ವಿಶ್ವಕಪ್ ಅಂಗಳದಲ್ಲಿ 'ಫುಟ್ಬಾಲ್ ಮಾಂತ್ರಿಕ' ಮೆಸ್ಸಿ ಹುಟ್ಟುಹಬ್ಬ
ಬೆಂಗಳೂರು, ಜೂನ್ 24: ಎಫ್ ಸಿ ಬಾರ್ಸಿಲೋನಾ ಹಾಗೂ ಅರ್ಜೆಂಟೀನಾದ ಮುಂಪಡೆ ಆಟಗಾರ ಲಿಯೊನೆಲ್ ಮೆಸ್ಸಿ ಅವರಿಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ರಷ್ಯಾದಲ್ಲಿ ನಡೆದಿರುವ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
1987ರಲ್ಲಿ ಜನಿಸಿದ ಮೆಸ್ಸಿ ಅವರಿಗೆ ರಷ್ಯಾದಲ್ಲಿನ ಅಭಿಮಾನಿಗಳಿಂದ ಫೀಫಾ ವಿಶ್ವಕಪ್ ವಿನ್ಯಾಸದ ಕಪ್,ಮೆಸ್ಸಿ ಎತ್ತರ ಚಾಕಲೋಟ್ ಕೇಕ್ ಗಳನ್ನು ಗಿಫ್ಟ್ ಆಗಿ ನೀಡಲಾಗುತ್ತಿದೆ.
ಫುಟ್ಬಾಲ್ ಕ್ಷೇತ್ರದ ದಿಗ್ಗಜ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಶ್ಚಿಯಾನೊ ರೊನಾಲ್ಡೊ ಇಬ್ಬರ ಸಾಧನೆ ಪಟ್ಟಿಯಲ್ಲಿ ಒಂದೇ ಕೊರತೆ ಎದ್ದು ಕಾಣುತ್ತಿದೆ. ಇಬ್ಬರೂ ಕೂಡಾ ಇಲ್ಲಿ ತನಕ ವಿಶ್ವಕಪ್ ಗೆದ್ದಿಲ್ಲ.
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
14 ವರ್ಷಗಳ ವೃತ್ತಿ ಬದುಕು ಕಂಡಿರುವ ಮೆಸ್ಸಿ ಅವರು 32 ಪ್ರಶಸ್ತಿ, 5 ಬಾರಿ ಬಾಲಾನ್ ಡಿ ಓರ್ ಗಳಿಸಿದ್ದು, ಹತ್ತು ಹಲವು ದಾಖಲೆಗಳನ್ನು ಮುರಿದಿದ್ದಾರೆ. ಈ ಬಾರಿ ವಿಶ್ವಕಪ್ ಗೆದ್ದು, ಅರ್ಜೆಂಟೀನಾ ಮತ್ತೊಮ್ಮೆ ಚಾಂಪಿಯನ್ ಆಗುವಂತೆ ಮಾಡಲಿ ಎಂಬುದು ಅಭಿಮಾನಿಗಳ ಹಾರೈಕೆ.
ಪಶ್ಚಿಮ ಬಂಗಾಲದ ಇಚ್ಛಾಪುರದಲ್ಲಿ ಸಂಭ್ರಮ
ಭಾರತದ ಪಶ್ಚಿಮ ಬಂಗಾಲದ ಇಚ್ಛಾಪುರದ ಶಿವ ಶಂಕರ್ ಪಾತ್ರಾ ಅವರ ಚಹಾದಂಗಡಿಯಲ್ಲಿ ಮೆಸ್ಸಿ ಹುಟ್ಟುಹಬ್ಬದ ಸಂಭ್ರಮ.
ಬಾಲಕ ಮೆಸ್ಸಿಗೆ ಎಲ್ಲಾ ಗಿಫ್ಟ್ ಸಿಕ್ಕಿದೆ
ಬಾಲಕ ಮೆಸ್ಸಿಗೆ ಎಲ್ಲಾ ಗಿಫ್ಟ್ ಸಿಕ್ಕಿದೆ. ಒಂದೇ ಒಂದು ಗಿಫ್ಟ್ ಮಾತ್ರ ಸಿಗಬೇಕಿದೆ.
ವಿಡಿಯೋ ಮೂಲಕ ಶುಭ ಹಾರೈಕೆ
ಎಫ್ ಸಿ ಬಾರ್ಸಿಲೋನಾದಿಂದ ಮೆಸ್ಸಿಗೆ ವಿಡಿಯೋ ಮೂಲಕ ಶುಭ ಹಾರೈಕೆ
ಎಲ್ಲರ ಮೆಚ್ಚುಗೆಯ ಮೆಸ್ಸಿ
ಎಲ್ಲರ ಮೆಚ್ಚುಗೆಯ ಮೆಸ್ಸಿ ಆಟ ನೋಡುವುದಕ್ಕಾಗಿ ನಾನು ಕಾತುರನಾಗಿರುತ್ತೇನೆ. ಫುಟ್ಬಾಲ್ ಮೇಲೆ ಮೋಹ ಉಂಟಾಗಲು ಮೆಸ್ಸಿಯ ಆಟವೇ ಕಾರಣ ಎಂದು ಶುಭ ಹಾರೈಸಿದ ಅಭಿಮಾನಿಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications