

ನವದೆಹಲಿ, ಜೂ. 4: ಫೀಫಾ ಕೋಕಾ ಕೋಲಾ ವಿಶ್ವ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನದಲ್ಲಿರುವ ಸ್ವಿಜರ್ಲ್ಯಾಂಡ್, ರಷ್ಯಾದಲ್ಲಿ ಜೂನ್ 14ರಿಂದ ಜುಲೈ 15ರ ವರೆಗೆ ನಡೆಯಲಿರುವ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಸಜ್ಜಾಗುತ್ತಿದೆ.
2018ರ ಈ ವಿಶ್ವಕಪ್ ಗಾಗಿ ಗ್ರೂಪ್ ಇ ಯಲ್ಲಿ ಸ್ವಿಜರ್ಲ್ಯಾಂಡ್ ಕಣಕ್ಕಿಳಿದಿದೆ. ವ್ಲಾಡಿಮಿರ್ ಪೆಟ್ಕೊವಿಕ್ ತರಬೇತಿಯಲ್ಲಿರುವ ಸ್ವಿಜರ್ಲ್ಯಾಂಡ್ ಕೂಡ ಫುಟ್ಬಾಲ್ ಕ್ಷೇತ್ರದಲ್ಲಿ ತನ್ನದೇ ಸಾಧನೆಯಿಂದ ಗುರುತಿಸಿಕೊಂಡಿದೆ. 23 ಆಟಗಾರ ತಂಡದೊಂದಿಗೆ ಸ್ವಿಜರ್ಲ್ಯಾಂಡ್ ಫುಟ್ಬಾಲ್ ಸಮರಕ್ಕೆ ಸಜ್ಜಾಗಿದ್ದು ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಜೂನ್ 17ರಂದು ಸ್ವಿಜರ್ಲ್ಯಾಂಡ್ ಬಲಾಡ್ಯ ಬ್ರೆಜಿಲ್ ತಂಡವನ್ನು ಎದುರುಗೊಳ್ಳಲಿದ್ದು, ಝೆಹರ್ಡನ್ ಶಾಖರಿಯಂತ ಸ್ಟಾರ್ ಆಟಗಾರರಿರುವ ಸ್ವಿಸ್ ತಂಡ ಈ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ಸ್ವಿಜರ್ಲ್ಯಾಂಡ್ ತಂಡದ ಕುರಿತ ಚುಟುಕು ವಿವರ ಇಲ್ಲಿದೆ..
ಸ್ವಿಜರ್ಲ್ಯಾಂಡ್ ವಿಶ್ವ ಕಪ್ ಗುಂಪು: ಬ್ರೆಜಿಲ್, ಕೊಸ್ಟಾ ರಿಕಾ, ಸರ್ಬಿಯಾ ಮತ್ತು ಸ್ವಿಜರ್ಲ್ಯಾಂಡ್ ತಂಡಗಳು ಗ್ರೂಪ್ E ಯಲ್ಲಿದೆ.
ಆಡಲಿರುವ ಪಂದ್ಯಗಳು: 17 ಜೂನ್ - ಬ್ರೆಜಿಲ್ ಎದುರು, 22 ಜೂನ್ - ಸರ್ಬಿಯಾ ಎದುರು, 27 ಜೂನ್ - ಕೋಸ್ಟಾರಿಕಾ ಎದುರು
ಕೋಚ್: ವ್ಲಾದಿಮಿರ್ ಪೆಟ್ಕೊವಿಕ್, ವಯಸ್ಸು 54
ಸ್ವಿಜರ್ಲ್ಯಾಂಡ್ ವಿಶ್ವಕಪ್ ತಂಡ
ಗೋಲ್ ಕೀಪರ್ಸ್: ರೋಮನ್ ಬುರ್ಕಿ (ಬೊರುಶಿಯಾ ಡಾರ್ಟ್ಮಂಡ್), ಯವೊನ್ ಮೆವೊಗೊ (ಲೀಪ್ಜಿಗ್), ಯಾನ್ ಸೊಮ್ಮೆರ್ (ಬೋರುಸಿಯ ಮೊನ್ಚೆನ್ಗ್ಯಾಡ್ಬಾಚ್).
ಡೆಫೆಂಡರ್ಸ್: ಮ್ಯಾನುಯೆಲ್ ಅಕಾಂಜಿ (ಬೊರುಸ್ಸಿಯಾ ಡಾರ್ಟ್ಮಂಡ್), ಜೋಹಾನ್ ಡಿಜೌರೊ (ಆಂಟಲಿಯಾಸ್ಪೊರ್), ನಿಕೊ ಎಲ್ವೆಡಿ (ಬೊರುಶಿಯಾ ಮೊನ್ಚೆನ್ಗ್ಯಾಡ್ಬ್ಯಾಕ್), ಮೈಕೆಲ್ ಲ್ಯಾಂಗ್ (ಬಸೆಲ್), ಸ್ಟೀಫನ್ ಲಿಚ್ಸ್ಟೇನ್ನರ್ (ಜುವೆಂಟಸ್), ಜಾಕ್ವೆಸ್-ಫ್ರಾಂಕೋಯಿಸ್ ಮೌಬಾಂಜೆ (ಟೌಲೌಸ್), ರಿಕಾರ್ಡೋ ರೊಡ್ರಿಗಜ್ (ಮಿಲನ್) (ಡಿಪೋರ್ಟಿವೊ ಲಾ ಕೊರುನಾ).
ಮಿಡ್ ಫೀಲ್ಡರ್ಸ್: ವಾಲನ್ ಬೆಹ್ರಾಮಿ (ಉದಯೀಸ್), ಬ್ಲೆರಿಮ್ ಜೆಝೈಲಿ (ಬೊಲೊಗ್ನಾ), ಗೆಲ್ಸನ್ ಫೆರ್ನಾಂಡಿಸ್ (ಇಂಟ್ರಾಚ್ಟ್ ಫ್ರಾಂಕ್ಫರ್ಟ್), ರೆಮೋ ಫ್ರಾಯ್ಲರ್ (ಅಟಾಲಾಂಟಾ), ಝೆರ್ಡನ್ ಶಾಕಿರಿ (ಸ್ಟೋಕ್ ಸಿಟಿ), ಗ್ರ್ಯಾನಿಟ್ ಝಾಕಾ (ಆರ್ಸೆನಲ್), ಸ್ಟೀವನ್ ಜುಬರ್ (1899 ಹಾಫೆನ್ಹೇಮ್), ಡೆನಿಸ್ ಜಕರಿಯಾ ಬೋರುಷಿಯಾ ಮೊನ್ಚೆಗ್ಲ್ಯಾಡ್ಬ್ಯಾಕ್).
ಫಾರ್ವರ್ಡ್ಸ್: ಜೋಸಿಪ್ ಡ್ರಮಿಕ್ (ಬೋರುಷಿಯಾ ಮಾನ್ಚೆಗ್ಲ್ಯಾಡ್ಬ್ಯಾಕ್), ಬ್ರೆಲ್ ಎಂಬೊಲೊ (ಸ್ಖಾಲ್ಕೆ), ಮಾರಿಯೋ ಗವ್ರಾನೋವಿಕ್ (ಡಿನಾಮೊ ಝಾಗ್ರೆಬ್), ಹ್ಯಾರಿಸ್ ಸೆಫೆರೋವಿಕ್ (ಬೆನ್ಫಿಕಾ).