ಈಜಿಪ್ಟ್ ಸ್ಟಾರ್ ಮೊಹಮ್ಮದ್ ಸಲಾಹ್‌ಗೆ ವರ್ಷದ ಆಫ್ರಿಕನ್ ಪುಟ್ಬಾಲರ್ ಗೌರವ

ಡಾಕರ್, ಜನವರಿ 9: ಈಜಿಪ್ಟ್‌ನ ಸ್ಟಾರ್ ಫುಟ್ಬಾಲ್ ಆಟಗಾರ ಮೊಹಮ್ಮದ್ ಸಲಾಹ್‌ಗೆ ವರ್ಷದ ಆಫ್ರಿಕನ್ ಫುಟ್ಬಾಲರ್ ಗೌರವ ಲಭಿಸಿದೆ. ಮಂಗಳವಾರ (ಜನವರಿ 8) ಡಾಕರ್‌ನಲ್ಲಿ ಸಲಾಹ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಮೊಹಮ್ಮದ್‌ಗೆ ಎರಡನೇ ಬಾರಿಗೆ ಲಭಿಸುತ್ತಿರುವ ಪ್ರಶಸ್ತಿ.
ಇದೇ ಪ್ರಶಸ್ತಿಗಾಗಿ ಸ್ಪರ್ಧೆಗಿಳಿದಿದ್ದ ಲಿವರ್‌ಪೂಲ್ ಸಹ ಆಟಗಾರ ಸಯಾಡಿಯೋ ಮಾನೆ ಮತ್ತು ಅರ್ಸೆನಲ್ ಫಾರ್ವರ್ಡ್ ಆಟಗಾರ ಪಿಯರ್-ಎಮೆರಿಕ್ ಔಬೇಮೆಯಾಂಗ್ ಅವರನ್ನು ಸಲಾಹ್ ಹಿಂದಿಕ್ಕಿದ್ದಾರೆ. ಇದೇ ಇಬ್ಬರು ಸ್ಪರ್ಧಿಗಳನ್ನು ಕಳೆದ ವರ್ಷವೂ ಸೋಲಿಸಿ ಸಲಾಹ್ ಪ್ರಶಸ್ತಿ ಬಾಚಿಕೊಂಡಿದ್ದರು.
'ಈ ಪ್ರಶಸ್ತಿ ನನ್ನ ಪಾಲಿಗೆ ಬಹು ದೊಡ್ಡದು. ನಾನೀ ಪ್ರಶಸ್ತಿಯನ್ನು ಪ್ರೀತಿಸುತ್ತೇನೆ. ಕಾರಣ ನಾನು ಈ ಪ್ರಶಸ್ತಿಯನ್ನು ಸಣ್ಣಂದಿನಿಂದಲೂ ನೋಡುತ್ತಾ ಬೆಳೆದವನು, ಇದನ್ನು ಗೆಲ್ಲಬೇಕೆಂದು ಕನಸು ಕಂಡವನು ಕೂಡ' ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೊಹಮ್ಮದ್ ಸಲಾಹ್ ಖುಷಿ ಹಂಚಿಕೊಂಡರು.
Story first published: Wednesday, January 9, 2019, 15:36 [IST]
Other articles published on Jan 9, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications