Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ 2018: ಬ್ರೆಜಿಲ್ ಗೆ 2-1ರಿಂದ ದಂಗುಬಡಿಸಿದ ಬೆಲ್ಜಿಯಂ

World Cup 2018: Belgium stun Brazil 2-1

ಮಾಸ್ಕೋ, ಜು.7: ರಷ್ಯಾದ ಕಝಾನ್ ಅರೆನಾದಲ್ಲಿ ನಡೆದ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಬೆಲ್ಜಿಯಂ 2-1 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಪ್ರಥಮಾರ್ಧದಲ್ಲಿ ಸಿಡಿಸಿದ ಎರಡು ಗೋಲ್ ಗಳ ನೆರವಿನಿಂದ ಬೆಲ್ಜಿಯಂ ತಂಡ ನೇಮರ್ ಬಳಗಕ್ಕೆ ಕಹಿಯುಣಿಸಿತು. ಈ ಗೆಲುವಿನೊಂದಿಗೆ ಬೆಲ್ಜಿಯಂ ಸೆಮಿಫೈನಲ್ ಗೆ ಪ್ರವೇಶಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಪಂದ್ಯಾರಂಭವಾಗುತ್ತಲೇ ಬೆಲ್ಜಿಯಂ ಪರ ಫರ್ನಾಂಡಿನೋ 13ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಮತ್ತೆ 31ನೇ ನಿಮಿಷದಲ್ಲಿ ಕೆವಿನ್ ಡೆ ಬ್ರುಯ್ನೆ ಇನ್ನೊಂದು ಗೋಲ್ ಬಾರಿಸಿ ಬ್ರೆಜಿಲ್ ಇನ್ನಷ್ಟು ಒತ್ತಡಕ್ಕೀಡಾಗುವಂತೆ ಮಾಡಿದರು.

ಬ್ರೆಜಿಲ್ ಪರ ರೆನಾಟೊ ಅಗಸ್ಟೊ 76ನೇ ನಿಮಿಷದಲ್ಲಿ ಗೋಲ್ ಸಿಡಿಸಿದರಾದರೂ ಆ ಗೋಲ್ ಗೆಲುವು ತರಲಿಲ್ಲ. ದ್ವಿತೀಯಾರ್ಧದಲ್ಲಿ 5 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಬ್ರೆಜಿಲ್ ಗೋಲ್ ಬಾರಿಸದೆ ಶರಣಾಯಿತು. ಪ್ರಥಮಾರ್ಧದಲ್ಲಿ 1 ಹೆಚ್ಚುವರಿ ನಿಮಿಷವನ್ನು ಸೇರಿಸಲಾಗಿತ್ತು.

ಪಂದ್ಯದ ವೇಳೆ ಇತ್ತಂಡಗಳಿಂದ ಒಟ್ಟು ನಾಲ್ಕುಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಬೆಲ್ಜಿಯಂ ಎರಡು ಬಾರಿ, ಬ್ರೆಜಿಲ್ ಮೂರು ಬಾರಿ ತಂಡದ ಆಟಗಾರರನ್ನು ಬದಲಿಸಿಕೊಂಡಿತು. ಒಟ್ಟಿನಲ್ಲಿ ಕರಾರುವಕ್ಕಾದ ಮತ್ತು ಚುರುಕಿನಾಟ ಆಡುವಲ್ಲಿ ವಿಫಲವಾಗಿದ್ದು ಬ್ರೆಜಿಲ್ ಸೋಲಿಗೆ ಕಾರಣವಾಯ್ತು.

Story first published: Saturday, July 7, 2018, 2:49 [IST]
Other articles published on Jul 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+