ಕ್ಲಾಸಿಕ್ ಪಂದ್ಯದಲ್ಲಿ ರೋಚಕ ಜಯ ತಂದಿತ್ತ ಲಿಯೊನೆಲ್ ಮೆಸ್ಸಿ
ಮ್ಯಾಡ್ರಿಡ್, ಏಪ್ರಿಲ್ 24: ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು 500ನೇ ಗೋಲು ಬಾರಿಸಿ 'El Clasico' ಪಂದ್ಯದಲ್ಲಿ ಬಾರ್ಸಿಲೋನಾಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ರಿಯಲ್ ಮ್ಯಾಡ್ರಿಡ್ ವಿರುದ್ಧ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ 3-2 ಅಂತರದಲ್ಲಿ ಗೆಲುವು ದಾಖಲಿಸಿತು.
ಮೆಸ್ಸಿ ಅವರು ಈ ಪಂದ್ಯದಲ್ಲಿ ಎರಡನೇ ಗೋಲು ಹಾಗೂ ಒಟ್ಟಾರೆ ಲಾ ಲೀಗಾದಲ್ಲಿ 500ನೇ ಗೋಲು ಬಾರಿಸುವ ಮೂಲಕ ಬಾರ್ಸಿಲೋನಾ ತಂಡವನ್ನು ಲೀಗ್ ನ ಅಗ್ರಸ್ಥಾನಕ್ಕೇರಿಸಿದರು.

ಪಂದ್ಯದ 28ನೇ ನಿಮಿಷದಲ್ಲಿ ರಿಯಲ್ ಮ್ಯಾಡ್ರಿಡ್ ಗೆ ಮುನ್ನಡೆ ತಂದುಕೊಟ್ಟರು, ಮೆಸ್ಸಿ ಬಾರ್ಸಿಲೋನಾ ಪರ 33ನೇ ನಿಮಿಷದಲ್ಲಿ ಸಮಬಲ ಸಾಧಿಸಿದರು. ಪಂದ್ಯದ ಮೊದಲರ್ಧದಲ್ಲಿ ಸಮಬಲದೊಂದಿಗೆ ಮುಕ್ತಾಯ ಕಂಡಿತು. ನಂತರ ಇವಾನ್ ರಾಕಿಟಿಕ್ ಅವರು 73ನೇ ನಿಮಿಷದಲ್ಲಿ ಬಾರ್ಸಿಲೋನಾಕ್ಕೆ ಮುನ್ನಡೆ ತಂದರು.
ಆದರೆ, ಯುವಾನ್ ರೋಡ್ರಿಗೇಸ್ ಅವರು 85 ನಿಮಿಷದಲ್ಲಿ ಗೋಲು ಬಾರಿಸಿ 2-2ರ ಸಮನಾಗಿಸಿದರು. ಈ ನಡುವೆ ರಿಯಲ್ ಮ್ಯಾಡ್ರಿಡ್ ನಾಯಕ ಸರ್ಗಿಯೋ ರಮೊಸ್ ರೆಡ್ ಕಾರ್ಡ್ ಪಡೆದು ಮೈದಾನ ತೊರೆಯಬೇಕಾಯಿತು. ಆದರೆ, ಪಂದ್ಯದ ಹೆಚ್ಚುವರಿ ಅವಧಿ 90 + 1.48ಯಲ್ಲಿ ಮೆಸ್ಸಿ ಗೋಲು ಬಾರಿಸಿ ಬಾರ್ಸಿಲೋನಾಕ್ಕೆ ಜಯದ ನಗೆ ತಂದರು.
Story first published: Wednesday, January 3, 2018, 10:06 [IST]
Other articles published on Jan 3, 2018
Read in English: Messi scores, Barcelona win 'El Clasico'
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications