For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018 : ಎಫ್ ಸಿ ಬಾರ್ಸಿಲೋನಾ ಆಟಗಾರರ ಸಾಧನೆ!

By Mahesh
Messi and Iniesta

ಮಾಸ್ಕೋ, ಜೂನ್ 20: ರಷ್ಯಾದಲ್ಲಿ ನಡೆಯುತ್ತಿರುವ 21ನೇ ಫೀಫಾ ವಿಶ್ವಕಪ್ ನಲ್ಲಿ ವಿಶ್ವದ ಅಗ್ರಗಣ್ಯ ಲೀಗ್ ಗಳಲ್ಲಿ ಈಗಾಗಲೇ ಆಡಿ, ಜನಪ್ರಿಯತೆ ಗಳಿಸಿರುವ ಆಟಗಾರರ ದೊಡ್ಡ ದಂಡೇ ನೆರೆದಿದೆ. ಈ ಪೈಕಿ ಲಾ ಲೀಗಾದ ಟಾಪ್ ತಂಡ ಬಾರ್ಸಿಲೋನಾದ ಆಟಗಾರರು ಈ ಬಾರಿಯ ವಿಶ್ವಕಪ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ವಿಶ್ವಕಪ್ 2018ರ ಪ್ರತಿಯೊಂದು ಗುಂಪಿನ ಒಂದಿಲ್ಲೊಂದು ತಂಡದಲ್ಲಿ ಎಫ್‌ಸಿ ಬಾರ್ಸಿಲೋನಾ ತಂಡದ ಕನಿಷ್ಠ ಒಬ್ಬ ಆಟಗಾರ ಇರುವುದನ್ನು ಕಾಣಬಹುದು. ಈ ಮೂಲಕ ಎಫ್‌ಸಿ ಬಾರ್ಸಿಲೋನಾ ಹೊಸ ದಾಖಲೆ ಸಾಧಿಸಿದೆ.

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಸ್ಪರ್ಧೆಯಲ್ಲಿ 8 ಗುಂಪಿನಲ್ಲಿ 32 ತಂಡಗಳಿವೆ. ಪ್ರತಿಯೊಂದು ಗ್ರೂಪ್‌ಗಳಲ್ಲಿ 4 ತಂಡಗಳು ಸ್ಥಾನ ಪಡೆದಿದೆ. ಅತಿಥೇಯ ರಷ್ಯಾ ಎ' ಗುಂಪಿನಲ್ಲಿದ್ದರೆ, ಹಾಲಿ ಚಾಂಪಿಯನ್ ಜರ್ಮನಿ ಎಫ್' ಗುಂಪಿನಲ್ಲಿದೆ.

ಯಾವ ಗುಂಪಿನಲ್ಲಿ ಬಾರ್ಸಿಲೋನಾ ಆಟಗಾರರಿದ್ದಾರೆ?:
ಎ ಗುಂಪು: ಲೂಯಿಸ್ ಸ್ವಾರೇಝ್(ಉರುಗ್ವೆ)
ಬಿ ಗುಂಪು: ಆ್ಯಂಡ್ರೆಸ್ ಇನಿಯೆಸ್ಟಾ, ಸೆರ್ಗಿಯೋ ಬಸ್‌ ಕೆಟ್ಸ್, ಗೆರಾರ್ಡ್ ಪಿಕೆ, ಜೊರ್ಡಿ ಅಲ್ಬಾ(ಸ್ಪೇನ್).
ಸಿ ಗುಂಪು: ಸ್ಯಾಮುಯೆಲ್ ಉಮಿಟಿ ಮತ್ತು ಡೆಂಬೆಲೆ(ಫ್ರಾನ್ಸ್)
ಡಿ ಗುಂಪು: ಲಿಯೊನೆಲ್ ಮೆಸ್ಸಿ(ಅರ್ಜೆಂಟೀನಾ) ಮತ್ತು ಐವಾನ್ ರಾಕಿಟಿಕ್(ಕ್ರೊವೇಶಿಯಾ).
ಇ ಗುಂಪು: ಫಿಲಿಪ್ ಕುಟಿನ್ಹೊ ಮತ್ತು ಪೌಲಿನೊ (ಬ್ರೆಜಿಲ್)
ಎಫ್ ಗುಂಪು: ಮಾರ್ಕ್ ಆ್ಯಂಡ್ರೆ ಟೆರ್ ಸ್ಟೆಗೆನ್(ಜರ್ಮನಿ)
ಜಿ ಗುಂಪು: ಥಾಮಸ್ ವೆರ್ಮಲಿನ್(ಬೆಲ್ಜಿಯಂ)
ಎಚ್ ಗುಂಪು: ಯೆರ್ರಿ ಮಿನಾ(ಕೊಲಂಬಿಯಾ)

Story first published: Wednesday, June 20, 2018, 9:11 [IST]
Other articles published on Jun 20, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+