For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Kylian Mbappe: ಕೈಲಿಯನ್ ಎಂಬಪ್ಪೆಗಾಗಿ ಹಣದ ರಾಶಿ ಸುರಿದ ಸೌದಿ ಅರೇಬಿಯಾದ ಅಲ್-ಹಿಲಾಲ್ ಕ್ಲಬ್

ಸದ್ಯ ವಿಶ್ವದ ಅತ್ಯುತ್ತಮ ಗೋಲ್‌ ಸ್ಕೋರರ್ ಆಗಿರುವ ಕೈಲಿಯನ್ ಎಂಬಪ್ಪೆ ಕಳೆದ ಕೆಲವು ವಾರಗಳಿಂದ ಸುದ್ದಿಯಲ್ಲಿರುವ ಕ್ರೀಡಾಳು ಆಗಿದ್ದಾರೆ. ಫ್ರಾನ್ಸ್ ಆಟಗಾರ ತನ್ನ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ತಂಡದೊಂದಿಗಿನ ಒಪ್ಪಂದವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾನೆ.

ಇದೀಗ ಕೈಲಿಯನ್ ಎಂಬಪ್ಪೆ 2024ರಲ್ಲಿ ಪಿಎಸ್‌ಜಿ ಕ್ಲಬ್ ಅನ್ನು ತೊರೆಯಲು ಬಯಸುತ್ತಿದ್ದರೆ, ಪಿಎಸ್‌ಜಿ ತನ್ನ ಒಪ್ಪಂದವನ್ನು ವಿಸ್ತರಿಸಲು ಎದುರು ನೋಡುತ್ತಿದೆ. ಇದೇ ವೇಳೆ ಪ್ರಸ್ತುತ ವರ್ಗಾವಣೆ ವಿಂಡೋದಲ್ಲಿ ಹೆಚ್ಚಿನ ಬಿಡ್‌ದಾರರಿಗೆ ಮಾರಾಟ ಮಾಡಲು ಉತ್ಸುಕವಾಗಿದೆ.

Saudi Arabian Football Club Al-Hilal Gave World Highest Bid For Kylian Mbappe: Know how much?

ಆದರೆ, ಕೈಲಿಯನ್ ಎಂಬಪ್ಪೆ ಮತ್ತು ಪಿಎಸ್‌ಜಿ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಸೌದಿ ಅರೇಬಿಯಾದಿಂದ ಹೆಚ್ಚು ಬೇಡಿಕೆ ಇದೆ. ಈಗಾಗಲೇ ಕೈಲಿಯನ್ ಎಂಬಪ್ಪೆಗಾಗಿ ಫ್ರೆಂಚ್ ಕ್ಲಬ್ 300 ಮಿಲಿಯನ್ ಯುರೋಗಳ (259 ಮಿಲಿಯನ್ ಪೌಂಡ್‌ಗಳು) 'ವಿಶ್ವದಾಖಲೆ' ಬಿಡ್ ಅನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.

300 ಮಿಲಿಯನ್ ಯುರೋ ಎಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 27,228,487,178. ಅಂದರೆ, ಎರಡು ಸಾವಿರದ ಏಳು ನೂರಾ ಇಪ್ಪತ್ತೆರಡು ಕೋಟಿ, ಎಂಬತ್ನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಒಂದು ನೂರಾ ಎಪ್ಪಂತ್ತೆಂಟು ರೂಪಾಯಿಗಳು.

ಸೌದಿ ಅರೇಬಿಯಾ ಕ್ಲಬ್ ಅಲ್-ಹಿಲಾಲ್ ಈ ಬೇಸಿಗೆಯಲ್ಲಿ ಈಗಾಗಲೇ ಖರೀದಿಸಲು ತುದಿಗಾಲಲ್ಲಿ ನಿಂತಿದೆ. ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ)ನಿಂದ ಕೈಲಿಯನ್ ಎಂಬಪ್ಪೆಗಾಗಿ ಸಹಿ ಹಾಕಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಇದನ್ನು ಪಿಎಸ್‌ಜಿ PSG ಒಪ್ಪಿಕೊಳ್ಳಲು ತಯಾರಾಗಿದೆ.

Saudi Arabian Football Club Al-Hilal Gave World Highest Bid For Kylian Mbappe: Know how much?

ಅಲ್-ಹಿಲಾಲ್‌ನಿಂದ ಲೀಗ್ 1 ​​ದೈತ್ಯ ಪ್ಯಾರಿಸ್ ಸೇಂಟ್-ಜರ್ಮೈನ್ ದೊಡ್ಡ ಬಿಡ್ ಅನ್ನು ಸ್ವೀಕರಿಸಿದ್ದಾರೆ ಎಂದು ಫುಟ್‌ಬಾಲ್ ವರ್ಗಾವಣೆ ಪರಿಣಿತ ಫ್ಯಾಬ್ರಿಜಿಯೊ ರೊಮಾನೊ ದೃಢಪಡಿಸಿದ್ದಾರೆ.

ಅಲ್-ಹಿಲಾಲ್ ಕ್ಲಬ್‌ಗೆ ಕೈಲಿಯನ್ ಎಂಬಪ್ಪೆಯೊಂದಿಗೆ ಮಾತುಕತೆ ನಡೆಸಲು ಪಿಎಸ್‌ಜಿ ಅನುಮತಿ ನೀಡಿದೆ ಎನ್ನಲಾಗಿದೆ. ಆದರೆ, ಎಂಬಪ್ಪೆ ತನ್ನ ವೃತ್ತಿಜೀವನ ಏರುಗತಿಯಲ್ಲಿರುವ ಸಮಯದಲ್ಲಿ ಸೌದಿ ಅರೇಬಿಯಾದ ಕ್ಲಬ್‌ಗೆ ಹೋಗುವುದನ್ನು ನೋಡುವುದು ಅಭಿಮಾನಿಗಳಿಗೆ ಅಸಮಾಧಾನವೆನಿಸಿದೆ.

ಕೆಲ ದಿನಗಳ ಹಿಂದೆ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಪೂರ್ವ-ಋತುವಿನ ಪ್ರವಾಸಕ್ಕಾಗಿ ಕೈಲಿಯನ್ ಎಂಬಪ್ಪೆ ಅವರನ್ನು ಪಿಎಸ್‌ಜಿ ತಮ್ಮ ತಂಡದಿಂದ ಹೊರಗಿಡಲು ನಿರ್ಧರಿಸಿತು. ಫ್ರೆಂಚ್ ಚಾಂಪಿಯನ್ಸ್ ತಂಡದಲ್ಲಿ ಫಾರ್ವರ್ಡ್‌ ಆಟಗಾರನ ಭವಿಷ್ಯದ ಮೇಲೆ ಮತ್ತಷ್ಟು ಅನುಮಾನ ಹುಟ್ಟು ಹಾಕಿತು.

ಪಿಎಸ್‌ಜಿ ಫ್ರಾನ್ಸ್‌ ನಾಯಕನ ಕೈಬಿಡುವುದಕ್ಕೆ ಯಾವುದೇ ಕಾರಣವನ್ನು ನೀಡಲಿಲ್ಲ. ಆದರೆ 24 ವರ್ಷದ ಕೈಲಿಯನ್ ಎಂಬಪ್ಪೆ ಹೊಸ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸುತ್ತಿದ್ದಾರೆ ಎಂದು ಕೆಲವು ವಾರಗಳವರೆಗೆ ಹೇಳಿದ್ದರು.

ಮುಂದಿನ ಋತುವಿನ ಮೊದಲು ರಿಯಲ್ ಮ್ಯಾಡ್ರಿಡ್‌ಗೆ ಸೇರಲು ಕೈಲಿಯನ್ ಎಂಬಪ್ಪೆ ನಿರ್ಧರಿಸಿದ್ದಾರೆ ಎಂಬ ಹೊಸ ಊಹಾಪೋಹಗಳ ನಡುವೆ ಅವರು ಪ್ರವಾಸದಿಂದ ಹೊರಗುಳಿದರು.

ಅತ್ತ ರಿಯಲ್ ಮ್ಯಾಡ್ರಿಡ್ ದೀರ್ಘಕಾಲದವರೆಗೆ ಕೈಲಿಯನ್ ಎಂಬಪ್ಪೆಗಾಗಿ ಸಹಿ ಹಾಕಲು ಉತ್ಸುಕವಾಗಿದೆ. ಎರಡು ತಂಡಗಳ ನಡುವೆ ಕೆಲವು ರೀತಿಯ ಒಪ್ಪಂದವು ಈಗಾಗಲೇ ಜಾರಿಯಲ್ಲಿದೆ ಎಂದು ಹಲವರು ತಿಳಿಸಿದ್ದಾರೆ. ಕೈಲಿಯನ್ ಎಂಬಪ್ಪೆ ಅವರ ಪ್ರಸ್ತುತ ಪಿಎಸ್‌ಜಿ ಒಪ್ಪಂದವು ಮುಂದಿನ ಬೇಸಿಗೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ ಅದನ್ನು ಒಂದು ವರ್ಷ ವಿಸ್ತರಿಸುವ ಆಯ್ಕೆಯನ್ನೂ ಸಹ ಹೊಂದಿದೆ.

Story first published: Monday, July 24, 2023, 18:05 [IST]
Other articles published on Jul 24, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+