Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಟ್ಯೂನೀಷಿಯಾ ವಿರುದ್ಧ ಇಂಗ್ಲೆಂಡ್ 2-1ರ ಗೆಲುವು

FIFA world cup 2018 : ಟ್ಯೂನೀಷಿಯಾ ವಿರುದ್ಧ ಇಂಗ್ಲೆಂಡ್ 2-1ರ ಗೆಲುವು | Oneindia Kannada
Tunisia vs England FIFA World Cup 2018: England beat Tunisia 2-1

ಮಾಸ್ಕೋ, ಜೂ. 19: ಫೀಫಾ ವಿಶ್ವಕಪ್ 2018ರ ಜಿ ಗ್ರೂಪಿನ ಟ್ಯೂನೀಷಿಯಾ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 2-1ರ ಗೆಲುವು ದಾಖಲಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ತಲಾ ಒಂದೊಂದು ಗೋಲ್ ಬಾರಿಸಿ ಇಂಗ್ಲೆಂಡ್ ಗೆಲುವಿನ ಗೆರೆ ದಾಟಿತು.

ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ

ಪಂದ್ಯಾರಂಭದಲ್ಲೇ ಅಂದರೆ 3ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಗೋಲ್ ದಾಖಲಾಗುವುದರಲ್ಲಿತ್ತು. ಆದರೆ ಟ್ಯೂನೀಷಿಯಾ ಗೋಲ್ ಕೀಪರ್ ಮೌಯಿಜ್ ಹ್ಯಾಸೆನ್ ಅವರು ಗೋಲ್ ತಪ್ಪಿಸಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ (11ನೇ ನಿಮಿಷದಲ್ಲಿ) ಇಂಗ್ಲೆಂಡ್ ಗೋಲ್ ಖಾತೆ ತೆರೆಯಿತು.

ಹರಿ ಕೇನ್ ಅವರು ಇಂಗ್ಲೆಂಡ್ ಪರ ಮೊದಲ ಗೋಲ್ ಬಾರಿಸಿದರು. 15ನೇ ನಿಮಿಷದಲ್ಲಿ ಟ್ಯೂನೀಷಿಯಾ ಆಟಗಾರನನ್ನು ಬದಲಿಸಿಕೊಂಡಿತು. ಟ್ಯೂನೀಷಿಯಾ ಗೋಲ್ ಕೀಪರ್ ಮೌಯಿಜ್ ಹ್ಯಾಸೆನ್ ಭುಜದ ಗಾಯಕ್ಕೊಳಗಾಗಿ ಮೈದಾನದಿಂದ ನಡೆದರು. ಅವರ ಜಾಗಕ್ಕೆ ಫರೂಕ್ ಬೆನ್ ಮುಸ್ತಾಫಾ ಸೇರಿಕೊಂಡರು.

35ನೇ ನಿಮಿಷದಲ್ಲಿ ಟ್ಯೂನೀಷಿಯಾ ಗೋಲ್ ಖಾತೆ ತೆರೆಯಿತು. ಫೆರ್ಜಾನಿ ಸಾಸ್ಸಿ ಅವರು ಟ್ಯೂನೀಷಿಯಾ ಪರ ಗೋಲ್ ಸಿಡಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು. ಮೊದಲಾರ್ಧದಲ್ಲಿ ಮತ್ತೆ ಗೋಲ್ ದಾಖಲಾಲಿಲ್ಲ. ಮೊದಲಾರ್ಧದ ಪಂದ್ಯದ ವೇಳೆ ಹೆಚ್ಚುವರಿ 3 ನಿಮಿಷಗಳನ್ನು ಸೇರಿಸಲಾಯಿತು.

ಪಂದ್ಯದ ದ್ವಿತೀಯಾರ್ಧದಲ್ಲೂ ಇತ್ತಂಡಗಳ ನಡುವೆ ಗೋಲ್ ಗಾಗಿ ಭರ್ಜರಿ ಕಾದಾಟ ನಡೆಯಿತು. 68ನೇ ನಿಮಿಷದಲ್ಲಿ ಇಂಗ್ಲೆಂಡ್ ನ ರಹೀಮ್ ಸ್ಟರ್ಲಿಂಗ್ ಹೊರ ನಡೆದು ಅವರ ಸ್ಥಾನವನ್ನು ಮಾರ್ಕಸ್ ರಾಶ್ಫೋರ್ಡ್ ತುಂಬಿದರು.

73ನೇ ನಿಮಿಷದಲ್ಲಿ ಟ್ಯೂನೀಷಿಯಾ ಆಟಗಾರ ನೈಮ್ ಸ್ಲಿತಿ ಬದಲಿಗೆ ಬೆನ್ ಅಮೋರ್ ಮೈದಾನಕ್ಕಿಳಿದರು. ಪಂದ್ಯ ಮುಕ್ತಾಯದ ಸಮೀಪಕ್ಕೆ ಬಂದಾಗ 91ನೇ ನಿಮಿಷದಲ್ಲಿ (4 ಹೆಚ್ಚುವರಿ ನಿಮಿಷಗಳನ್ನು ಸೇರಿಸಿದ್ದರಿಂದ) ಇಂಗ್ಲೆಂಡ್ ನ ಹರಿಕೇನ್ ಗೋಲ್ ಸಿಡಿಸಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು.

Story first published: Tuesday, June 19, 2018, 12:01 [IST]
Other articles published on Jun 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+