For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಸರ್ಬಿಯಾಕ್ಕೆ ಸೋಲುಣಿಸಿದ ಸ್ವಿಟ್ಜರ್ ಲ್ಯಾಂಡ್

FIFA world cup 2018 : ಸರ್ಬಿಯಾಕ್ಕೆ ಸೋಲುಣಿಸಿದ ಸ್ವಿಟ್ಜರ್ ಲ್ಯಾಂಡ್ | Oneindia Kannada
Serbia vs Switzerland Live Score, FIFA World Cup 2018

ಮಾಸ್ಕೋ, ಜೂ. 22: ಫೀಫಾ ವಿಶ್ವಕಪ್ ಇ ಗುಂಪಿನ ಪಂದ್ಯದಲ್ಲಿ ಸ್ವಿಟ್ಜರ್ ಲ್ಯಾಂಡ್ ತಂಡವು ಸರ್ಬಿಯಾ ವಿರುದ್ಧ 2-1ರ ಗೆಲುವು ದಾಖಲಿಸಿದೆ. ಪಂದ್ಯದ ಆರಂಭದಲ್ಲಿ ಸರ್ಬಿಯಾ ಗೋಲ್ ಖಾತೆ ತೆರೆದು ಮುನ್ನಡೆ ತೋರಿಸಿತ್ತಾದರೂ ಅಂತಿಮವಾಗಿ ಸ್ವಿಟ್ಜರ್ ಲ್ಯಾಂಡ್ ಮೇಲು ಗೈ ಸಾಧಿಸಿತು.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958048

ಪಂದ್ಯಾರಂಭವಾಗುತ್ತಲೇ 5ನೇ ನಿಮಿಷದಲ್ಲಿ ಸರ್ಬಿಯಾದ ಅಲೆಕ್ಸಾಂಡರ್ ಮಿಟ್ರೋವಿಕ್ ಮೊದಲ ಗೋಲ್ ಬಾರಿಸಿ ಸರ್ಬಿಯಾಕ್ಕೆ 1-0ಯ ಮುನ್ನಡೆ ತಂದು ಕೊಟ್ಟರು. 52ನೇ ನಿಮಿಷದಲ್ಲಿ ಸ್ವಿಟ್ಜರ್ ಲ್ಯಾಂಡ್ ಗೋಲ್ ಬಾರಿಸಿತು. ಸ್ವಿಟ್ಜರ್ ಲ್ಯಾಂಡ್ ನ ಗ್ರ್ಯಾನಿಟ್ ಝಾಕಾ ಸಿಡಿಸಿದ ಗೋಲ್ ಸರ್ಬಿಯಾ ಮುನ್ನಡೆಯನ್ನು ಸರಿದೂಗಿಸಿದರು.

ಪಂದ್ಯದ ದ್ವಿತೀಯಾರ್ಧದ ಕೊನೇ ಕ್ಷಣದಲ್ಲಿ ಅಂದರೆ 90ನೇ ನಿಮಿಷದಲ್ಲಿ ಸ್ವಿಟ್ಜರ್ ಲ್ಯಾಂಡ್ ಮತ್ತೊಂದು ಗೋಲ್ ಹೊಡೆಯಿತು. ಝೆಹರ್ಡನ್ ಶಾಖರಿ ಅವರು ಸ್ವಿಟ್ಜರ್ ಲ್ಯಾಂಡನ್ನು ವಿಜಯದ ಹಾದಿಗೆ ತಂದಿಟ್ಟರು.

ಸೆರ್ಬಿಯಾ ತಂಡವನ್ನು ವ್ಲಾದಿಮಿರ್ ಸ್ಟೋಜೊಕೋವಿಕ್; ಬ್ರಾನಿಸ್ಲಾವ್ ಇವನೊವಿಕ್, ನಿಕೋಲಾ ಮಿಲೆನ್ಕೊವಿಕ್, ಡಸ್ಕೊ ಟೋಸಿಕ್, ಅಲೆಕ್ಸಾಂಡರ್ ಕೊಲಾರೊವ್; ದೂಸನ್ ಟಾಡಿಕ್, ನೆಮಂಜ ಮಾಟಿಕ್, ಲ್ಯೂಕಾ ಮಿಲಿವೊಜೆವಿಕ್, ಸೆರ್ಗೆಜ್ ಮಿಲಿಂಕೊವಿಕ್-ಸಾವಿಕ್, ಫಿಲಿಪ್ ಕೊಸ್ಟಿಕ್; ಅಲೆಕ್ಸಾಂಡರ್ ಮಿಟ್ರೋವಿಕ್ ಪ್ರತಿನಿಧಿಸಿದ್ದರು.

ಸ್ವಿಟ್ಜರ್ಲೆಂಡ್: ಯಾನ್ ಸೋಮರ್; ಸ್ಟೀಫನ್ ಲಿಚ್ಸ್ಟೇನ್ನರ್, ಫ್ಯಾಬಿಯನ್ ಶಾಯರ್, ಮ್ಯಾನುಯೆಲ್ ಅಕಾನ್ಜಿ, ರಿಕಾರ್ಡೊ ರೊಡ್ರಿಗಜ್; ಝೆಹರ್ಡನ್ ಶಾಖರಿ, ವಾಲೊನ್ ಬೆಹ್ರಾಮಿ, ಗ್ರ್ಯಾನಿಟ್ ಝಾಕಾ, ಬ್ಲೇರಿಮ್ ಡೆಝೈಲಿ, ಸ್ಟೀವನ್ ಜುಬರ್; ಹರಿಸ್ ಸೆಫೆರೋವಿಕ್. ತರಬೇತುದಾರ: ವ್ಲಾದಿಮಿರ್ ಪೆಟ್ಕೊವಿಕ್ (SUI) ಕಣಕ್ಕಿಳಿದಿದ್ದರು.

Story first published: Saturday, June 23, 2018, 2:13 [IST]
Other articles published on Jun 23, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+