ಅದೃಷ್ಟವಶಾತ್ ವಿಮಾನ ಅಪಘಾತದಿಂದ ಪಾರಾದ ಫುಟ್‌ಬಾಲ್ ಆಟಗಾರರು

ಮಾಸ್ಕೋ, ಜೂನ್ 19: ರಷ್ಯಾ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಸೌದಿ ಅರೆಬಿಯಾ ಫುಟ್‌ಬಾಲ್ ಆಟಗಾರರು ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಅವರು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಕಾರಣ ಎಲ್ಲರ ಜೀವ ಬಾಯಿಗೆ ಬಂದಿತ್ತು. ಆದರೆ ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತವಾಗಲಿಲ್ಲ.
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
ಸೌದಿ ಅರೆಬಿಯಾ ತಂಡವು ತಮ್ಮ ಮುಂದಿನ ಪಂದ್ಯಕ್ಕಾಗಿ ರೋಸ್ತೋವ್ ಆನ್ ಡಾನ್ ಗೆ ತೆರಳುತ್ತಿತ್ತು, ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮುಂಚೆ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಎಲ್ಲರನ್ನೂ ಗಾಬರಿಗೊಳಿಸಿತು.

ಆದರೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದನ್ನು ನಿರಾಕರಿಸಿರುವ 'ರೋಸಿಯಾ ಏರ್‌ಬಸ್' ಸಂಸ್ಥೆ, ಹಕ್ಕಿ ತಗುಲಿ ಬೆಂಕಿ ಕಾಣಿಸಿಕೊಂಡಿದೆಯಷ್ಟೆ' ಎಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬಗ್ಗೆ ಪೂರ್ಣ ತನಿಖೆ ಮಾಡುವುದಾಗಿ ಅದು ಹೇಳಿದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸೌದಿ ಅರೆಬಿಯಾದ ಮಾಧ್ಯಮಗಳು ಈಗಾಗಲೇ ವಿಮಾನದ ಎಂಜಿನ್ ಹಾಗೂ ರೆಕ್ಕೆಗೆ ಬೆಂಕಿ ಹೊತ್ತಿಕೊಂಡ ಚಿತ್ರಗಳು ಹಾಗೂ ವಿಡಿಯೋವನ್ನು ಪ್ರಸಾರ ಮಾಡುತ್ತಿವೆ.
ಮೊದಲ ಪಂದ್ಯದಲ್ಲಿ ರಷ್ಯಾ ವಿರುದ್ಧ ಸೋಲನ್ನನುಭವಿಸಿರುವ ಸೌದಿ ಅರೆಬಿಯಾ ತಂಡ ಈ ಬುಧವಾರ ಉರುಗ್ವೇಯನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications