ಮೆಚ್ಚಿನ ಫುಟ್‌ಬಾಲ್ ತಂಡವನ್ನು ಮಾರಲಿದ್ದಾರೆ ಸಚಿನ್ ತೆಂಡೂಲ್ಕರ್

ಕೇರಳ, ಸೆಪ್ಟೆಂಬರ್ 16: ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೆಚ್ಚಿನ ಕೇರಳ ಬ್ಲಾಸ್ಟರ್ಸ್ ಫುಟ್‌ಬಾಲ್ ತಂಡವನ್ನು ಮಾರಾಟ ಮಾಡುವ ಸಾಧ್ಯತೆ ಇದೆ.
ಸಚಿನ್ ಅವರು 2014ರಲ್ಲಿ ಕೆಲವು ಇತರ ಪಾಲುದಾರರೊಂದಿಗೆ ಐಎಸ್‌ಎಲ್ (ಇಂಡಿಯನ್ ಸೂಪರ್ ಲೀಗ್)ನ ಕೇರಳ ಬ್ಲಾಸ್ಟರ್ಸ್ ತಂಡವನ್ನು ಖರೀದಿಸಿದ್ದರು. ಆದರೆ ಈಗ ಅದನ್ನು ಮಾರುವ ಉಮೇದಿನಲ್ಲಿದ್ದಾರೆ.
2014 ರಲ್ಲಿ ಸಚಿನ್ ಅವರು ಪ್ರಸಾದ್.ವಿ.ಪತ್ಲೂರಿ ಎಂಬುವರ ಜತೆ ಸೇರಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಕೊಂಡುಕೊಂಡಿದ್ದರು. ಆದರೆ ಮರುವರ್ಷವೇ ಪ್ರಸಾದ್ ಅವರು ತಮ್ಮ ಪಾಲಿನ ಶೇರುಗಳನ್ನು ಸಚಿನ್ ಅವರಿಗೆ ಮಾರಿ ಫ್ರಾಂಚೈಸ್‌ನಿಂದ ಹೊರ ನಡೆದಿದ್ದರು.
ಆ ನಂತರ ಸಚಿನ್ ಜೊತೆಗೆ ತೆಲುಗು ಸ್ಟಾರ್‌ಗಳಾದ ಚಿರಂಜೀವಿ, ನಾಗಾರ್ಜುನ ಮತ್ತು ನಿರ್ಮಾಪಕ ಅಲ್ಲು ಅರ್ಜುನ್ ಅವರು ಕೇರಳ ಬ್ಲಾಸ್ಟರ್ಸ್‌ನ ಪಾಲುದಾರಿಕೆ ತೆಗೆದುಕೊಂಡಿದ್ದರು. ಈಗ ಸಚಿನ್ ಅವರು ಕೇರಳ ಪ್ರಾಂಚೈಸ್ ಅನ್ನು ದೊಡ್ಡ ಉದ್ಯಮಿಯೊಬ್ಬರಿಗೆ ಮಾರಲಿದ್ದಾರೆ ಎನ್ನುತ್ತಿವೆ ಮೂಲಗಳು.
ಐಎಸ್‌ಎಲ್ ಪ್ರಾರಂಭವಾದಾಗಿನಿಂದಲೂ ಸಚಿನ್ ಅವರು ಈ ಟೂರ್ನಿಯ ಪ್ರಮುಖ ಅಂಬಾಸಿಡರ್ ಆಗಿದ್ದರು. ಆದರೆ ಅವರು ಏಕೆ ಈಗ ಫ್ರಾಂಚೈಸ್‌ನಿಂದ ಹೊರ ನಡೆಯುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications