ಫೀಫಾ ವಿಶ್ವಕಪ್: ಸೌದಿ ಅರೇಬಿಯಾ ಎದುರು 2-1ರಿಂದ ಸೋತ ಈಜಿಪ್ಟ್


ಮಾಸ್ಕೋ, ಜೂ. 25: ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಎ ಗ್ರೂಪಿನಿಂದ ಕಣಕ್ಕಿಳಿದಿದ್ದ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ತಂಡಗಳಲ್ಲಿ ಸೌದಿ ಅರೇಬಿಯಾ 2-1ರ ಗೆಲುವು ಸಾಧಿಸಿದೆ. ಈಜಿಪ್ಟ್ ಸ್ಟಾರ್ ಆಟಗಾರ ಮೊಹಮದ್ ಸಲಾಹ್ ಅವರು ಒಂದು ಗೋಲ್ ಸಿಡಿಸಿ ತಂಡದ ಗೆಲುವಿಗೆ ಯತ್ನಸಿದರಾದರೂ ಗೆಲುವು ಅಂತಿಮವಾಗಿ ಸೌದಿ ಪರ ವಾಲಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಪಂದ್ಯದ ಮೊದಲಾರ್ಧದಲ್ಲಿ ಗೋಲ್ ಖಾತೆ ತೆರೆದಿದ್ದು ಈಜಿಪ್ಟೆ. ಈಜಿಪ್ಟ್ ನ ಸಲಾಹ್ 22ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟಿದ್ದರು. ಆದರೆ ಸೌದಿ ಅರೇಬಿಯಾ ಪಂದ್ಯದ ದ್ವಿತೀಯಾರ್ಧದಲ್ಲಿ ಎರಡು ಗೋಲ್ ಸಿಡಿಸಿ ಗೆಲುವನ್ನು ತನ್ನಡೆಗೆ ಸೆಳೆದುಕೊಂಡಿತು.
ಸೌದಿ ಅರೇಬಿಯಾದ ಸಲ್ಮಾನ್ ಅಲ್ ಫರಾಜ್ 51ನೇ ನಿಮಿಷದಲ್ಲಿ ಗೋಲ್ ಸಿಡಿಸಿ ಅಂಕವನ್ನು ಎದುರಾಳಿಯ ಅಂಕಕ್ಕೆ ಸರಿದೂಗಿಸಿದರು. ಅದಾಗಿ 90+5ನೇ ನಿಮಿಷದಲ್ಲಿ ಸೇಲಂ ಅಲ್ ದಾವ್ಸಾರಿ ಅವರು ಬಾರಿಸಿದ ಗೋಲ್ ನೆರವಿನೊಂದಿಗೆ ಸೌದಿ ಅರೇಬಿಯಾ ಗೆದ್ದು ಬೀಗುವಂತಾಯ್ತು.
ವೋಲ್ಗೊಗ್ರಾಡ್ ಅರೆನಾದಲ್ಲಿ ನಡೆದ ಈ ಪಂದ್ಯದ ವೇಳೆ 50ನೇ ನಿಮಿಷದಲ್ಲಿ ಈಜಿಪ್ಟ್ ನ ಆಲಿ ಗ್ಯಾಬ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯ್ತು. 86ನೇ ನಿಮಿಷದಲ್ಲಿ ಈಜಿಪ್ಟ್ ನ ಮತ್ತೊಬ್ಬ ಆಟಗಾರ ಅಹ್ಮದ್ ಫಾತಿ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications