Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಪಿಎಲ್‌ನಲ್ಲಿ ಮೊಹಮ್ಮದ್ ಸಲಾಹ್ ಮತ್ತೆ ಅತ್ಯಧಿಕ ಗೋಲ್ ಸರದಾರ

Mohamed Salah set to be top EPL scorer again

ಲಂಡನ್, ಮೇ 6: ವರ್ಷದ ಆಫ್ರಿಕನ್ ಫುಟ್ಬಾಲರ್ ಹೆಗ್ಗಳಿಕೆ ಪಾತ್ರರಾಗಿರುವ ಮೊಹಮ್ಮದ್ ಸಲಾಹ್ ಸದ್ಯ ನಡೆಯುತ್ತಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್‌ನಲ್ಲಿ) ಮುಂಚೂಣಿಯಲ್ಲಿರುವ ಗೋಲ್ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಸಲಾಗ್ ಮುಂಬರಲಿರುವ ಚಾಂಪಿಯನ್ಸ್ ಲೀಗ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಸಲಾಹ್, ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಬುಧವಾರ (ಮೇ 8) ನಡೆಯುವ ಚಾಂಪಿಯನ್ಸ್ ಲೀಗ್ ಸೆಮಿಫೈನಲ್‌ನಲ್ಲಿ ಬಾರ್ಸಿಲೋನಾ ವಿರುದ್ಧ ಸಲಾಹ್ ಮೈದಾನಕ್ಕಿಳಿಯುತ್ತಿಲ್ಲ ಎಂದು ಲಿವರ್‌ಪೂಲ್ ಮ್ಯಾನೇಜರ್ ಜುರ್ಗೆನ್ ಕ್ಲೋಪ್ ಸೋಮವಾರ (ಮೇ 6) ತಿಳಿಸಿದ್ದಾರೆ.

ಭಾನುವಾರ ನಡೆದಿದ್ದ ಇಪಿಎಲ್ ಟೂರ್ನಿಯ ಲಿವರ್ ಪೂಲ್ ಮತ್ತು ನ್ಯೂಕ್ಯಾಸ್ಟೆಲ್ ನಡುವಿನ ಕಾದಾಟದಲ್ಲಿ ಲಿವರ್ ಪೂಲ್ ಪ್ರತಿನಿಧಿಸಿದ್ದ ಸಲಾಹ್, ಒಂದು ಗೋಲ್ ಬಾರಿಸಿದ್ದರು. ಪಂದ್ಯವನ್ನು ಲಿವರ್‌ಪೂಲ್ 3-2ರಿಂದ ಗೆದ್ದುಕೊಂಡಿತು. ಸಲಾಹ್ 28ನೇ ನಿಮಿಷದಲ್ಲಿ ಗೋಲ್ ಸಿಡಿಸಿದ್ದರು.

ಒಂದು ಗೋಲ್‌ ನೆರವಿನಿಂದ ಸಲಾಹ್, ಇಪಿಎಲ್‌ನಲ್ಲಿ ಅಗ್ರ ಸ್ಥಾನಿ ಗಳ್ ಸಾಧಕನಾಗಿ ಗುರುತಿಸಿಕೊಂಡಿದ್ದರು. ಸಲಾಹ್ 22 ಗೋಲ್ ಬಾರಿಸಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಆರ್ಸೆನಲ್ ತಂಡದ ಆಟಗಾರ ಯರ್-ಎಮೆರಿಕ್ ಔಬೇಮೆಯಾಂಗ್, ಸಯಾಡಿಯೋ ಮಾನೆ (ಲಿವರ್‌ಪೂಲ್), ಸೆರ್ಗಿಯೋ ಅಗುಯೆರೊ (ಮ್ಯಾನ್.ಸಿಟಿ) ತಲಾ 20 ಗೋಲ್ ದಾಖಲೆ ಹಂಚಿಕೊಂಡಿದ್ದಾರೆ.

Story first published: Monday, May 6, 2019, 17:29 [IST]
Other articles published on May 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+