Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ಜರ್ಮನ್ ಆಟಗಾರ ಮೆಸುಟ್ ನಿವೃತ್ತಿ

Mesut Ozil cites racism and disrespect as he quits Germany

ಬರ್ಲಿನ್, ಜುಲೈ 23: ಜರ್ಮನ್ ಫುಟ್ಬಾಲ್ ಆಟಗಾರ ಮೆಸುಟ್ ಒಜಿಲ್ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ನಡೆದ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಜರ್ಮನಿಯ ಸೋಲು ಮತ್ತು ಟರ್ಕಿ ಅಧ್ಯಕ್ಷರು ತನಗೆ ತೋರಿದ ಅಗೌರವ ಇದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.

ಇಂಗ್ಲಿಷ್ ಕ್ಲಬ್ ಆರ್ಸೆನಲ್ ಪರ ಆಡಿದ್ದ ಒಜಿಲ್, ಭಾನುವಾರ ತಮ್ಮ ಟ್ವಿಟರ್ ಖಾತೆಯಲ್ಲಿ ದೀರ್ಘ ಹೇಳಿಕೆಯೊಂದನ್ನು ನೀಡುವ ಮೂಲಕ ಫುಟ್ಬಾಲ್ ನಿವೃತ್ತಿಯನ್ನುಯನ್ನು ಘೋಷಿಸಿದ್ದಾರೆ.

29ರ ಹರೆಯದ ಮೆಸುಟ್ ರಷ್ಯಾದಲ್ಲಿ ನಡೆದಿದ್ದ ಫೀಫಾ ವಿಶ್ವಕಪ್ ನ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಮಿಂಚಿದ್ದರು. ಮೇ ತಿಂಗಳಲ್ಲಿ ಟರ್ಕಿಯಲ್ಲಿ ನಡೆದಿದ್ದ ಸಭೆಯ ವೇಳೆ ಟರ್ಕಿ ಅಧ್ಯಕ್ಷ ರೆಸೆಪ್ ಟೆಯಿಪ್ ಎರ್ಡೋಗನ್ ಅವರು ವಿಶ್ವಕಪ್ ನಲ್ಲಿ ಜರ್ಮನ್ ತಂಡದ ಸೋಲಿಗೆ ನಾನೇ ಕಾರಣ ಎಂಬಂತೆ ನಡೆದುಕೊಂಡು ನನ್ನನ್ನು ಅವಮಾನಿಸಿದರು ಎಂದಿದ್ದಾರೆ.

'ಇತ್ತೀಚೆಗೆ ಮುಕ್ತಾಯಗೊಂಡ ಫೀಫಾ ಫುಟ್ಬಾಲ್ ನಲ್ಲಿ ತಂಡದ ಸೋಲಿಗೆ ನಾನೇ ಕಾರಣ ಎಂಬಂತೆ ನಡೆದುಕೊಂಡಿದ್ದು ಮನಸ್ಸಿಗೆ ತುಂಬಾ ಬೇಸರ ಮೂಡಿಸಿದೆ. ಇದು ಜನಾಂಗೀಯತೆ ಮತ್ತು ಅಗೌರವವೆಂದು ನಾನು ಭಾವಿಸಿದ್ದೇನೆ. ಹಾಗಾಗಿ ನಾನಿನ್ನು ಜರ್ಮನ್ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸದಿರಲು ಬಯಸಿದ್ದೇನೆ' ಎಂದು ಒಜಿಲ್ ಹೇಳಿದ್ದಾರೆ.

'ಜರ್ಮನ್ ಫುಟ್ಬಾಲ್ ಅಸೋಸಿಯೇಷನ್ ಸೇರಿದಂತೆ ಇನ್ನು ಕೆಲವರು ನನ್ನನ್ನು ಉಪಚರಿಸಿದ ರೀತಿ ನಾನು ಫುಟ್ಬಾಲ್ ಗೆ ವಿದಾಯ ಘೋಷಿಸುವಂತೆ ಮಾಡಿದೆ. ಜರ್ಮನ್ ರಾಷ್ಟ್ರೀಯ ತಂಡದ ಟಿ-ಶರ್ಟ್ ಅನ್ನು ನಾನಿನ್ನು ಧರಿಸುವಂತಿಲ್ಲ ಎಂಬಂತೆ ಇವರೆಲ್ಲರೂ ನಡೆದುಕೊಂಡಿದ್ದಾರೆ' ಎಂದು ಮೆಸುಟ್ ಬೇಸರ ವ್ಯಕ್ತಪಡಿಸಿದ್ದಾರೆ.

Story first published: Monday, July 23, 2018, 11:22 [IST]
Other articles published on Jul 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+