ಭಾರತದಲ್ಲಿ 'ಫಿಫಾ ವಿಶ್ವಕಪ್' ಮೋದಿಯಿಂದ ಶುಭ ಹಾರೈಕೆ
ನವದೆಹಲಿ, ಅಕ್ಟೋಬರ್ 06: 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ತಂಡಗಳನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಶುಭ ಸಂದೇಶದಲ್ಲಿ "ಫಿಫಾ ಯು 17 ವಿಶ್ವಕಪ್ ನಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳಿಗೂ ಆತ್ಮೀಯ ಆಹ್ವಾನ ಹಾಗೂ ಶುಭ ಹಾರೈಕೆಗಳು. ಫಿಫಾ ಯು 17 ವಿಶ್ವಕಪ್ ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣವಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
ಗ್ಯಾಲರಿ: ಅಂಡರ್ 17 ವಿಶ್ವಕಪ್ ಕಾಲ್ಚೆಂಡಾಟ

ನವದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಬಲಿಷ್ಠ ಅಮೆರಿಕ (ಯುಎಸ್ಎ) ತಂಡವನ್ನು ಎದುರಿಸಲಿದೆ.
ಭಾರತದಲ್ಲಿ ಮೊದಲ ಬಾರಿಗೆ ಫಿಫಾ ಕೂಟ ಆಯೋಜನೆಯಾಗಿದ್ದು ಅಕ್ಟೋಬರ್ 28ರವರೆಗೆ ಪಂದ್ಯಗಳು ನಡೆಯಲಿವೆ. 87 ವರ್ಷಗಳ ಫುಟ್‌ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಕೂಟ ನಡೆಯುತ್ತಿದೆ. ಹೀಗಾಗಿ ಆತಿಥೇಯ ತಂಡಕ್ಕೆ ಪದಾರ್ಪಣೆಯ ಅವಕಾಶವೂ ಸಿಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications