ರಷ್ಯಾ ಟೂರ್ ಡೈರಿ: ಪ್ರೀತಿ-ಅಭಿಮಾನಕ್ಕೆ ವ್ಯಾಕರಣದ ಹಂಗೆಲ್ಲಿದೆ?

(ಸೋಚಿಯ ಫಿಶ್ಟ್ ಕ್ರೀಡಾಂಗಣದಲ್ಲಿ ತೆಗೆದ ಈ ಚಿತ್ರದಲ್ಲಿರುವವರು ಎಡದಿಂದ; ಎವ್ಗೆನಿ ವ್ಲಾಸೊವ್,ಇಗೊರ್ ಪೋಲೆಕ್ಟೊವ್,ಡಿಮಿಟ್ರಿ ಆರ್ಟಮೋನೊವ್ ಮತ್ತು ಅಲೆಕ್ಸೆಯ್ ವಿನೋಗ್ರಾಡೋವ್. ಕ್ರೆಡಿಟ್: ಅರವಿಂದ್ ಎಸ್)
ಸೋಚಿ, ಜೂ. 20: ಮಾಸ್ಕೋದಿಂದ ಬಂದಿದ್ದ ಇಗೊರ್ ಪೋಲೆಕ್ಟೊವ್ ಹೆಸರಿನ ಇಂಜಿನಿಯರ್ ಫುಟ್ಬಾಲ್ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ ನನ್ನ ಮುಖದಲ್ಲಿ ಖುಷಿಯ ನಗೆಯೊಂದು ಮೂಡುವಂತೆ ಮಾಡಿತು. ಯಾಕೆಂದರೆ ಆತ ನನ್ನನ್ನೂ ಸೇರಿಸಿ ಅಲ್ಲಿ ನೆರೆದಿದ್ದ ಕೆಲವರಲ್ಲಿ ಇಂಗ್ಲೀಷಿನಲ್ಲಿ 'ವೆಲ್ಕಮ್ ಟು ರಷ್ಯಾ 2018 ಎಂದಾಗಬೇಕಾ ಇಲ್ಲ ವೆಲ್ಕಮ್ ರಷ್ಯಾ ಎಂದರೂ ಪರವಾಗಿಲ್ವಾ?' ಎಂದು ಪ್ರಶ್ನಿಸುತ್ತಿದ್ದ.
ಅವನ ಉದ್ದೇಶವಿಷ್ಟೇ; ರಷ್ಯಾಕ್ಕೆ ಭೇಟಿ ನೀಡುವ ಅಭಿಮಾನಿಗಳಲ್ಲಿ ತಾವು ರಷ್ಯಾದಲ್ಲಿದ್ದೇವೆ ಎಂಬ ಭಾವನೆ ಮೂಡಿಸೋದು. ಹಾಗಿದ್ದಮೇಲೆ ಯಾರಾದರೂ ಅವರ ಇಂಗ್ಲೀಷ್ ವ್ಯಾಕರಣದ ಬಗ್ಗೆ ದೂರೋದಕ್ಕೆ ಸಾಧ್ಯವೆ? ಪ್ರೀತಿ-ಅಭಿಮಾನಕ್ಕೆ ವ್ಯಾಕರಣದ ಹಂಗಾದರೂ ಇದೆಯೇ? ಅನ್ನಿಸಿ ನನಗೆ ನಾನೇ ಒಮ್ಮೆ ಸುಮ್ಮನೆ ನಕ್ಕುಬಿಟ್ಟೆ.
ರಷ್ಯಾದ ಫುಟ್ಬಾಲ್ ಅಭಿಮಾನಿಗಳ ಬಗ್ಗೆ ನೀವೊಮ್ಮೆ ಯೋಚಿಸಿನೋಡಿ. ಯೂರೋ 2016 ರ ಸಮಯದಲ್ಲಿ ಮಾರ್ಸಿಲ್ಲೆನಲ್ಲಿ ಇಂಗ್ಲೆಂಡ್ ಬೆಂಬಲಿಗರೊಂದಿಗೆ ಇವರು ರಕ್ತ ಹರಿಸಿಕೊಂಡು ಗುದ್ದಾಡಿದ ಸಂಗತಿ ನಿಮಗೆ ನೆನಪಾಗಬಹುದು. ಅಂದು ಇವರ ಹುಚ್ಚು ಅಭಿಮಾನಕ್ಕೆ 35 ಜನ ಗಾಯಗೊಂಡಿದ್ದರು. ಅಭಿಮಾನ ಅತಿರೇಕಕ್ಕೆ ಹೋದಾಗ ಇಂಥ ಸಮಸ್ಯೆಗಳಾಗೋದೂ ಇದೆ. ಆದರೆ ಇದೀಗ ಎರಡು ವರ್ಷಗಳ ಬಳಿಕ ಇದೇ ರಷ್ಯನ್ನರು ಫೀಫಾ ವಿಶ್ವಕಪ್ ಅನ್ನು ಆಯೋಜಿಸಿರುವುದಷ್ಟೇ ಅಲ್ಲ; ವಿದೇಶದಿಂದ ಬರುವ ಫುಟ್ಬಾಲ್ ಅಭಿಮಾನಿಗಳಿಗೆ ಪ್ರೀತಿಯನ್ನೂ ಬಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಫುಟ್ಬಾಲ್ ಅಭಿಮಾನಕ್ಕೆ ಸಂಬಂಧಿಸಿ ನಿಮಗೆ ಇನ್ನೊಂದು ಸಂಗತಿ ಹೇಳ್ತೇನೆ. ಆಗ ಹೇಳಿದ ಇಂಜಿನಿಯರ್ ಅಭಿಮಾನಿ ಬಳಗದ ನಾಲ್ಕು ಜನ ಸ್ನೇಹಿತರ ಗುಂಪು ಕಣ್ಣಿಗೆ ಸಿಕ್ಕಿತು. ಇವರೆಲ್ಲರೂ ಟೀ ಶರ್ಟ್ ನಲ್ಲಿ 'ವೆಲ್ಕಮ್ ರಷ್ಯಾ 2018' ಎಂದು ಪ್ರಿಂಟ್ ಹಾಕಿಸಿಕೊಂಡಿದ್ದರು.
ಅವರನ್ನು ಮಾತನಾಡಿಸಿದಾಗ, 'ನಮ್ಮದೇಶದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಫುಟ್ಬಾಲ್ ಹಬ್ಬಕ್ಕೆ ಎಲ್ಲರನ್ನೂ ಸ್ವಾಗತಿಸಬೇಕೆನ್ನುವ ಆಶಯದಲ್ಲಿ ನಾವೀಗೆ ಟೀಶರ್ಟ್ ಗೆ ಬರೆದುಕೊಂಡಿದ್ದೇವೆ. ಫುಟ್ಬಾಲ್ ಎಲ್ಲ ಜನರನ್ನು ಒಗ್ಗೂಡಿಸಿ, ವಿಭಿನ್ನ ಸಂಸ್ಕೃತಿಗಳ ಜನರ ನಡುವೆ ಸ್ನೇಹ ಹಂಚಲು ನೆರವಾಗುವ ಒಂದು ಆಟ' ಎಂದು ಅವರಂದಿದ್ದು ಕೇಳಿ ಖುಷಿಯೆನಿಸಿತು.
ಒಟ್ಟಿನಲ್ಲಿ ಈ ಫೀಫಾ ಫುಟ್ಬಾಲ್ ಹಬ್ಬದ ನೆಪದಲ್ಲಿ ರಷ್ಯನ್ನರಿಂದ ಜಗತ್ತಿಗೆ ಪ್ರೀತಿ, ಶಾಂತಿಯ ಸಂದೇಶ ರವಾನೆಯಾಗುತ್ತಿದ್ದುದು ಸುಳ್ಳಲ್ಲ. ಕ್ರೀಡೆಯ ನೆಪದಲ್ಲಿ ಅಭಿಮಾನದಿಂದ ಒಗ್ಗೂಡುತ್ತೇವೆ. ಸ್ನೇಹ-ಅಭಿಮಾನ ಹಂಚಿಕೊಳ್ಳುತ್ತೇವೆ. ಪರಸ್ಪರ ಸಂಸ್ಕೃತಿಯ ಅರಿವನ್ನೂ ವಿನಿಮಿಯ ಮಾಡಿಕೊಳ್ಳುವುದಂತೂ ನಿಜವಲ್ಲವೆ?
(ನಮ್ಮ myKhel.com ಪ್ರತಿನಿಧಿ ಅರವಿಂದ್ ಎಸ್ ಅವರು ರಷ್ಯಾದಲ್ಲಿದ್ದು, ಫುಟ್ಬಾಲ್ ಅಭಿಮಾನಿಗಳ ದೃಷ್ಟಿಕೋನದಿಂದ ಲೇಖನಗಳನ್ನು ರಚಿಸುತ್ತಿದ್ದಾರೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications