ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೊನಾಲ್ಡೋ ಆಕರ್ಷಕ ಆಟ: 3-3ರಿಂದ ಪೋರ್ಚುಗಲ್-ಸ್ಪೇನ್ ಪಂದ್ಯ ಡ್ರಾ

Portugal vs Spain Live Score, FIFA World Cup 2018: Portugal 2-3 Spain

ಸೋಚಿ, ಜೂ. 16: ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಮುಖಾಮುಖಿಯಾಗಿದ್ದ ಸ್ಪೇನ್-ಪೋರ್ಚುಗಲ್ ನಡುವಣ ಕುತೂಹಲಕಾರಿ ಕಾದಾಟದಲ್ಲಿ ಸ್ಪೇನ್-ಪೋರ್ಚುಗಲ್ ಎರಡೂ 3-3ರ ಸಮಬಲ ಸಾಧಿಸಿದೆ.

ಪಂದ್ಯಾಂತ್ಯದಲ್ಲಿ ಸ್ಪೇನ್ 3-2ರ ಮುನ್ನಡೆಯೊಂದಿಗೆ ಗೆಲುವಿನ ಸಮೀಪಕ್ಕೆ ಬಂದಿತ್ತಾದರೂ ರೊನಾಲ್ಡೋ 88ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ನಿಂದಾಗಿ ಬಲಿಷ್ಠ ತಂಡಗಳ ನಡುವಣ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿತು.

(ಸಂಪೂರ್ಣ ಸ್ಕೋರ್ ಕಾರ್ಡ್, ಗೋಲ್ ವಿವರಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ)

1
958029

ಹೆಚ್ಚು ಆಕರ್ಷಣೆ ಮೂಡಿಸಿದ್ದ ಈ ಬಲಾಡ್ಯ ತಂಡಗಳ ಪಂದ್ಯದಲ್ಲಿ ಮೊದಲು ಪೋರ್ಚುಗಲ್ ಗೋಲ್ ಖಾತೆ ತೆರೆಯಿತು. ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ 4ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಪೋರ್ಚುಗಲ್ ಗೆ 1-0 ಅಂತರದ ಮುನ್ನಡೆ ತಂಡುಕೊಟ್ಟರು.

2010 ವಿಶ್ವ ಚಾಂಪಿಯನ್ ಸ್ಪೇನ್ ಕೂಡ ಎದುರಾಳಿಯ ವಿರುದ್ಧ ಗೋಲ್ ಸಮಸಾಧಿಸಲು ಪೈಪೋಟಿ ನಡೆಸಿತು. ಇದಕ್ಕೆ ಫಲವೆಂಬಂತೆ 24ನೇ ನಿಮಿಷದಲ್ಲಿ ಸ್ಪೇನ್ ಪರ ಡಿಯಾಗೋ ಕೋಸ್ಟ ಮೊದಲ ಗೋಲು ದಾಖಲಿಸಿದರು.

ಪಂದ್ಯದ ವೇಳೆ 17 ನಿಮಿಷದಲ್ಲಿ ಸ್ಪೇನ್ ನ ಸೆರ್ಗಿಯೋ ಬಸ್ಕ್ವೆಟ್ಸ್ ಅವರ ಮತ್ತು 28 ನಿಮಿಷದಲ್ಲಿ ಪೋರ್ಚುಗಲ್ ನ ಬ್ರೂನೋ ಫೆರ್ನಾಂಡಿಸ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು.

ಪಂದ್ಯದ ಮೊದಲಾರ್ಧದಲ್ಲೇ ಪೋರ್ಚುಗಲ್ ಮತ್ತೊಂದು ಗೋಲ್ ಬಾರಿಸಿತು. ಈ ಗೋಲ್ ಸಿಡಿಸಿದ್ದೂ ರೊನಾಲ್ಡೋ ಅವರೇ. 44ನೇ ನಿಮಿಷದಲ್ಲಿ ರೊನಾಲ್ಡೋ ಎರಡನೆಯ ಗೋಲ್ ಬಾರಿಸಿ ಪೋರ್ಚುಗಲ್ ಗೆ 2-1ರ ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತೆ ಕಾವೇರಿಸಿತು. ಯಾಕೆಂದರೆ ಸ್ಪೇನ್ ನ ಡಿಯಾಗೋ ಕೋಸ್ಟ ಅವರೂ 55ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಸಿಡಿಸಿ ಪೋರ್ಚುಗಲ್ ಗೋಲನ್ನು ಸರಿದೂಗಿಸಿದರು.

ಪಂದ್ಯ ಕೊನೆಗೊಳ್ಳುತ್ತಾ ಬಂದಂತೆ ಸ್ಪೇನ್ ಮುನ್ನಡೆ ಸಾಧಿಸುತ್ತಾ ಬಂತು. ಸ್ಪೇನ್ ನ ನ್ಯಾಚೋ ಅವರು 58ನೇ ನಿಮಿಷದಲ್ಲಿ ಸಿಡಿಸಿದ ಅದ್ಭುತ ಗೋಲ್ ನೆರವಿನಿಂದ ಸ್ಪೇನ್ 3-2 ಮುನ್ನಡೆ ಸಾಧಿಸಿತು.

88ನೇ ನಿಮಿಷದಲ್ಲಿ ರೊನಾಲ್ಡೋ ಮೂರನೇ ಗೋಲ್ ಸಿಡಿಸಿ ಸ್ಪೇನ್ ಗೋಲಿಗೆ ಪೋರ್ಚುಗಲ್ ಗೋಲನ್ನು ಸಮಗೊಳಿಸಿದರು. ಆಟಗಾರರು ಗಾಯಗೊಂಡು ಪಂದ್ಯ ನಿಲುಗಡೆಯಾಗಿದ್ದಕ್ಕಾಗಿ ಹೆಚ್ಚುವರಿ ನಾಲ್ಕು ನಿಮಿಷಗಳನ್ನು ಸೇರಿಸಲಾಯ್ತು.
ಆದರೆ ಅಂತಿಮವಾಗಿ 3-3ರ ಡ್ರಾದೊಂದಿಗ ಪೋರ್ಚುಗಲ್-ಸ್ಪೇನ್ ಕಾಳಗ ಅಂತ್ಯಗೊಂಡಿತು.

Story first published: Saturday, June 16, 2018, 1:51 [IST]
Other articles published on Jun 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X