ಮಾಸ್ಕೋ, ಜು. 1: ರಷ್ಯಾದ ಲುಜ್ನಿಕಿ ಅರೇನಾದಲ್ಲಿ ಫೀಫಾ ವಿಶ್ವಕಪ್ ನಾಕೌಟ್ ಹಂತದ ಪ್ರವೇಶಕ್ಕಾಗಿ ಇಂದು ಸ್ಪೇನ್ ಮತ್ತು ಆತಿಥೇಯ ರಷ್ಯಾ ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳೂ ಬಲಿಷ್ಟವಾದುದೇ ಆದ್ದರಿಂದ ಪಂದ್ಯ ಕುತೂಹಲ ಮೂಡಿಸಿದೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸ್ಪೇನ್ ನಿಂದ ಡೇವಿಡ್ ಡೆ ಜಿಯಾ, ನ್ಯಾಚೊ, ಗೆರಾರ್ಡ್ ಪಿಕ್, ಸೆರ್ಗಿಯೋ ಬಸ್ಕ್ವೆಟ್ಸ್, ಕೊಕ್, ಮಾರ್ಕೊ ಅಸೆನ್ಸಿಯೊ, ಸೆರ್ಗಿಯೋ ರಾಮೋಸ್, ಜೋರ್ಡಿ ಆಲ್ಬಾ, ಡಿಯಾಗೋ ಕೋಸ್ಟ, ಡೇವಿಡ್ ಸಿಲ್ವಾ, ಇಸ್ಕೊ ಕಣಕ್ಕಿಳಿದಿದ್ದಾರೆ.
ರಷ್ಯಾದಿಂದ ಇಗೊರ್ ಅಕಿನ್ಫೀವ್, ಮಾರಿಯೋ ಫೆರ್ನಾಂಡಿಸ್, ಇಲ್ಯಾ ಕುಟೆಪೊವ್, ಸೆರ್ಗೆಯ್ ಇಗ್ನಶೆವಿಚ್, ಫ್ಯೋಡರ್ ಕುಡ್ರಿಯಾಶೊವ್, ಯೂರಿ ಝಿರ್ಕೋವ್, ರೋಮನ್ ಝೋಬ್ನಿ, ಅಲೆಕ್ಸಾಂಡರ್ ಗೋಲೊವಿನ್, ದಲೇರ್ ಕುಜಯಾವ್, ಅಲೆಕ್ಸಾಂಡರ್ ಸ್ಯಾಮೆಡೋವ್, ಆರ್ಟೌಬ ಪಂದ್ಯವನ್ನಾಡುತ್ತಿದ್ದಾರೆ.