
ಮಾಸ್ಕೋ, ಜೂ. 24: ಫೀಫಾ ವಿಶ್ವಕಪ್ ಗ್ರೂಪ್ ಎಚ್ ನ ಪೋಲ್ಯಾಂಡ್-ಕೊಲಂಬಿಯಾ ಹಣಾಹಣಿಯಲ್ಲಿ ಕೊಲಂಬಿಯಾ 3-0 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಒಂದು ಮತ್ತು ದ್ವಿತೀಯಾರ್ಧದಲ್ಲಿ ಎರಡು ಗೋಲ್ ಬಾರಿಸಿ ಕೊಲಂಬಿಯಾ ವಿಜಯೋತ್ಸವ ಆಚರಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕೊಲಂಬಿಯಾದಿಂದ 40ನೇ ನಿಮಿಷದಲ್ಲಿ ಯೆರಿಮಿನಾ ಅವರು ಮೊದಲ ಗೋಲ್ ಬಾರಿಸಿದರು. ಅನಂತರ ಪಂದ್ಯದ ದ್ವಿತೀಯಾರ್ಧದ 70ನೇ ನಿಮಿಷದಲ್ಲಿ ಫಲ್ಕಾವೋ ಮತ್ತು 75ನೇ ನಿಮಿಷದಲ್ಲಿ ಜುವಾನ್ ಕುಡ್ರಾಡೋ ಅವರು ಗೋಲ್ ಬಾರಿಸಿ ಕೊಲಂಬಿಯಾ ಗೆಲುವನ್ನು ಸಾರಿದರು.
ಪೋಲಂಡ್ ನಿಂದ ವೊಜ್ಸಿಕ್ ಸ್ಝ್ಜೆಝೆನಿ; ಲ್ಯೂಕಾಸ್ ಪಿಸ್ಜ್ಕ್ಜೆಕ್, ಜಾನ್ ಬೆಡ್ನರೆಕ್, ಮಿಚಲ್ ಪಜ್ಡನ್; ಬಾರ್ಟೋಸ್ಜ್ ಬೆರೆಝೈನ್ಸ್ಕಿ, ಗ್ರ್ಝ್ಗೊರ್ಜ್ ಕ್ರೈಚೊವಿಕ್, ಜೇಸೆಕ್ ಗೊರಾಲ್ಸ್ಕಿ, ಮ್ಯಾಕಿಜ್ ರೈಬಸ್; ಪಯೋಟ್ರ್ ಝೀಲಿನ್ಸ್ಕಿ, ರಾಬರ್ಟ್ ಲೆವಾಂಡೋವ್ಸ್ಕಿ (ಕ್ಯಾಪ್ಟನ್), ದಾಯಿದ್ ಕೌನ್ವಾಕಿ. ತರಬೇತುದಾರ: ಆಡಮ್ ನವಾಲ್ಕಾ ಪಂದ್ಯವನ್ನಾಡಿದ್ದರು.
ಕೊಲಂಬಿಯಾದಿಂದ ಡೇವಿಡ್ ಓಸ್ಪಿನಾ; ಸ್ಯಾಂಟಿಯಾಗೊ ಏರಿಯಾಸ್, ಡೇವಿನ್ಸನ್ ಸ್ಯಾಂಚೆಝ್, ಯೆರಿ ಮಿನಾ, ಜೋಹಾನ್ ಮೊಜಿಕ; ಅಬೆಲ್ ಅಗುಯಿಲಾರ್, ವಿಲ್ಮಾರ್ ಬರಿಯೊಸ್; ಜುವಾನ್ ಕ್ಯುಡ್ರಾಡೊ, ಜುವಾನ್ ಕ್ವಿಂಟರ್ರೊ, ಜೇಮ್ಸ್ ರೊಡ್ರಿಗಜ್; ರಾಡಮೆಲ್ ಫಾಲ್ಕವೊ (ಕ್ಯಾಪ್ಟನ್). ಕೋಚ್: ಜೋಸ್ ಪೆಕೆರ್ಮನ್ ಕಣಕ್ಕಿಳಿದಿದ್ದರು.