Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ಲಬ್‌ಗಳಿಗೆ ಲೋನ್ ಆಫರ್ ಕೊಟ್ಟ ಸ್ಪ್ಯಾನಿಶ್ ಫುಟ್ಬಾಲ್ ಫೆಡರೇಶನ್

Spanish football federation offers clubs loans to pay bills

ಮ್ಯಾಡ್ರಿಡ್, ಮಾರ್ಚ್ 26: ಬಿಲ್‌ಗಳನ್ನು ಪೇ ಮಾಡುವುದಕ್ಕಾಗಿ ಕೆಳ ಮಟ್ಟದ ಕ್ಲಬ್‌ಗಳಿಗೆ ಸ್ಪ್ಯಾನಿಶ್ ಫುಟ್ಬಾಲ್ ಫೆಡರೇಶನ್ ಲೋನ್ ಆಫರ್ ನೀಡಿದೆ. ಕೊರೊನಾವೈರಸ್‌ನಿಂದ ಯಾವುದೇ ಟೂರ್ನಿಗಳು ನಡೆಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಕ್ಲಬ್‌ಗಳ ಆದಾಯಕ್ಕೆ ಸಮಸ್ಯೆಯಾಗಿದೆ. ಇದನ್ನು ಮನಗಂಡಿರುವ ಸ್ಪೇನ್ ಫೆಡರೇಶನ್ ವಿಶಿಷ್ಟ ನಡೆಗೆ ಮುಂದಾಗಿದೆ.

ಸ್ಪ್ಯಾನಿಶ್ ಫುಟ್ಬಾಲ್ ಫೆಡರೇಶನ್‌ನ ಅಧ್ಯಕ್ಷ ಲೂಯಿಸ್ ರುಬಿಯಲ್ಸ್ ಬುಧವಾರ (ಮಾರ್ಚ್ 25) ಈ ಘೋಷಣೆ ಹೊರಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರುಬಿಯಲ್ಸ್, ಲಾ ಲಿಗಾದೊಂದಿಗೂ ಮಾತನಾಡಿ ಅದರ ಕ್ಲಬ್‌ಗಳಿಗೆ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಪುರುಷರ ಮತ್ತು ಮಹಿಳೆಯರ ಹೊರಾಂಗಣ ಮತ್ತು ಒಳಾಂಗಣ ಫುಟ್‌ಬಾಲ್‌ನಲ್ಲಿ ಅರೆ-ವೃತ್ತಿಪರ ಮತ್ತು ವೃತ್ತಿಪರೇತರ ಕ್ಲಬ್‌ಗಳು ಸಾಲಕ್ಕೆ ಅರ್ಹತೆ ಹೊಂದಿವೆ ಎಂದು ರುಬಿಯಲ್ಸ್ ಹೇಳಿದ್ದಾರೆ. 'ಕ್ಲಬ್‌ಗಳ ವೇಜ್‌ ಬಿಲ್‌ಗಳಿಗೆ ಅನುಗುಣವಾಗಿ ಸುಮಾರು 4 ಮಿಲಿಯನ್ ಯೂರೋಸ್ (35,37,00,800 ರೂ.) ಸಾಲ ಪಡೆಯಬಹುದು ಎಂದು ಲೂಯಿಸ್ ತಿಳಿಸಿದ್ದಾರೆ.

Story first published: Thursday, March 26, 2020, 11:05 [IST]
Other articles published on Mar 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+