For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಷ್ಯಾದಲ್ಲಿ ನೀರಿಗಾಗಿ ಪರದಾಟ: 'ಜೋಡಿಯಾಗಿ ಸ್ನಾನ ಮಾಡಿ'

russia city authorities tell residents to bathe in pairs

ಸಮರ, ಜುಲೈ 5: ಫೀಫಾ ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ರಷ್ಯಾದೆಡೆಗೆ ಜಗತ್ತಿನ ಕಣ್ಣುನೆಟ್ಟಿದೆ. ದೂರದೇಶಗಳಿಂದ ಬರುತ್ತಿರುವ ಕ್ರೀಡಾಪ್ರೇಮಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಮೆಚ್ಚುಗೆ ಪಡೆಯುವ ಜತೆಗೆ, ಒಂದಷ್ಟು ಸಮಸ್ಯೆಗಳೂ ರಷ್ಯಾವನ್ನು ಕಾಡುತ್ತಿವೆ.

ರಷ್ಯಾದ ನೈಋತ್ಯ ಭಾಗದಲ್ಲಿರುವ ಸಮರ ನಗರದಲ್ಲಿ ಅನೇಕ ಪಂದ್ಯಗಳು ನಡೆಯುತ್ತಿವೆ. ಆದರೆ, ಈ ನಗರದ ಜನರು ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ.

ನೀರಿನ ಮಿತಬಳಕೆ ಹಾಗೂ ರಕ್ಷಣೆಗೆ ಮುಂದಾಗಿರುವ ಅಲ್ಲಿನ ಆಡಳಿತ ಕಡಿಮೆ ನೀರನ್ನು ಬಳಸುವ ಸಲುವಾಗಿ ವಿಚಿತ್ರ ಆದೇಶವನ್ನು ಹೊರಡಿಸಿದೆ.

ಫುಟ್ಬಾಲ್ ಅಭಿಮಾನಿಗಳಿಗಾಗಿ ನೀರನ್ನು ಉಳಿಸಲು ಜೋಡಿಯಾಗಿ ಷವರ್ ಸ್ನಾನ ಮಾಡುವಂತೆ ಅಲ್ಲಿನ ನಿವಾಸಿಗಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮಾಸ್ಕೊ ಟೈಮ್ಸ್ ವರದಿ ಮಾಡಿದೆ.

ಫುಟ್ಬಾಲ್‌ನ ಮೆಗಾ ಕಾರ್ಯಕ್ರಮದ ಸಲುವಾಗಿ ಮತ್ತು ಹೆಚ್ಚುತ್ತಿರುವ ಉಷ್ಣತೆಯ ಕಾರಣದಿಂದ ನೀರಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಅಧಿಕಾರಿಗಳು ನಗರಕ್ಕೆ ಪೂರೈಸುವ ನೀರಿನ ಪ್ರಮಾಣವನ್ನು ಕೆಲವು ದಿನಗಳಿಂದ ಹೆಚ್ಚಿಸಿದ್ದಾರೆ.

ನಗರಕ್ಕೆ ಭೇಟಿ ನೀಡುತ್ತಿರುವ ಸಾವಿರಾರು ಪ್ರವಾಸಿಗರಿಂದ ನೀರಿನ ಬಳಕೆ ಹೆಚ್ಚಾಗಿದೆ ಎಂದು ನೀರು ಸರಬರಾಜು ಕಂಪೆನಿಯೊಂದರ ಹೇಳಿಕೆ ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಬೇಡಿಕೆ ಹೆಚ್ಚುತ್ತಿರುವ ಕಾರಣ ನಗರದ ಸುತ್ತಮುತ್ತ ಇರುವ ನೀರಿನ ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದ್ದು, ಅವುಗಳಲ್ಲಿ ನೀರು ಖಾಲಿಯಾಗುತ್ತಿದೆ. ಹೀಗಾಗಿ ಜೋಡಿಯಾಗಿ ಸ್ನಾನ ಮಾಡುವಂತೆ ನಿವಾಸಿಗಳಿಗೆ ಸೂಚಿಸಲಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಸಮರದಲ್ಲಿ ಐದು ಪಂದ್ಯಗಳು ನಡೆದಿವೆ. ಇಂಗ್ಲೆಂಡ್ ಮತ್ತು ಸ್ವೀಡನ್ ನಡುವೆ ಜುಲೈ 6ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅತಿಥ್ಯ ವಹಿಸಲಿದೆ.

Story first published: Thursday, July 5, 2018, 14:03 [IST]
Other articles published on Jul 5, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+