ಲಂಡನ್, ಜೂನ್ 20: ಫೀಫಾ ವಿಶ್ವಕಪ್ 2018 ಸಂದರ್ಭದಲ್ಲೇ ಗೋಲ್ ಕೀಪರ್ ಗಳಿಗೆ ಬೇಡಿಕೆ ಹುಟ್ಟುಕೊಂಡಿದೆ. ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಪ್ರಮುಖ ತಂಡ ಆರ್ಸೆನಲ್ ದೊಡ್ಡ ಡೀಲ್ ಸಾಧಿಸಿದೆ. ಜರ್ಮನಿಯ ಬಾಯಾ ಲೆವರ್ಕುಸನ್ ನ ಗೋಲ್ ಕೀಪರ್ ಬರ್ನ್ ಲೆನೋ ವನ್ನು ತನ್ನ ತಂಡಕ್ಕೆ ಆರ್ಸೆನಲ್ ಸೇರಿಸಿಕೊಂಡಿದೆ.
ಮುಂದಿನ ಇಪಿಎಲ್ ಸೀಸನ್ ಶುರುವಾಗುವುದಕ್ಕೂ ಮುನ್ನ ತಂಡದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಮ್ಯಾನೇಜರ್ ಗಳು ತೊಡಗಿದ್ದಾರೆ. ಸ್ಟೀಫನ್ ಲಿಶ್ಟೇನರ್ ಖರೀದಿ ನಂತರ ಲೆನೋ ಗೆ ಭಾರಿ ಮೊತ್ತ ನೀಡಿ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ.
ಫೀಫಾ ವಿಶ್ವಕಪ್ 2018 : ಎಫ್ ಸಿ ಬಾರ್ಸಿಲೋನಾ ಆಟಗಾರರ ಸಾಧನೆ!
ಮೂಲಗಳ ಪ್ರಕಾರ ಲೆನೋಗೆ 22 ಮಿಲಿಯನ್ ಪೌಂಡ್ ನೀಡಲಾಗುತ್ತಿದೆ. ಈ ಮೂಲಕ ಟಾಪ್ 10 ದುಬಾರಿ ಗೋಲ್ ಕೀಪರ್ ಗಳ ಪಟ್ಟಿಯಲ್ಲಿ ಲೆನೊ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ, ಟ್ರಾನ್ಸ್ ಫರ್ ಮೊತ್ತ ಇನ್ನೂ ತಿಳಿದಿಲ್ಲ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಟಾಪ್ 10 ದುಬಾರಿ ಗೋಲ್ ಕೀಪರ್ ಗಳ ಪಟ್ಟಿ ಹೀಗಿದೆ:
1. ಗಿನ್ಲುಗಿ ಬುಫನ್ : ಪರ್ಮಾದಿಂದ ಯುವೆಂಟಸ್ (51.6 ಮಿಲಿಯನ್ ಪೌಂಡ್)
2. ಎಡರ್ಸನ್ : ಬೆನೆಫಿಕಾದಿಂದ ಮ್ಯಾಂಚೆಸ್ಟರ್ ಸಿಟಿ (40 ಮಿಲಿಯನ್ ಪೌಂಡ್)
3. ಜೋರ್ಡನ್ ಪಿಕ್ ಫೋರ್ಡ್ : ಸಂಡರ್ ಲ್ಯಾಂಡ್ ನಿಂದ ಎವರ್ಟನ್ (28.5 ಮಿಲಿಯನ್ ಪೌಂಡ್)
4. ಫ್ರಾನ್ಸೆಸ್ಕೋ ಟೊಲ್ಡೋ : ಫಾರೆಂಟಿನಾದಿಂದ ಇಂಟರ್ (28.4 ಮಿಲಿಯನ್ ಪೌಂಡ್)
5. ಮ್ಯಾನುಯಲ್ ನ್ಯೂಯಾ : ಶಿಲ್ಕೆಯಿಂದ ಬಯಾ ಮ್ಯೂನಿಚ್ ( 24 ಮಿಲಿಯನ್ ಪೌಂಡ್)
6. ಡೇವಿಡ್ ಡೀ ಗಿಯಾ: ಅಟ್ಲೆಟಿಕೋ ಮ್ಯಾಡ್ರಿಡ್ ನಿಂದ ಮ್ಯಾಂಚೆಸ್ಟರ್ ಯುನೈಟೆಡ್ (22 ಮಿಲಿಯನ್ ಪೌಂಡ್)
7.ಬರ್ನ್ ಲೆನೊ : ಬಯಾ ಲೆವರ್ಕುಸನ್ ನಿಂದ ಅರ್ಸೆನಲ್ (22 ಮಿಲಿಯನ್ ಪೌಂಡ್)
8. ಆಂಜೆಲೋ ಪೆರುಜ್ಜಿ : ಇಂಟರ್ ನಿಂದ ಲಾಜಿಯೋ (20.6 ಮಿಲಿಯನ್ ಪೌಂಡ್)
9. ಸೆಬಾಸ್ಟಿಯನ್ ಫ್ರೆ : ಇಂಟರ್ ನಿಂದ ಪರ್ಮಾ (20.6 ಮಿಲಿಯನ್ ಪೌಂಡ್)
10. ಸಮಿರ್ ಹ್ಯಾಂಡಾನೊವಿಕ್ : ಯುಡಿನಿಸೆ ನಿಂದ ಇಂಟರ್ (19 ಮಿಲಿಯನ್ ಪೌಂಡ್)