Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lionel Messi 70 ಅಡಿ ಎತ್ತರದ ಪ್ರತಿಮೆ ಅನಾವರಣ: ಲಾಠಿ ಚಾರ್ಜ್‌

ವಿಶ್ವ ಫುಟ್ಬಾಲ್‌ ಲೋಕದ ಧ್ರುವ ತಾರೆ ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಆಗಮಿಸಿದ್ದಾರೆ. ಮೆಸ್ಸಿ ಭಾರತದ ಪ್ರವಾಸ ಕೋಲ್ಕತ್ತಾದಿಂದ ಆರಂಭವಾಗಿದೆ. ಇವರು ಶನಿವಾರ ತಡ ರಾತ್ರಿ ಭಾರತಕ್ಕೆ ಆಗಮಿಸುತ್ತಿದಂತೆ ಇವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ವಿಮಾನ ನಿಲ್ದಾಣದ ಸುತ್ತಲೂ ಜಮಾಯಿಸಿದ್ದರು.

ಕೋಟ್ ಮತ್ತು ಪ್ಯಾಂಟ್ ಧರಿಸಿದ್ದ ಲಿಯೋನೆಲ್ ಮೆಸ್ಸಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಇವರ ಜೊತೆ ಬಂದಿದ್ದ ಲೂಯಿಸ್ ಸುವಾರೆಜ್ ಬಿಳಿ ಟಿ-ಶರ್ಟ್ ಧರಿಸಿದ್ದರು. ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಲು ಮೆಸ್ಸಿ ತೊಡುವ ಜೆರ್ಸಿಗಳನ್ನು ತೊಟ್ಟು ಬಂದಿದ್ದರು. ಈ ವೇಳೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಗೋಟ್‌ ಇಂಡಿಯಾ ಟೂರ್‌ ವೇಳೆ ಮೆಸ್ಸಿ ಭಾರತದ ನಾಲ್ಕು ಶಹರಗಳಿಗೆ ಬೇಟಿ ನೀಡಲಿದ್ದಾರೆ. ಅಲ್ಲದೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Lionel Messi Unveils 70-Foot Statue in Kolkata Meets Shah Rukh Khan on GOAT India Tour

ಮೆಸ್ಸಿ ಕೋಲ್ಕತ್ತಾದಲ್ಲಿ ಲೇಕ್ ಟೌನ್‌ನಲ್ಲಿರುವ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ತಮ್ಮದೇ 70-ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್ ಮತ್ತು ನಟ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು. ಮೆಸ್ಸಿ ಜೊತೆಗೆ ಶಾರುಖ್ ಕಿರಿಯ ಮಗ ಅಬ್ರಾಂ ಖಾನ್ ಫೋಟೋ ಕ್ಲಿಕಿಸಿಕೊಂಡರು.

ವಿಮಾನ ನಿಲ್ದಾಣದಿಂದ ಹಿಡಿದು ಮೆಸ್ಸಿ ಹೋಗುವ ಕಡೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಪೊಲೀಸರು, ಮಿಲ್ಟ್ರಿ ತುಕುಡಿ ಹಾಗೂ ಭದ್ರತಾ ದಳದ ಸಿಬ್ಬಂಧಿಗಳು ಸಹ ಈ ವೇಳೆ ಹಾಜರಿದ್ದರು.

ಲಾಠಿ ಚಾರ್ಜ್‌

ಲಿಯೋನೆಲ್‌ ಮೆಸ್ಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆದರೆ ಇವರು ಮೈದಾನದಲ್ಲಿ ಕೇವಲ 22 ನಿಮಿಷ ಮಾತ್ರ ಇದ್ದರು ಎಂದು ಅಭಿಮಾನಿಗಳು ಸಿಟ್ಟಾದರು. ಪರಿಣಾಮ ಕೋಪಗೊಂಡ ಅಭಿಮಾನಿಗಳು ಸ್ಟ್ಯಾಂಡ್‌ಗಳಿಂದ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್‌ ಸಹ ಮಾಡಬೇಕಾಯಿತು.

Story first published: Saturday, December 13, 2025, 11:55 [IST]
Other articles published on Dec 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+