'ಬ್ಯೂಟಿಫುಲ್ ಗೇಮ್' ಫೀಫಾ ವಿಶ್ವಕಪ್ ನ ಹೆವಿವೇಯ್ಟ್ ಪ್ಲೇಯರ್

ಬೆಂಗಳೂರು, ಜೂನ್ 12: ವಿಶ್ವದ 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ವಿಶ್ವ ಸಮರಕ್ಕೆ ರಷ್ಯಾದ ಮೈದಾನಗಳು ಸಜ್ಜಾಗಿವೆ. ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯ ವಿಶ್ವಕಪ್ ನಲ್ಲಿ ಈ ಬಾರಿ ಆಡುತ್ತಿರುವ ಅತಿ ತೂಕದ ಆಟಗಾರರ ವಿವರ ಇಲ್ಲಿದೆ.
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.
ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು
ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.
ಜೂನ್ 14ರಂದು ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯ ನಡೆದರೆ, ಜುಲೈ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈ ಬಾರಿಯ ಚಾಂಪಿಯನ್ ಯಾರು ತಿಳಿಯಲಿದೆ.
90 ಪ್ಲಸ್ ತೂಗುವ ಆಟಗಾರರ ಪೈಕಿ ಇಂಗ್ಲೆಂಡಿನ ನಾಯಕ ಹ್ಯಾರಿ ಕೇನ್ ಕೂಡಾ ಇದ್ದಾರೆ. ಮಿಕ್ಕಂತೆ ಯಾವ ಯಾವ ದೇಶ ಯಾವ ಆಟಗಾರರು ಪಟ್ಟಿಯಲ್ಲಿದ್ದಾರೆ? ಯಾರು ಅತ್ಯಂತ ತೂಕದ ಆಟಗಾರ ಎಂದು ತಿಳಿಯಲು ಮುಂದೆ ಓದಿ...

91 ಕೆಜಿ ತೂಗುವ ಫುಟ್ಬಾಲ್ ಆಟಗಾರರು
* ಥಿಬಯು ಕೌರ್ಟಿಯಸ್ (ಗೋಲ್ ಕೀಪರ್) -ಬೆಲ್ಜಿಯಂ
* ಅಲಿಸ್ಸನ್ ಬೆಕರ್ (ಗೋಲ್ ಕೀಪರ್)- ಬ್ರೆಜಿಲ್
* ಆಂಡ್ರೆಯಸ್ ಕೊರ್ನೆಲಿಯಸ್ (ಸ್ಟ್ರೈಕರ್)- ಡೆನ್ಮಾರ್ಕ್
* ಓಲಿವಿಯರ್ ಜಿರೂ(ಸ್ಟ್ರೈಕರ್) -ಫ್ರಾನ್ಸ್
* ಫ್ರಾನ್ಸಿಸ್ ಉಜೊಹೊ (ಗೋಲ್ ಕೀಪರ್), ನೈಜೀರಿಯಾ

92 ಕೆಜಿ ತೂಗುವ ಫುಟ್ಬಾಲ್ ಆಟಗಾರರು
* ಕ್ಯಾಸಿಯೋ ರಮೋಸ್(ಗೋಲ್ ಕೀಪರ್), ಬ್ರೆಜಿಲ್
* ಕ್ಯಾಸ್ಪರ್ ಶ್ಕಿಮಿಚೆಲ್ (ಗೋಲ್ ಕೀಪರ್), ಡೆನ್ಮಾರ್ಕ್
* ವ್ಲಾಡಿಮಿರ್ ಸ್ಟೋಜೋವಿಚ್ (ಗೋಲ್ ಕೀಪರ್), ಸೆರ್ಬಿಯಾ
* ಪೆಪೆ ರೆನಾ (ಗೋಲ್ ಕೀಪರ್), ಸ್ಪೇನ್ (ಚಿತ್ರದಲ್ಲಿ)
* ಫ್ರೆಡ್ರಿಕ್ ಶ್ಕಾರಾಮ್ (ಗೋಲ್ ಕೀಪರ್) ಐಸ್ ಲ್ಯಾಂಡ್

93 ಹಾಗೂ 94 ಕೆಜಿ ತೂಗುವ ಆಟಗಾರರು
93 ಕೆಜಿ ತೂಗುವ ಆಟಗಾರರು:
* ಶೇರಿಫ್ ಎಕ್ರಾಮಿ(ಗೋಲ್ ಕೀಪರ್), ಈಜಿಪ್ಟ್
* ಮ್ಯಾನುಯಲ್ ನ್ಯೂಯಾ(ಗೋಲ್ ಕೀಪರ್), ಜರ್ಮನಿ
94 ಕೆಜಿ ತೂಗುವ ಆಟಗಾರರು:
* ಡ್ಯಾನಿ ವುಕೊವಿಚ್ (ಗೋಲ್ ಕೀಪರ್), ಆಸ್ಟ್ರೇಲಿಯಾ
* ರೊಮೆಲು ಲುಕಾಕು (ಸ್ಟ್ರೈಕರ್), ಬೆಲ್ಜಿಯಂ
* ಡೆನಿಯಲ್ ಅಕ್ಪೆಯಿ (ಗೋಲ್ ಕೀಪರ್), ನೈಜೀರಿಯಾ

95 ಹಾಗೂ 96 ಕೆ.ಜಿ ತೂಗುವ ಆಟಗಾರರು
95 ಕೆ.ಜಿ ತೂಗುವ ಆಟಗಾರರು
* ಯೆರಿ ಮಿನಾ (ಡಿಫೆಂಡರ್), ಕೊಲಂಬಿಯಾ
* ಅಹ್ಮದ್ ಹೆಗಾಜಿ (ಡಿಫೆಂಡರ್), ಈಜಿಪ್ಟ್
* ಅಲ್ಫೋನ್ಸೆ ಅರಿಯೋಲಾ (ಗೋಲ್ ಕೀಪರ್), ಫ್ರಾನ್ಸ್
96 ಕೆ.ಜಿ ತೂಗುವ ಆಟಗಾರರು
* ಲೊವ್ರೆ ಕಾಲಿನಿಕ್ (ಗೋಲ್ ಕೀಪರ್), ಕ್ರೋಷಿಯಾ
* ಜಾಕ್ ಬಟ್ಲ್ಯಾಂಡ್ (ಗೋಲ್ ಕೀಪರ್), ಇಂಗ್ಲೆಂಡ್ (ಚಿತ್ರದಲ್ಲಿರುವವರು)

97, 98 ಹಾಗೂ 99 ಕೆ.ಜಿ ತೂಗುವ ಆಟಗಾರರು
97 ಕೆ.ಜಿ ತೂಗುವ ಆಟಗಾರರು
* ಕಿಮ್ ಶಿನ್ ವೂಕ್ (ಸ್ಟ್ರೈಕರ್), ದಕ್ಷಿಣ ಕೊರಿಯಾ
* ಜಾನಿಕ್ ವೆಸ್ಟರ್ ಗಾರ್ಡ್ (ಡಿಫೆಂಡರ್), ಡೆನ್ಮಾರ್ಕ್
* ಅಬ್ದುಲ್ಲಾ ಅಲ್ಮುಯಿಯುಫ್ (ಗೋಲ್ ಕೀಪರ್), ಸೌದಿ ಅರೇಬಿಯಾ
* ಹ್ಯಾರಿ ಮಗ್ಯುರ್ (ಡಿಫೆಂಡರ್), ಇಂಗ್ಲೆಂಡ್
* ಹ್ಯಾರಿ ಕೇನ್ (ಸ್ಟ್ರೈಕರ್), ಇಂಗ್ಲೆಂಡ್
99 ಕೆ.ಜಿ ತೂಗುವ ಆಟಗಾರರು
* ರೋಮನ್ ಟೊರೆಸ್ (ಡಿಫೆಂಡರ್), ಪನಾಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications