ಫೀಫಾ ಸೆಮಿಫೈನಲ್‌ಗೆ ಬರುವ ತಂಡಗಳು ಯಾವುವು? ವರಾಹ ಭವಿಷ್ಯ

ಫೀಫಾ ವಿಶ್ವಕಪ್ ಫುಟ್ಬಾಲ್ ಮೊದಲ ಹಂತದ ಸುತ್ತಿನಿಂದ ಹದಿನಾರರ ಘಟ್ಟದ ಹಂತಕ್ಕೆ ಬಂದಿದೆ. ಒಂದಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಗುಂಪು ಹಂತದ ಸ್ಪರ್ಧೆ ಈಗ ಹದಿನಾರರ ಘಟ್ಟದಲ್ಲಿ ಮತ್ತಷ್ಟು ರೋಮಾಂಚನಕಾರಿ ಆಟವನ್ನು ನೀಡುವುದರಲ್ಲಿ ಸಂದೇಹವಿಲ್ಲ.
ಈಗಾಗಲೇ ವಿಶ್ವಕಪ್ ಯಾರ ಮಡಿಲಿಗೆ ಬೀಳಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಮನುಷ್ಯರ ಭವಿಷ್ಯದಾಚೆ ಪ್ರಾಣಿಗಳ ಭವಿಷ್ಯದ ಮೇಲೆ ಜನರಲ್ಲಿ ನಂಬಿಕೆ ಹೆಚ್ಚು.
ಇತ್ತೀಚೆಗಷ್ಟೇ ಅಚಿಲೆಸ್ ಎಂಬ ರಷ್ಯಾದ ಬೆಕ್ಕು ಉದ್ಘಾಟನಾ ಪಂದ್ಯದ ಭವಿಷ್ಯವನ್ನು ಸರಿಯಾಗಿ ಹೇಳಿ ಎಲ್ಲರ ಮನಗೆದ್ದಿತ್ತು. ಈಗ ಇಂಗ್ಲೆಂಡ್‌ನ ಮಿಸ್ಟಿಕ್ ಮಾರ್ಕಸ್‌ನ ಸರದಿ. ಸೆಮಿಫೈನಲ್‌ನಲ್ಲಿ ಯಾವ ನಾಲ್ಕು ತಂಡಗಳು ಸೆಣಸಾಡಲಿವೆ ಎಂಬ ಬಗ್ಗೆ ಮಿಸ್ಟಿಕ್ ಮಾರ್ಕಸ್ ಭವಿಷ್ಯ ನುಡಿದಿದ್ದಾನೆ.
ಮಿಸ್ಟಿಕ್ ಮಾರ್ಕಸ್ ಈಗಾಗಲೇ ಫಳಫಳ ಹೊಳೆಯುವ ಟೊಪ್ಪಿ ಮತ್ತು ದಿರಿಸು ತೊಟ್ಟ ಮಾರ್ಕಸ್, ಅರ್ಜೆಂಟೀನಾ, ಬೆಲ್ಜಿಯಂ, ನೈಜೀರಿಯಾ ಮತ್ತು ಉರುಗ್ವೆ ತಂಡಗಳು ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಡಲಿವೆ ಎಂದು ಭವಿಷ್ಯ ಹೇಳಿದ್ದಾನೆ.
ಆದರೆ, ಆತನ ಭವಿಷ್ಯ ಎಲ್ಲದರಲ್ಲಿಯೂ ಸತ್ಯವಾಗುವುದಿಲ್ಲ ಎಂಬುದಕ್ಕೆ ಹಿಂದೆ ಮಾಡಿದ ತಪ್ಪಾದ ಆಯ್ಕೆಗಳು ಉದಾಹರಣೆಯಾಗಿವೆ. ಈ ನಾಲ್ಕು ತಂಡಗಳಲ್ಲಿ ನೈಜೀರಿಯಾ ಹದಿನಾರರ ಘಟ್ಟಕ್ಕೆ ತಲುಪುವಲ್ಲಿ ವಿಫಲವಾಗಿದೆ.

ಅಂದಹಾಗೆ, ಈ ಮಿಸ್ಟಿಕ್ ಮಾರ್ಕಸ್ ಇಂಗ್ಲೆಂಡ್‌ನ ಡರ್ಬಿಷೈರ್‌ನ ಹೀಗ್ ಫಾರ್ಮ್‌ನಲ್ಲಿರುವ ಒಂದು ಪುಟ್ಟ ಹಂದಿ.
ಮಾರ್ಕಸ್ ಸುತ್ತಲೂ ವಿಶ್ವಕಪ್ ಆಡುತ್ತಿರುವ ದೇಶಗಳ ಪುಟ್ಟ ಬಾವುಟವನ್ನು ಚುಚ್ಚಿದ ಸೇಬು ಹಣ್ಣುಗಳನ್ನು ಇರಿಸಲಾಗಿತ್ತು. ಮಾರ್ಕಸ್ ಯಾವ ಬಾವುಟದ ಪಕ್ಕದ ಹಣ್ಣನ್ನು ತಿನ್ನುತ್ತಾನೋ, ಆ ದೇಶ ಸೆಮಿಫೈನಲ್ ಪ್ರವೇಶಿಸುತ್ತದೆ ಎನ್ನುವುದು ಲೆಕ್ಕಾಚಾರ.
ಈ ಹಿಂದೆ ಅನೇಕ ನೈಜ ಭವಿಷ್ಯಗಳನ್ನು ನುಡಿಯುವ ಮೂಲಕ ಮಾರ್ಕಸ್ ಜನಪ್ರಿಯತೆ ಪಡೆದುಕೊಂಡಿದ್ದಾನೆ. 2014ರ ವಿಶ್ವಕಪ್, ವಿಂಬಲ್ಡನ್ ಟೆನ್ನಿಸ್ ಪುರುಷರ ಫೈನಲ್ಸ್, ಬ್ರೆಕ್ಸಿಟ್ ವೋಟ್ ಮತ್ತು 2016ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಚ್ಚರಿಯ ಗೆಲುವನ್ನು ಮಾರ್ಕಸ್ ಮೊದಲೇ ನುಡಿದಿದ್ದ.
ತಮ್ಮ 22 ಎಕರೆ ಜಮೀನಿನಲ್ಲಿ ಹಂದಿಗಳನ್ನು ಸಾಕಿರುವ ಜೂಲಿಯೆಟ್ ಸ್ಟೀವನ್ಸ್ ವಿಶ್ವಕಪ್ ವಿಚಾರದಲ್ಲಿ ಪ್ರಾಣಿಗಳು ನುಡಿಯುವ ಭವಿಷ್ಯದ ಬಗ್ಗೆ ಜನರಲ್ಲಿ ಅತೀವ ಕುತೂಹಲವಿದೆ ಎನ್ನುತ್ತಾರೆ.
ಮಾರ್ಕಸ್ ಹೇಳುವ ಎಲ್ಲ ಭವಿಷ್ಯವೂ ನಿಖರವಾಗಿಲ್ಲ. 2016ರ ಚಾಂಪಿಯನ್ಸ್ ಪ್ಲೇ ಆಫ್ ಸೆಮಿ ಫೈನಲ್‌ನಲ್ಲಿ ಡೆರ್ಬಿ ಕೌಂಟಿ ಗೆಲ್ಲುತ್ತದೆ ಎಂದು ಮಾರ್ಕಸ್ ಹೇಳಿದ್ದ ಭವಿಷ್ಯ ಸುಳ್ಳಾಗಿತ್ತು. ಆ ಪಂದ್ಯದಲ್ಲಿ ಹಲ್ ಸಿಟಿ ಜಯಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications