲಾ ಒಂದೊಂದು ಮತ್ತು ದ್ವಿತೀಯಾರ್ಧದಲ್ಲೂ ಒಂದೊಂದು ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದವು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಪಂದ್ಯದ 11ನೇ ನಿಮಿಷದಲ್ಲಿ ಸೆನೆಗಲ್ ನ ಸಾಡಿಯೋ ಮಾನೆ ಮೊದಲ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟಿದ್ದರು. ಆದರೆ 34ನೇ ನಿಮಿಷದಲ್ಲಿ ಜಪಾನ್ ನ ಟಕಾಶಿ ಇನೂಯಿ ಅವರು ಗೋಲ್ ಬಾರಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು.
ದ್ವಿತೀಯಾರ್ಧದ 71ನೇ ನಿಮಿಷದಲ್ಲಿ ಸೆನೆಗಲ್ ನ ಮೌಸಾ ವಾಗ್ ಗೋಲ್ ಹೊಡೆದು ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು. ಆದರೆ 78ನೇ ನಿಮಿಷದಲ್ಲಿ ಜಪಾನ್ ನ ಹೀಸುಕೆ ಹೊಂಡಾ ಗೋಲ್ ದಾಖಲಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದ ಸೆನೆಗಲ್ ತಂಡವನ್ನು ದಂಗುಬಡಿಸಿದರು.
ಜಪಾನ್ ಪರ ಈಜಿ ಕವಾಶಿಮಾ, ಜೆನ್ ಶೋಜಿ, ಯುಟೊ ನಾಗೊಟೊಮೊ, ಹಿರೋಕಿ ಸಕೈ, ಮಾಯಾ ಯೋಶಿಡಾ, ಗಕು ಶಿಬಾಸಕಿ, ಜೆಂಕಿ ಹರಗುಚಿ, ಶಿಂಜಿ ಕಾಗಾವಾ, ತಕಾಶಿ ಇನುಯಿ, ಮ್ಯಾಕೋಟೋ ಹಸೇಬ್ (ಕ್ಯಾಪ್ಟನ್), ಯುಯಾ ಓಸಕೊ. ಕೋಚ್: ಅಕಿರಾ ನಿಶಿನೋ (ಜೆಪಿಎನ್) ಕಣಕ್ಕಿಳಿದಿದ್ದರು.
ಸೆನೆಗಲ್ ನಿಂದ ಖಡಿಮ್ ನಿಡಿಯಾಯ್, ಮೌಸಾ ವ್ಯಾಗ್ಗ್, ಕಾಲಿಡೋ ಕೌಲ್ಬಿಲಿ, ಸಲೀಫ್ ಸೇನ್, ಯೂಸುಸೋಫ್ ಸಬಾಲಿ, ಆಲ್ಫ್ರೆಡ್ ನಿಡಿಯಾಯ್, ಇಡ್ರಿಸ್ಸಾ ಗುಯೆಯ್, ಸೈಡಿಯೊ ಮಾನೆ (ಕ್ಯಾಪ್ಟನ್), ಇಸ್ಮಾಯಿಲಾ ಸರ್ರ್, ಪ್ಯಾಪ್ ನಡಿಯಾಯೆ, ಮೊಬೇ ನಿಯಾಂಗ್. ತರಬೇತುದಾರ: ಅಲಿಯು ಸಿಸ್ಸೆ (SEN) ಪಂದ್ಯವನ್ನಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications