ಫೀಫಾ ವಿಶ್ವಕಪ್ 2018: ಸ್ವೀಡನ್ vs ಸೌತ್ ಕೊರಿಯಾ - Live Score

ಮಾಸ್ಕೋ, ಜೂ. 18: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಇಂದು ಸ್ವೀಡನ್ ಮತ್ತು ಸೌತ್ ಕೊರಿಯಾ ತಂಡಗಳು ಕಣಕ್ಕಿಳಿದಿವೆ. 12 ನಿಮಿಷಗಳ ಮುಕ್ತಾಯಕ್ಕೆ ಎರಡೂ ತಂಡಗಳ ಸ್ಕೋರ್ 0-0 ಇದೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ.
ಇತ್ತಂಡಗಳಲ್ಲಿ ಸ್ವೀಡನ್ ಕೊಂಚ ಬಲಾಡ್ಯ ತಂಡವಾಗಿದೆ. ಗ್ರೂಪ್ ಎಫ್ ನಿಂದ ತಂಡಗಳು ಕಾದಾಟಕ್ಕಿಳಿದಿದ್ದು ನಿಜ್ನಿ ನವ್ಗೊರೊಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಫೀಫಾ ರ್ಯಾಂಕಿಂಗ್ ನಲ್ಲಿ ಸ್ವೀಡನ್ 24ನೇ ಮತ್ತು ಸೌತ್ ಕೊರಿಯಾ 57ನೇ ಸ್ಥಾನದಲ್ಲಿದೆ.
ದಕ್ಷಿಣ ಕೊರಿಯಾ ಪರ ಜೋ ಹೈಯೊನ್-ವೂ, ಯಾಂಗ್ ಲೀ, ಪಾರ್ಕ್ ಜು-ಹೋ, ಕಿಮ್ ಯಂಗ್-ಗ್ವೋನ್, ಜಂಗ್ ಹ್ಯುನ್-ಸೂ, ಕೂ ಜಾ-ಚೊಲ್, ಕಿ ಸುಂಗ್-ಯುಯೆಂಗ್ (ಕ್ಯಾಪ್ಟನ್), ಲೀ ಜೇ-ಸಾಂಗ್, ಸನ್ ಹೆಂಗ್-ಮಿನ್, ಕಿಮ್ ಶಿನ್-ಹುಕ್ , ಹಂಗ್ ಹೆ-ಚಾನ್ ಪಂದ್ಯವನ್ನಾಡುತ್ತಿದ್ದಾರೆ.
ಸ್ವೀಡನ್ ನಿಂದ ರಾಬಿನ್ ಓಲ್ಸೆನ್, ಮೈಕೆಲ್ ಲುಸ್ಟಿಗ್, ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ (ಕ್ಯಾಪ್ಟನ್), ಲುಡ್ವಿಗ್ ಆಗಸ್ಸಿನ್ಸನ್, ಪೊಂಟಸ್ ಜಾನ್ಸನ್, ಸೆಬಾಸ್ಟಿಯನ್ ಲಾರ್ಸನ್, ಅಲ್ಬಿನ್ ಎಕ್ಡಾಲ್, ಎಮಿಲ್ ಫೊರ್ಸ್ಬರ್ಗ್, ವಿಕ್ಟರ್ ಕ್ಲೇಸ್ಸನ್, ಮಾರ್ಕಸ್ ಬರ್ಗ್, ಓಲಾ ಟೋವೊನೆನ್ ಕಣಕ್ಕಿಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications