Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lionel Messi: ಮಿರೋಸ್ಲಾವ್ ಕ್ಲೋಸ್ ದಾಖಲೆ ಧೂಳೀಪಟ; ಫಿಫಾ ವಿಶ್ವಕಪ್‌ನಲ್ಲಿ 17 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಮೆಸ್ಸಿ

ವಿಶ್ವ ಫುಟ್ಬಾಲ್‌ ಲೋಕದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಇತಿಹಾಸ ನಿರ್ಮಿಸಿದ್ದಾರೆ. ಇವರು ಆಸ್ಟ್ರಿಯಾ ವಿರುದ್ಧ ಭರ್ಜರಿ ಗೋಲು ಬಾರಿಸಿ ದೊಡ್ಡ ದಾಖಲೆಗೆ ತಮ್ಮ ಹೆಸರು ನಮೂದಿಸಿದರು. ಇವರು 38ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಮೆಸ್ಸಿ, ಗೋಲು ದಾಖಲಿಸಿ, ಫುಟ್ಬಾಲ್‌ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಲಿಯೋನೆಲ್‌ ಮೆಸ್ಸಿ ಮೊದಲಾವಧಿಯ 9ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಮಿಸ್‌ ಮಾಡಿಕೊಂಡರು. ಇದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನು ಮೂಡಿಸಿತು. ಈ ಪ್ರಯತ್ನದಲ್ಲಿ ಮೆಸ್ಸಿ ಗೋಲು ಬಾರಿಸಿದ್ದರೆ ಮೆಸ್ಸಿ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದರು. ಆದರೆ ಈ ಅವಕಾಶವನ್ನು ಅವರು ಬಳಸಿಕೊಳ್ಳುವಲ್ಲಿ ಎಡವಿದರು.

Lionel Messi

ಪೆನಾಲ್ಟಿ ಗೋಲು ಬಾರಿಸುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದ ಮೆಸ್ಸಿ, ಈ ಒತ್ತಡವನ್ನು ಮೆಟ್ಟಿನಿಂತರು. 38ನೇ ನಿಮಿಷದಲ್ಲಿ ಸಹ ಆಟಗಾರ ಗೋಲು ಪೆಟ್ಟಿಗೆಯ ಬಲಭಾಗದಿಂದ ನೀಡಿದ ಪಾಸ್‌ನ ಸಂಪೂರ್ಣ ಲಾಭ ಪಡೆದ ಮೆಸ್ಸಿ ಅಬ್ಬರಿಸಿದರು. ಇವರು ಆಸ್ಟ್ರಿಯಾ ತಂಡದ ರಕ್ಷಣಾ ಆಟಗಾರರು ಹಾಗೂ ಗೋಲ್‌ ಕೀಪರ್ ಅವರನ್ನು ವಂಚಿಸಿ ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು.

ಐತಿಹಾಸಿಕ ಸಾಧನೆ ಮಾಡಿದ ಮೆಸ್ಸಿ

ಈ ಐತಿಹಾಸಿಕ ಗೋಲಿನೊಂದಿಗೆ ಮೆಸ್ಸಿ ವಿಶ್ವಕಪ್‌ನಲ್ಲಿ ಒಟ್ಟು 17 ಗೋಲುಗಳನ್ನು ಪೂರೈಸಿದರು. ಈ ಮೂಲಕ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ತಮ್ಮ ಅದ್ಭುತ ಡ್ರಿಬ್ಲಿಂಗ್ ಕೌಶಲ್ಯ ಮತ್ತು ಸ್ಥಿರ ಪ್ರದರ್ಶನದಿಂದ ಜಾಗತಿಕ ಫುಟ್ಬಾಲ್‌ನಲ್ಲಿ ಮೆಸ್ಸಿ ಅಭಿಮಾನಿಗಳನ್ನು ರಂಜಿಸಿದರು. ಈ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಅವರ 16 ಗೋಲುಗಳ ಸಾರ್ವಕಾಲಿಕ ದಾಖಲೆಯನ್ನು ಮುರಿದು, ಪುರುಷರ ಫುಟ್ಬಾಲ್ ಇತಿಹಾಸದಲ್ಲೇ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹಿರಿಯ ಹ್ಯಾಟ್ರಿಕ್ ಹೀರೋ: ಇಲ್ಲಿದೆ ಮೆಸ್ಸಿ ನಿರ್ಮಿಸಿದ ಟಾಪ್‌ 5 ದಾಖಲೆಗಳು

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹಿರಿಯ ಹ್ಯಾಟ್ರಿಕ್ ಹೀರೋ: ಇಲ್ಲಿದೆ ಮೆಸ್ಸಿ ನಿರ್ಮಿಸಿದ ಟಾಪ್‌ 5 ದಾಖಲೆಗಳು

ಇನ್ನು ಜಿ ಗುಂಪಿನ ಮೊದಲ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರು ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದರು. ಈ ಪಂದ್ಯದಲ್ಲಿ ಸತತ ಮೂರು ಗೋಲುಗಳನ್ನು ಬಾರಿಸುವ ಮೂಲಕ ಮೆಸ್ಸಿ ವಿಶ್ವಕಪ್‌ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಜರ್ಮನಿ ತಂಡದ ಸ್ಟಾರ್ ಆಟಗಾರ ಮಿರೋಸ್ಲಾವ್‌ ಕ್ಲೋಸ್‌ ಸಾಧನೆಯ ಸಮಕ್ಕೆ ನಿಂತಿದ್ದರು. ಇವರು ಎರಡನೇ ಪಂದ್ಯದಲ್ಲಿ ಒಂದು ಗೋಲು ಬಾರಿಸುತ್ತಿದ್ದಂತೆ ವಿಶ್ವ ದಾಖಲೆ ಬರೆಯಲಿದ್ದರು. ಈ ಸಾಧನೆಯನ್ನು ಮೆಸ್ಸಿ ಆಸ್ಟ್ರಿಯಾ ವಿರುದ್ಧದ ಪಂದ್ಯದ 38ನೇ ನಿಮಿಷದಲ್ಲಿ ಮಾಡಿ ಬೀಗಿದರು.

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಮಿರೋಸ್ಲಾವ್‌ ಕ್ಲೋಸ್‌ಗೂ ಸ್ಥಾನ. ಇವರು 4 ಫುಟ್ಬಾಲ್‌ ವಿಶ್ವಕಪ್‌ನಲ್ಲಿ ತಂಡದ ಪರ ಕಣಕ್ಕೆ ಇಳಿದಿದ್ದು 16 ಗೋಲು ಬಾರಿಸಿ ಮಿಂಚಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಬ್ರೆಜಿಲ್ ತಂಡದ ರೊನಾಲ್ಡೊ ನಜಾರಿಯೊ ಅವರ ಹೆಸರಿನಲ್ಲಿದೆ. ಇವರು ಸಹ ನಾಲ್ಕು ವಿಶ್ವಕಪ್‌ ಫುಟ್ಬಾಲ್‌ ಆಡಿದ್ದು ಇವರ ಬುಟ್ಟಿಯಲ್ಲಿ ಒಟ್ಟು 15 ಗೋಲುಗಳಿವೆ.

ಅರ್ಜೆಂಟೀನಾಗೆ ಭರ್ಜರಿ ಜಯ

ಜೆ ಗುಂಪಿನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿ ಆಸ್ಟ್ರಿಯಾ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಎರಡು ಗೋಲು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ದಾಖಲಿಸಿದರು. ಈ ಮೂಲಕ ಪ್ರಸಕ್ತ ಫಿಫಾ ವಿಶ್ವಕಪ್‌ನಲ್ಲಿ 5ನೇ ಹಾಗೂ ಒಟ್ಟಾರೆ ಫಿಫಾ ವಿಶ್ವಕಪ್‌ನ 18ನೇ ಗೋಲು ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.

Story first published: Tuesday, June 23, 2026, 0:26 [IST]
Other articles published on Jun 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+