ಅದ್ಭುತ ಗೋಲ್ ಗಾಗಿ ರೊನಾಲ್ಡೋ, ಬೇಲ್ ಮೀರಿಸಿದ ಸಲಾಹ್ ಗೆ ಪ್ರಶಸ್ತಿ!

ಕೈರೋ, ಸೆಪ್ಟೆಂಬರ್ 25: ಫುಟ್ಬಾಲ್, ಅದ್ಭುತ ಗೋಲ್ ಎಂದೊಡನೆ ಈ ದಿನಗಳಲ್ಲಿ ಪಕ್ಕನೆ ನೆನಪಾಗೋದು ಕ್ರಿಸ್ಚಿಯಾನೊ ರೊನಾಲ್ಡೋ, ಲಿಯೋನೆಲ್ ಮೆಸ್ಸಿ, ಗರೆಥ್ ಬೇಲ್. ಆದರೆ ಮೆಸ್ಸಿ, ರೊನಾಲ್ಡೋ, ಬೇಲ್ ಅವರನ್ನು ಹಿಂದಿಕ್ಕಿ ಮೊಹಮ್ಮದ್ ಸಲಾಹ್ ಅವರು ಫುಟ್ಬಾಲ್ ಸಾಧನೆಗಾಗಿ ನೀಡಲಾಗುವ 2018ರ ಪುಸ್ಕಾಸ್ ಶ್ರೇಷ್ಠ ಗೋಲಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈಜಿಪ್ಟ್ ನ ಪ್ರತಿಭಾನ್ವಿತ ಆಟಗಾರರಾಗಿರುವ ಸಲಾಹ್, ಕಳೆದ ಪ್ರೀಮಿಯರ್ ಲೀಗ್ ನಲ್ಲಿ ಲಿವರ್ ಪೂಲ್ ತಂಡವನ್ನು ಪ್ರತಿನಿಧಿಸಿ ಎವರ್ಟನ್ ಎದುರು ಭರ್ಜರಿ ಗೋಲ್ ಬಾರಿಸಿದ್ದರು. ಸಲಾಹ್ ಅಂದು ಬಾರಿಸಿದ್ದ ಗೋಲ್ ಬಲಿಷ್ಠ ಎಲ್ಲಾ ಆಟಗಾರರ ಶ್ರೇಷ್ಠ ಗೋಲನ್ನು ಒಂದು ಕ್ಷಣ ಮರೆಸಿಬಿಡುವಂತಿತ್ತು.
ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಪಂದ್ಯಾಟದಲ್ಲಿ ಎವರ್ಟನ್ ಎದುರು ಸಲಾಹ್ ಬಾರಿಸಿದ್ದ ಗೋಲ್, ಪುಸ್ಕಾಸ್ ಶ್ರೇಷ್ಠ ಗೋಲಿಗ ಸ್ಪರ್ಧೆಗಿಳಿದಿದ್ದ ಪೋರ್ಚುಗಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ, ಸ್ಪೇನ್ ನ ಗರೆಥ್ ಬೇಲ್ ಅವರನ್ನು ಮೀರಿಸಿದೆ. ಹೀಗಾಗಿ ಶ್ರೇಷ್ಠ ಪ್ರತಿಷ್ಠಿತ ಪ್ರಶಸ್ತಿ ಸಲಾಹ್ ಕೈ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications