For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜೆಮ್ಷೆಡ್ಪುರಕ್ಕೆ ಜಯದ ಉಡುಗೊರೆ ನೀಡಿದ ಕೇರಳ

 Late Kerala shocker hands Jamshedpur welcome win

ಜೆಮ್ಷೆಡ್ಪುರ, ಜನವರಿ, 19: ಬಾರ್ಥಲೋಮ್ಯೋ ಒಗ್ಬಚೆ ನೀಡಿದ ಉಡುಗೊರೆ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ಗೆಲ್ಲಬಬಹುದಾಗಿದ್ದ ಪಂದ್ಯದಲ್ಲಿ ಸೋಲಿನ ಆಃಘಾತ ಕಂಡಿದೆ. ಅಕೋಸ್ಟಾ ರಿವೇರಾ (39ನೇ ನಿಮಿಷ), ಸರ್ಗಿಯೋ ಕ್ಯಾಸ್ಟಲ್ (75ನೇ ನಿಮಿಷ) ಹಾಗೂ ಕೇರಳ ಬ್ಲಾಸ್ಟರ್ಸ್ ತಂಡದ ನಾಯಕ ಬಾರ್ಥಲೋಮ್ಯೋ ಒಗ್ಬಚೆ (87ನೇ ನಿಮಿಷ) ನೀಡಿದ ಉಡುಗೊರೆ ಗೋಲುಗಳ ನೆರವಿನಿಂದ ಜೆಮ್ಷೆಡದಪುರ ಎಫ್ ಸಿ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಕೇರಳದ ಪರ ಮೆಸ್ಸಿ ಬೌಲಿ (11ನೇ ನಿಮಿಷ) ಹಾಗೂ ಒಗ್ಬಚೆ (56ನೇ ನಿಮಿಷ) ಗಳಿಸಿದ ಗೋಲಗ ಅದೃಷ್ಟ ತರಲಿಲ್ಲ. ಈ ಜಯದೊಂದಿಗೆ ಜೆಮ್ಷೆಡ್ಪುರ ಎಫ್ ಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿಯಿತು. ಆ ಮೂಲಕ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಲು ತಾನೂ ಸ್ಪರ್ಧೆಯಲ್ಲಿ ಇರುವುದಾಗಿ ಸ್ಪಷ್ಟಪಡಿಸಿತು.

ಸಮಬಲದ ಪ್ರಥಮಾರ್ಧ;

ಕೇರಳ ಬ್ಲಾಸ್ಟರ್ಸ್ ತಂಡ ಜೆಮ್ಷೆಡ್ಪುರ ವಿರುದ್ಧ ನಿರೀಕ್ಷೆಯಂತೆ ಆರಂಭದಲ್ಲೇ ಮೇಲುಗೈ ಸಾಧಿಸಿತು, 11ನೇ ನಿಮಿಷದಲ್ಲಿ ಮೆಸ್ಸಿ ಬೌಲಿ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ಮುನ್ನಡೆ ಕಂಡುಕೊಂಡಿತು. ಸುಬ್ರತಾ ಪಾಲ್ ಮಾಡಿದ ಪ್ರಮಾದ ಕೇರಳ ತಂಡದ ಮುನ್ನಡೆಗೆ ಕಾರಣವಾಯಿತು. ತಿರಿ ಗಾಯಗೊಂಡು ಅಂಗಣದಿಂದ ಹೊರ ನಡೆದಿದ್ದು ಟಾಟಾ ಪಡೆಯ ಶಕ್ತಿಯ ಹಿನ್ನಡೆಗೆ ಕಾರಣವಾಯಿತು. ಕೇರಳಕ್ಕೆ ಎರಡನೇ ಗೋಲು ಗಳಿಸುವ ಅವಕಾಶ ಸಿಕ್ಕರೂ ಯಶಸ್ಸು ಸಿಗಲಿಲ್ಲ. 39ನೇ ನಿಮಿಷದಲ್ಲಿ ನೋಯ್ ಅಕೋಸ್ಟಾ ರಿವೇರಾ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು.

ಜಯವೊಂದೇ ಮಂತ್ರ:

ಇತ್ತೀಚಿನ ಪಂದ್ಯಗಳಲ್ಲಿ ಜಯದ ಹೆಜ್ಜೆ ಇಟ್ಟಿರುವ ಕೇರಳ ಬ್ಲಾಸ್ಟರ್ಸ್ ತಂಡ ಮೂರು ಅಂಕ ಗಳಿಸಿ ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಗಳಿಸುವ ಉದ್ದೇಶದಿಂದ ಜೆಮ್ಷೆಡ್ಪುರ ತಂಡದ ವಿರುದ್ಧ ಹೋರಾಟಕ್ಕೆ ಇಳಿಯಿತು. ಎಟಿಕೆ ವಿರುದ್ಧ ಕಂಡ ಜಯ ಕೇರಳದ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಒಗ್ಬಚೆ ಹಾಗೂ ಬೌಲಿ ಕೇರಳ ತಂಡದ ಜಯದಲ್ಲಿ ಇದುವರೆಗೂ ಪ್ರಮುಖ ಪಾತ್ರವಹಿಸಿದ್ದಾರೆ. ಜೆಮ್ಷೆಡ್ಪುರ ತಂಡಕ್ಕೂ ಇಲ್ಲಿ ಜಯದ ಅನಿವಾರ್ಯತೆ ಇತೆ. ಅಲ್ಲದೆ ಮನೆಯಂಗಣದಲ್ಲಿ ತಂಡ ಒತ್ತಡದಲ್ಲಿರುವುದು ಸಹಜ.

ಹಿಂದಿನ ಆರು ಪಂದ್ಯಗಳಲ್ಲಿ ಜಯ ಕಾಣದೆ, ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಜೆಮ್ಷೆಡ್ಪುರ ತಂಡ ಈಗ ಸಂಕಷ್ಟದ ಸ್ಥಿತಿ ತಲುಪಿದೆ. ಅಂತಿಮ ನಾಲ್ಕರ ಹಂತ ತಲುಪಲು ಈಗ ಉಳಿದಿರುವ ಪಂದ್ಯಗಳಲ್ಲಿ ಜಯ ಕಾಣಬೇಕಾದ ಅನಿವಾರ್ಯತೆ ಇದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದರೆ ಮಾತ್ರ ಅಂತಿಮ ನಾಲ್ಕರ ಹಂತ ತಲಪುವ ಸ್ಪರ್ಧೆಯಲ್ಲಿರುವ ಇತರ ತಂಡಗಳೊಂದಿಗೆ ಮುಂದುವರಿಯಲು ಸಾದ್ಯವಾಗುತ್ತದೆ. 13 ಅಂಕಗಳನ್ನು ಗಳಿಸಿರುವ ಜೆಮ್ಷೆಡ್ಪುರ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ತಂಡ ಟಾಟಾ ಪಡೆಗಿಂತ ಒಂದು ಅಂಕ ಮೇಲಿದೆ. ಆದರೆ ಇಲ್ಲಿಯ ಫಲಿತಾಂಶ ಇತ್ತಂಡಗಳ ಮುಂದಿನ ನಡೆಯ ಮೇಲೆ ಪರಿಣಾಮ ಬೀರಲಿದೆ. ಜೆಮ್ಷೆಡ್ಪುರ ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಿತ್ತು.

Story first published: Monday, January 20, 2020, 9:57 [IST]
Other articles published on Jan 20, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+