
ಮಾಸ್ಕೋ, ಜೂ. 16: ಫೀಫಾ ವಿಶ್ವಕಪ್ 2018ರ ಸಿ ಗ್ರೂಪ್ ನ ಪಂದ್ಯದಲ್ಲಿ ಪೆರು ಮತ್ತು ಡೆನ್ಮಾರ್ಕ್ ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳೂ ಬಲಿಷ್ಟವಾದುದೇ ಆಗಿರುವುದರಿಂದ ಪಂದ್ಯ ಕುತೂಹಲ ಕಾದಿರಿಸಿಕೊಂಡಿದೆ.
ಲೈವ್ ಪಂದ್ಯದ ಗೋಲ್ ವಿವರ, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ದಿನ ನಡೆದ ಮೊದಲ ಪಂದ್ಯದಲ್ಲಿ ಸಿ ಗ್ರೂಪ್ ನ ಆಸ್ಟ್ರೇಲಿಯಾ-ಫ್ರಾನ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಫ್ರಾನ್ಸ್ 2-1 ಅಂತರದಿಂದ ಗೆದ್ದಿತ್ತು. ಅರ್ಜೆಂಟೀನಾ ಮತ್ತು ಐಸ್ ಲ್ಯಾಂಡ್ ತಂಡಗಳ ಎರಡನೇ ಪಂದ್ಯ 1-1ರ ಡ್ರಾದೊಂದಿಗೆ ಅಂತ್ಯಗೊಂಡಿತ್ತು. ಇದೀಗ ಮೂರನೇ ಪಂದ್ಯಕ್ಕಾಗಿ ಪೆರು-ಡೆನ್ಮಾರ್ಕ್ ಕಣಕ್ಕಿಳಿದಿವೆ.
ಮೊರ್ಡೋವಿಯಾ ಅರೇನಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 13ನೇ ನಿಮಿಷದ ಮುಕ್ತಾಯಕ್ಕೆ ತಂಡಗಳ ಪಾಯಿಂಟ್ 0-0 ಇದ್ದು ಪಂದ್ಯ ಕುತೂಹಲ ಮೂಡಿಸಿತ್ತು. ಸಂದರ್ಭ ಪೆರು ಗೋಲ್ ಗಾಗಿ ಪ್ರಯತ್ನಿಸಿತಾದರೂ ಡೆನ್ಮಾರ್ಕ್ ಗೋಲ್ ಕೀಪರ್ ಷ್ಮೆಚೆಲ್ ತಡೆದರು.
ಪೆರು-ಡೆನ್ಮಾರ್ಕ್ ಎರಡೂ ತಂಡಗಳು ಫೀಫಾ ವಿಶ್ವ ರ್ಯಾಂಕಿಂಗ್ ನಲ್ಲಿ ಅಕ್ಕಪಕ್ಕದಲ್ಲೇ ಇವೆ. ಫೀಫಾ ಕೋಕಾಕೋಲಾ ರ್ಯಾಂಕಿಂಗ್ ನಲ್ಲಿ ಪೆರು 11ನೇ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್ 12ನೇ ಸ್ಥಾನದಲ್ಲಿದೆ.