ನಿಜವಾಯ್ತು ಬೆಕ್ಕಿನ ಭವಿಷ್ಯ: ಸೌದಿ ಎದುರು ರಷ್ಯಾಕ್ಕೆ 5-0ರ ಜಯ

ಮಾಸ್ಕೋ, ಜೂ. 14: ಸೌದಿ ಅರೇಬಿಯಾ ಮತ್ತು ಆತಿಥೇಯ ರಷ್ಯಾ ನಡುವಿನ ಫೀಫಾ ವಿಶ್ವಕಪ್ 2018ರ ಆರಂಭಿಕ ಪಂದ್ಯದಲ್ಲಿ ರಷ್ಯಾ 5-0 ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ ರಷ್ಯಾ ಫೀಫಾ ವಿಶ್ವಕಪ್ ಟೂರ್ನಿಯ ಭವಿಷ್ಯಕಾರ ಬೆಕ್ಕು ಅಚಿಲ್ಸ್ ನುಡಿದಿದ್ದ ಭವಿಷ್ಯ ನಿಜವಾಗಿದೆ.
ಪಂದ್ಯದ ಗೋಲ್ ಪಟ್ಟಿ ನೋಡಲು ಕ್ಲಿಕ್ ಮಾಡಿ
ಗುರುವಾರದ ಆರಂಭಿಕ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳ ಕಾದಾಟ ಕುತೂಹಲಕೆರಳಿಸಿತ್ತು. ಪಂದ್ಯ ಆರಂಭವಾಗಿ 12ನೇ ನಿಮಿಷದಲ್ಲಿ ಯೂರಿ ಗಜೀನ್ಸ್ಕಿ ಅವರು ಮೊದಲ ಗೋಲು ಬಾರಿಸಿ ರಷ್ಯಾದ ಗೋಲ್ ಖಾತೆ ತೆರೆದರು.
ಅನಂತರ ಇತ್ತಂಡಗಳ ನಡುವೆ ಗೋಲ್ ಗಾಗಿ ಭರ್ಜರಿ ಕಾದಾಟ ನಡೆಯಿತು. 43ನೇ ನಿಮಿಷದಲ್ಲಿ ಡೆನಿಸ್ ಡಿಮಿಟ್ರಿಯಾವಿಚ್ ಚೆರಿಶೇವ್ ಅವರು ಎರಡನೇ ಗೋಲ್ ಸಿಡಿಸಿ ರಷ್ಯಾಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರಷ್ಯಾ ಮತ್ತೆ ಮೂರು ಗೋಲ್ ದಾಖಲಿಸಿ ಎದುರಾಳಿಗೆ ಭರ್ಜರಿ ಅಂತರ ನೀಡಿತು.
ಫೀಫಾ ವಿಶ್ವಕಪ್ 2018 ಜಾಗತಿಕ ಸಮರದ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾಗಳ ಮುಖಾಮುಖಿಯಲ್ಲಿ ರಷ್ಯಾ ಗೆಲ್ಲುವುದಾಗಿ ರಷ್ಯಾ ಫೀಪಾ ವಿಶ್ವಕಪ್ ಅಧಿಕೃತ ಭವಿಷ್ಯಕಾರ ಬೆಕ್ಕು ಅಚಿಲ್ಸ್ ನುಡಿದಿತ್ತು. ಅದರಂತೆ ಈಗ ರಷ್ಯಾ ಗೆದ್ದಿದೆ.
ಪಂದ್ಯದುದ್ದಕ್ಕೂ ರಷ್ಯಾ ಆಟಗಾರರು ಅದ್ಭುತ ಆಟವನ್ನು ಪ್ರದರ್ಶಿಸಿ ಎದುರಾಳಿ ಸೌದಿ ಅರೇಬಿಯಾ ಒಂದೂ ಗೋಲ್ ದಾಖಲಿಸದಂತೆ ನೋಡಿಕೊಂಡಿದ್ದು ಗೆಲುವಿಗೆ ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications