Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಸೀನಿಯರ್ ಫೀಫಾ ವಿಶ್ವಕಪ್ ಕತಾರ್ ನಲ್ಲಲ್ಲ, ಫ್ರಾನ್ಸ್ ನಲ್ಲಿ!

ಮುಂದಿನ ಸೀನಿಯರ್ ಫೀಫಾ ವಿಶ್ವಕಪ್ ಕತಾರ್ ನಲ್ಲಲ್ಲ, ಫ್ರಾನ್ಸ್ ನಲ್ಲಿ! | Oneindia Kannada
The next senior FIFA World Cup is in France, not Qatar

ಮಾಸ್ಕೋ, ಜುಲೈ 17: ರಷ್ಯಾದಲ್ಲಿ ಮೊನ್ನೆಯಷ್ಟೇ (ಜುಲೈ 15) ಮುಗಿದ 2018ರ ಫೀಫಾ ವಿಶ್ವಕಪ್ ಸಮಾರೋಪದ ವೇಳೆ ಮುಂದಿನ ಫೀಫಾ ವಿಶ್ವಕಪ್ ಎಲ್ಲೆಂಬ ವಿಚಾರ ಬಹಳ ಚರ್ಚೆಯಾಗಿತ್ತು. ಅದರಂತೆ ಮುಂದಿನ ವಿಶ್ವಕಪ್ ಕತಾರ್ ನಲ್ಲಿ ಎಂಬುದೂ ಸಾಕಷ್ಟು ಪ್ರಚಾರಗೊಂಡಿತ್ತು. ಆದರೆ ಮಾಹಿತಿಯ ಪ್ರಕಾರ ಮುಂದಿನ ವಿಶ್ವಕಪ್ ಕತಾರ್ ನಲ್ಲಲ್ಲ, ಫ್ರಾನ್ಸ್ ನಲ್ಲಿ ನಡೆಯಲಿದೆ!

ಮುಂದಿನ ವಿಶ್ವಕಪ್ ಕತಾರ್ ನಲ್ಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಕಾಣಿಸಿಕೊಂಡ ಬಳಿಕ ಫೀಫಾ ಸಮಿತಿ, ಮುಂದಿನ ವರ್ಷ (2019ರ) ಸೀನಿಯರ್ ವನಿತಾ ವಿಶ್ವಕಪ್ ಪಂದ್ಯಾಟ ಫ್ರಾನ್ಸ್ ನಲ್ಲಿ ನಡೆಯಲಿರುವುದಾಗಿ ನೆನಪಿಸಿದೆ.

ಅಂದ್ಹಾಗೆ 2022ರ ಫೀಫಾ ವಿಶ್ವಕಪ್ ನಡೆಯೋದು ಕತಾರ್ ನಲ್ಲೆ. ಆದರೆ ಮುಂದಿನ 2019ರ ಫೀಫಾ (ವನಿತಾ) ವಿಶ್ವಕಪ್ ನಡೆಯೋದು ಫ್ರಾನ್ಸ್ ನಲ್ಲಿ. 2019ರ ಜೂನ್ 7ರಿಂದ ಜುಲೈ 7ರ ವರೆಗೆ ವಿವಿಧ 9 ತಾಣಗಳಲ್ಲಿ ವನಿತೆಯರಿಗಾಗಿ ಫುಟ್ಬಾಲ್ ಪಂದ್ಯಾಟಗಳು ನಡೆಯುವುದರಲ್ಲಿದೆ. ಹಾಗಾಗಿ ಮುಂದಿನ ಫೀಫಾ ವಿಶ್ವಕಪ್ ಫ್ರಾನ್ಸ್ ನಲ್ಲಿ ಅನ್ನೋದೇ ಸರಿಯಲ್ಲವೆ?

ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು 2016ರಲ್ಲಿ ಫಾತ್ಮಾ ಸಮೋರಾ ಅವರನ್ನು ಫುಟ್ಬಾಲ್ ಅಂತಾರಾಷ್ಟ್ರೀಯ ಆಡಳಿತ ಸಮಿತಿಯ ಮೊದಲ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅದರಂತೆ ಫ್ರಾನ್ಸ್ ನಲ್ಲಿ ಮುಂದಿನ ವರ್ಷ 8ನೇ ಆವೃತ್ತಿಯ ಫುಟ್ಬಾಲ್ ಹಬ್ಬ ಆರಂಭಗೊಳ್ಳಲಿದೆ. ಆದರೆ ಫ್ರಾನ್ಸ್ ಇದನ್ನು ಹೆಚ್ಚು ಪ್ರಚಾರ ಮಾಡಿಲ್ಲವಷ್ಟೆ.

Story first published: Tuesday, July 17, 2018, 23:00 [IST]
Other articles published on Jul 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+