ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!

ಕೋಲ್ಕತ್ತಾ: ಅರ್ಜೆಂಟೀನಾ ದಂತಕತೆ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಇಬ್ಬರೂ ವಿಶ್ವ ಖ್ಯಾತಿಯ ಆಟಗಾರರು. ಯುಇಎಫ್‌ಎ ಯೂರೋ ಪಂದ್ಯಗಳ ವೇಳೆ ಸುದ್ದಿಯಲ್ಲಿದ್ದ ಇಬ್ಬರೂ ಪಂದ್ಯ ಮುಗಿದ ಮೇಲೆ ಮತ್ತೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಇಬ್ಬರ ಹೆಸರಿನಲ್ಲಿ ಭಾರತದಲ್ಲಿ ಬೀಡಿ ಪೊಟ್ಟಣಗಳು ತಯಾರಾಗುತ್ತಿವೆ.
ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಚಿಯಾನೊ ರೊನಾಲ್ಡೋ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕಾರಣ, ಇಬ್ಬರ ಹೆಸರಿನಲ್ಲಿ ಬೀಡಿ ಪೊಟ್ಟಣಗಳು ಭಾರತದಲ್ಲಿ ಮಾರುಕಟ್ಟೆಗೆ ಬಂದಿದ್ದವು. ಫುಟ್ಬಾಲ್ ಅಭಿಮಾನಿಗಳು ಹೆಚ್ಚಿರುವ ವೆಸ್ಟ್ ಬೆಂಗಾಲ್‌ನಲ್ಲಿ ಈ ಸ್ಟಾರ್ ಫುಟ್ಬಾಲರ್‌ಗಳ ಹೆಸರಿನಲ್ಲಿ ಬೀಡಿ ಪೊಟ್ಟಣಗಳು ತಯಾರಾಗುತ್ತಿವೆ.

ಮೆಸ್ಸಿ ಬೀಡಿ, ರೊನಾಲ್ಡೋ ಬೀಡಿ
ಸಾಮಾಜಿಕ ಜಾಲತಾಣಗಳಲ್ಲಿ ರೊನಾಲ್ಡೋ ಬೀರಿ, ಮೆಸ್ಸಿ ಬೀರಿ ಹೆಸರಿನ ಬೀಡಿ ಪೊಟ್ಟಣಗಳು ಓಡಾಡುತ್ತಿವೆ. ಬೆಂಗಾಲ್‌ನಲ್ಲಿರುವ ಆರಿಫ್ ಬೀಡಿ ಕಂಪನಿ ಸ್ಟಾರ್ ಫುಟ್ಬಾಲರ್‌ಗಳ ಹೆಸರಿನಲ್ಲಿ ಬೀಡಿ ತಯಾರಿಸುತ್ತಿದೆ. ಬೀಡಿ ಪೊಟ್ಟಣಗಳ ಮೇಲೆ ಇಬ್ಬರ ಫೋಟೋ ಕೂಡ ಇದೆ.

ಜಾಲತಾಣದಲ್ಲಿ ತಮಾಷೆ
ಈ ಬೀಡಿ ಪೊಟ್ಟಣಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಕೆಲವರು, "ಕಡೆಗೂ ಭಾರತದಲ್ಲಿ ಈ ಸ್ಟಾರ್ ಫುಟ್ಬಾಲರ್‌ಗಳು ಉತ್ಪನ್ನ ಪ್ರಚಾರದ ಒಪ್ಪಂದ ಮಾಡಿಕೊಂಡಿದ್ದಾರೆ" ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಇನ್ನು ಕೆಲವರು, "ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳಿಬ್ಬರು ಈಗ ಭಾರತದಲ್ಲಿ ಬೀಡಿ ಪೊಟ್ಟಣ ಪ್ರಚಾರ ಮಾಡುತ್ತಿದ್ದಾರೆ" ಎಂದು ತರಲೆ ಮಾಡಿದ್ದರು.

ಮೆಸ್ಸಿ, ರೊನಾಲ್ಡೋಗೆ ವಿಷ್ಯ ಗೊತ್ತಾ?
ವಿಷಯ ಏನಂದ್ರೆ, ಈ ವಿಷಯ ಮೆಸ್ಸಿ-ರೊನಾಲ್ಡೋರ ಗಮನಕ್ಕೆ ಬಂದಿರಲಿಕ್ಕಿಲ್ಲ. ಗೊತ್ತಾದರೆ ನಾಳೆ ಮೆಸ್ಸಿ ಮತ್ತು ರೊನಾಲ್ಡೋ ಆರಿಫ್ ಬೀಡಿ ಕಂಪನಿಯ ವಿರುದ್ಧ ದೂರು ದಾಖಲಿಸಲೂಬಹುದು. ಯಾಕೆಂದರೆ ಜಗದ್ವಿಖ್ಯಾತಿಯ ಈ ಅಥ್ಲೀಟ್‌ಗಳ ಹೆಸರಿನಲ್ಲಿ, ಅದೂ ಅವರ ಅನುಮತಿಯಿಲ್ಲದೆ ಉತ್ಪನ್ನಗಳನ್ನು ಮಾರುವಂತಿಲ್ಲ. ಅದರಲ್ಲೂ ಭಾರತದಲ್ಲಿ ತಮ್ಮ ಹೆಸರಿನಲ್ಲಿ ಬೀಡಿ ಪೊಟ್ಟಣಗಳು ತಯಾರಾಗುತ್ತಿವೆ ಅಂತ ಮೆಸ್ಸಿ, ರೊನಾಲ್ಡೋಗೆ ಗೊತ್ತಾದರೆ, ಅವರೊಮ್ಮೆ, "ಎಲಾ ಇವ್ರ.." ಅಂತ ಬಾಯಿಗೆ ಕೈಯಿಟ್ಟುಕೊಂಡಾರು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications