2026ರಲ್ಲಿ ಯುಎಸ್ಎ, ಮೆಕ್ಸಿಕೋದಲ್ಲಿ ಫೀಫಾ ವಿಶ್ವಕಪ್ ಸಂಭ್ರಮ
ನ್ಯೂಯಾರ್ಕ್, ಜೂನ್ 13: ಫೀಫಾ ವಿಶ್ವಕಪ್ 2018 ಆರಂಭಕ್ಕೆ ಸಂದರ್ಭದಲ್ಲೆ 2026ರ ವಿಶ್ವಕಪ್ ಆಯೋಜನೆಗಾಗಿ ನಡೆದ

ಮತದಾನದಲ್ಲಿ ಯುಎಸ್ಎ ಹಾಗೂ ಮೆಕ್ಸಿಕೋ ಜಂಟಿಯಾಗಿ ಆತಿಥ್ಯ ವಹಿಸಿಕೊಳ್ಳಲು ಮುಂದಾಗಿವೆ. ಈ ಮೂಲಕ ಭಾರಿ ಪೈಪೋಟಿ ನೀಡಿದ್ದ ಮೊರಕ್ಕೋವನ್ನು ಹಿಂದಿಕ್ಕಿವೆ.
ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು
ಯುಎಸ್ಎ ಹಾಗೂ ಮೆಕ್ಸಿಕೋ ಪರ 134 ಮತಗಳು ಬಂದರೆ, ಮೊರಕ್ಕೋ ಪರ 65 ಮತಗಳು ಬಂದಿವೆ. ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಯುಎಸ್ಎ ಹಾಗೂ ಮೆಕ್ಸಿಕೋ ಪರ ಲಾಬಿ ಜೋರಾಗಿತ್ತು. ಅಮೆರಿಕದ ಅಧಿಕಾರ ಹೊಂದಿರುವ ಅಮೆರಿಕನ್ ಸಮೊಹಾ, ಯುಎಸ್ ವರ್ಜಿನ್ ಐಲ್ಯಾಂಡ್, ಗಯುಂ ಮುಂತಾದ ದೇಶಗಳ ಪ್ರತಿನಿಧಿಗಳು ವೋಟಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಯುಎಸ್ಎ ಒತ್ತಡ ಹೇರಿದೆ ಎನ್ನಲಾಗಿತ್ತು.
ಸ್ಪೇನ್ ತನ್ನ ತಂಡದ ಕೋಚ್ ಯೂಲೆನ್ ಲೊಪೆಟೆಗುಯಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿದ್ದು, ಈ ಗೊಂದಲದ ನಡುವೆ, ವೋಟಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಈ ಬಾರಿ ಅಫ್ರಿಕನ್ ದೇಶದ ಬದಲಿಗೆ ಅಮೆರಿಕಕ್ಕೆ ವಿಶ್ವಕಪ್ ಆಯೋಜನೆಯ ಅವಕಾಶ ಸಿಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications