Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಲ್ಲಾರಿಯಲ್ ಮಣಿಸಿ 34ನೇ ಲಾ ಲಿಗಾ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್‌

Real Madrid clinch 34th La Liga title with a game to spare

ಮ್ಯಾಡ್ರಿಡ್, ಜುಲೈ 17: ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡ 34ನೇ ಬಾರಿಗೆ ಲಾ ಲಿಗಾ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಗುರುವಾರ ನಡೆದ ವಿಲ್ಲಾರ್ರಿಯಲ್ ವಿರುದ್ಧದ ಪಂದ್ಯದಲ್ಲಿ ಕರೀಮ್ ಬೆನ್ಝೆಮಾ ಗಳಿಸಿದ 2 ಗೋಲುಗಳ ನೆರವಿನಿಂದ 2-1ರ ಗೆಲುವು ದಾಖಲಿಸಿದ ರಿಯಲ್ ಮ್ಯಾಡ್ರಿಡ್ ಪ್ರಶಸ್ತಿ ಗೆದ್ದಿದೆ.

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಆಲ್ಫ್ರೆಡೋ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ನಡೆದ ಲಾ ಲಿಗಾ ಪಂದ್ಯದಲ್ಲಿ ಮ್ಯಾಡ್ರಿಡ್ ಆಟಗಾರ ಕರೀಮ್ ಬೆನ್ಝೆಮಾ 29 ಮತ್ತು 77ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 83ನೇ ನಿಮಿಷದಲ್ಲಿ ವಿಲ್ಲಾರ್ರಿಯಲ್ ಆಟಗಾರ ವಿಸೆಂಟೆ ಇಬೊರಾ ಗೋಲ್ ಬಾರಿಸಿ ಸೋಲಿನ ಅಂತರ ಕಡಿಮೆ ಮಾಡಿದರು.

ಅಂದ್ಹಾಗೆ, ಲಾ ಲಿಗಾದ ಪಂದ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಚಾಂಪಿಯನ್ ಪಟ್ಟ ಅಲಂಕರಿಸಲು ಬೇಕಾದ ಅಂಕಗಳು ಈಗಾಗಲೇ ರಿಯಲ್ ಮ್ಯಾಡ್ರಿಡ್ ಖಾತೆಯಲ್ಲಿದೆ. ಮ್ಯಾಡ್ರಿಡ್‌ಗೆ ಇನ್ನೂ ಎರಡು ಪಂದ್ಯಗಳಿಂದ ಕೇವಲ 2 ಅಂಕಗಳಷ್ಟೇ ಬೇಕಿದೆ.

ಇನ್ನು ಉಳಿದಿರುವ ಎರಡು ಪಂದ್ಯಗಳಲ್ಲಿ ಬಲಿಷ್ಠ ತಂಡ ರಿಯಲ್ ಮ್ಯಾಡ್ರಿಡ್ ಸುಲಭವಾಗಿ ಗೆಲ್ಲುವ ಭರವಸೆಯಲ್ಲಿದೆ. ಬಾರ್ಸಿಲೋನಾ ತಂಡ ಒಸಾಸುನಾ ವಿರುದ್ಧ ಸೋತರೂ ಅಂಕಗಳ ಲೆಕ್ಕಾಚಾರದ ಆಧಾರದಲ್ಲಿ ರಿಯಲ್ ಮ್ಯಾಡ್ರಿಡ್ ಟ್ರೋಫಿ ಗೆಲ್ಲಲಿದೆ.

Story first published: Friday, July 17, 2020, 15:18 [IST]
Other articles published on Jul 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+