Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಬೆಲ್ಜಿಯಂ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಫ್ರಾನ್ಸ್

World Cup 2018: France beat Belgium 1-0

ಮಾಸ್ಕೋ, ಜುಲೈ 11: ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಟ ಬೆಲ್ಜಿಯಂ ತಂಡವನ್ನು 1-0 ಅಂತರದಿಂದ ಸೋಲಿಸಿದ ಫ್ರಾನ್ಸ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಫ್ರಾನ್ಸ್ ಗೆಲುವನ್ನು ಸಂಭ್ರಮಿಸಿತು.

ಪಂದ್ಯದ ಸ್ಕೋರ್ ಕಾರ್ಡ್

ಫ್ರಾನ್ಸ್ ನ ಸ್ಯಾಮ್ಯುಯೆಲ್ ಉಮ್ಟಿಟಿ ಅವರು 51ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫ್ರಾನ್ಸ್ ವಿಜಯದ ನಗು ಬೀರುವಂತೆ ಮಾಡಿದರು. ಫ್ರಾನ್ಸ್ 45ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸುವುದರಲ್ಲಿತ್ತು. ಆದರೆ ಅದನ್ನು ಲುಕಾಕು ಅವರು ತಪ್ಪಿಸಿದರು.

61ನೇ ನಿಮಿಷದಲ್ಲಿ ಬೆಲ್ಜಿಯಂನ ಕೆವಿನ್ ಡೆ ಬ್ರುಯಿನ್ ಅವರು ಗೋಲ್ ಬಾರಿಸಿ ಫ್ರಾನ್ಸ್ ನೀಡಿದ್ದ 1-0 ಅಂತರವನ್ನು ಸರಿದೂಗಿಸಲು ಪ್ರಯತ್ನಿಸಿದ್ದರು. ಆದರೆ ಆ ಹೊಡೆತದಿಂದ ಚಿಮ್ಮಿದ ಗೋಲ್ ನೇರವಾಗಿ ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್ ಅವರ ಕೈ ಸೇರಿತ್ತು.

ಪಂದ್ಯದ ಪ್ರಥಮಾರ್ಧಲ್ಲಿ 1 ಹೆಚ್ಚುವರಿ ನಿಮಿಷ ಮತ್ತು ದ್ವಿತೀಯಾರ್ಧದಲ್ಲಿ 6 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಬೆಲ್ಜಿಯಂ ಗೋಲ್ ದಾಖಲಿಸಲು ವಿಫಲವಾಯಿತು. ಪಂದ್ಯದ ವೇಳೆ ಬೆಲ್ಜಿಯಂ ಪರ 3, ಫ್ರಾನ್ಸ್ ಪರ 2 ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.

Story first published: Wednesday, July 11, 2018, 1:38 [IST]
Other articles published on Jul 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+