Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

519 ನಿಮಿಷಗಳ ಕಾಲ ಯಾವುದೇ ಗೋಲು ನೀಡದ ಸ್ಪೇನ್‌ ಗೋಲ್‌ ಕೀಪರ್‌

ಫಿಫಾ ವಿಶ್ವಕಪ್‌ ನಡೆಯುತ್ತಿದೆ. ಈ ವಿಶ್ವಕಪ್‌ನಲ್ಲಿ ಹಲವು ಸ್ಟಾರ್‌ ಆಟಗಾರರು ಈಗಾಗಲೇ ದಾಖಲೆಯ ಪುಟಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಈಗಾಗಲೇ ತಮ್ಮ ಅಮೋಘ ಆಟದಿಂದ ದಾಖಲೆ ಬರೆದಿದ್ದಾರೆ. ಇವರು ಸತತ 7 ವಿಶ್ವಕಪ್‌ ಪಂದ್ಯಗಳಲ್ಲಿ ಗೋಲು ದಾಖಲಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈಗ ಇಂತಹದ್ದೇ ದಾಖಲೆಯನ್ನು ಸ್ಪೇನ್‌ ತಂಡದ ಗೋಲಿ ಉನೈ ಸೀಮನ್ ಬರೆದಿದ್ದಾರೆ.

ಸ್ಪೇನ್ ಫುಟ್‌ಬಾಲ್ ತಂಡದ ಗೋಲ್‌ ಕೀಪರ್ ಉನೈ ಸೀಮನ್ ಈಗ ಫಿಫಾ ವಿಶ್ವಕಪ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಇವರು ಗೋಲು ಪೆಟ್ಟಿಗೆಯ ಮುಂದೆ ನಿಂತು ಅತಿ ಹೆಚ್ಚು ಸಮಯ ಗೋಲು ಬಿಟ್ಟುಕೊಡದ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ ಇವರು ಫುಟ್ಬಾಲ್‌ ಇತಿಹಾಸದ 36 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು.

Unai Simon

ಸ್ಪೇನ್‌ ಹಾಗೂ ಆಸ್ಟ್ರಿಯಾ ತಂಡಗಳ ನಡುವೆ ಫಿಫಾ ವಿಶ್ವಕಪ್‌ ರೌಂಡ್ ಆಫ್‌ 32 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸ್ಪೇನ್‌ ತಂಡದ ಭರ್ಜರಿ ಪ್ರದರ್ಶನ ನೀಡಿ 3-0 ಗೋಲುಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಸ್ಪೇನ್‌ ರೌಂಡ್ ಆಫ್‌ 16ಗೆ ಅರ್ಹತೆ ಪಡೆಯಿತು. ಈ ಪಂದ್ಯದಲ್ಲಿ ಸ್ಪೇನ್‌ ಗೋಲಿ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲನ್ನು ಸಹ ನೀಡಲಿಲ್ಲ. ಈ ಮೂಲಕ ಉನೈ ಸೀಮನ್ ಹೊಸ ದಾಖಲೆಯನ್ನು ಬರೆದರು.

ವಿಶ್ವ ದಾಖಲೆ ಬರೆದ ಸ್ಪೇನ್‌ ಗೋಲ್‌ ಕೀಪರ್‌

ವಿಶ್ವಕಪ್ ಇತಿಹಾಸದಲ್ಲಿ ಸತತ 519 ನಿಮಿಷಗಳ ಕಾಲ ಯಾವುದೇ ಗೋಲು ನೀಡದ ಹೊಸ ಗಿನ್ನಿಸ್ ದಾಖಲೆಯನ್ನು ಸ್ಪೇನ್‌ ಗೋಲ್‌ ಕೀಪರ್ ಉನೈ ಸೀಮನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಇಟಲಿ ಮಾಜಿ ಗೋಲ್‌ಕೀಪರ್ ವಾಲ್ಟರ್ ಜೆಂಗೆ ಅವರ ಹೆಸರನಿಲ್ಲಿತ್ತು. ಇವರು 1990ರ ವಿಶ್ವಕಪ್‌ನಲ್ಲಿ ಸತತ 517 ನಿಮಿಷಗಳ ಕಾಲ ಒಂದೂ ಗೋಲು ಬಿಟ್ಟುಕೊಡದೆ ದಾಖಲೆ ಬರೆದಿದ್ದರು.

ಉನೈ ಸೀಮನ್ ಅವರ ಈ ಸುದೀರ್ಘ 'ಕ್ಲೀನ್ ಶೀಟ್' ಸಾಧನೆಯು ಎರಡು ವಿಶ್ವಕಪ್‌ಗಳಲ್ಲಿ ದಾಖಲಾಗಿದೆ. ಇವರು ಕತಾರ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಜಪಾನ್ ವಿರುದ್ಧದ ಪಂದ್ಯದ 51ನೇ ನಿಮಿಷದಲ್ಲಿ ಒಂದು ಗೋಲು ನೀಡಿ ಕೈ ಸುಟ್ಟುಕೊಂಡಿದ್ದರು. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕ್ಕೊ ವಿರುದ್ಧದ 120 ನಿಮಿಷಗಳ ಆಟದಲ್ಲಿ ಅವರು ಯಾವುದೇ ಗೋಲು ಬಿಟ್ಟುಕೊಟ್ಟಿರಲಿಲ್ಲ. ಈ ವಿಶ್ವಕಪ್‌ನಲ್ಲಿ ಇವರು ತಮ್ಮ ದಾಖಲೆಯನ್ನು ಮುಂದುವರೆಸಿದ್ದಾರೆ.

Story first published: Friday, July 3, 2026, 16:41 [IST]
Other articles published on Jul 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+