ಫೀಫಾ ವಿಶ್ವಕಪ್: ಸ್ವೀಡನ್ ವಿರುದ್ಧ ಹಾಲಿ ಚಾಂಪಿಯನ್ಸ್ ಜರ್ಮನಿಗೆ ಗೆಲುವು

ಮಾಸ್ಕೋ, ಜೂ. 24: ರಷ್ಯಾದ ಫಿಶ್ಟ್ ಸ್ಟೇಡಿಯಂನಲ್ಲಿ ನಡೆದ ಜರ್ಮನಿ-ಸ್ವೀಡನ್ ನಡುವಿನ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ 2-1ರ ಜಯ ಸಾಧಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಎರಡು ಗೋಲ್ ಬಾರಿಸಿ ಜರ್ಮನಿ ಗೆಲುವನ್ನಾಚರಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗೆ ಕ್ಲಿಕ್ ಮಾಡಿ
ಓಲಾ ಟೊವೊನೆನ್ ಅವರು 32ನೇ ನಿಮಿಷದಲ್ಲಿ ಗೋಲ್ ಬಾರಿಸಿ ಸ್ವೀಡನ್ ಗೆ 1-0ಯ ಮುನ್ನಡೆ ತಂದುಕೊಟ್ಟರು. ಇದಕ್ಕೂ ಮುನ್ನ 3ನೇ ನಿಮಿಷದಲ್ಲಿ ಜರ್ಮನಿ ಗೋಲ್ ಬಾರಿಸುವುದರಲ್ಲಿತ್ತು. ಆದರೆ ಸ್ವೀಡನ್ ಗೋಲ್ ಕೀಪರ್ ಗೋಲ್ ತಪ್ಪಿಸಿದರು. ಗೋಲ್ ಬಾರಿಸುವ ಜರ್ಮನಿಯ ಎರಡನೇ ಪ್ರಯತ್ನವನ್ನೂ ಸ್ವೀಡನ್ ಗೋಲ್ ಕೀಪರ್ ರಾಬಿನ್ ಓಲ್ಸೆನ್ ಹಿಮ್ಮೆಟ್ಟಿಸಿದರು.
ಪಂದ್ಯದ ಪ್ರಥಮಾರ್ಧ ಅವಧಿ ಮುಕ್ತಾಯಕ್ಕೂ ಮುನ್ನ ಎರಡು ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ಈ ಸಂದರ್ಭ ಅಂದರೆ 45+2ನೇ ನಿಮಿಷದಲ್ಲಿ ಸ್ವೀಡನ್ ಎರಡನೇ ಗೋಲ್ ದಾಖಲಿಸುವುದರಲ್ಲಿತ್ತು. ಆದರೆ ಜರ್ಮನಿ ಗೋಲ್ ಕೀಪರ್ ಮ್ಯಾನುಯೆಲ್ ನ್ಯೂಯರ್ ಗೋಲ್ ತಪ್ಪಿಸಿ ತಂಡವನ್ನು ಪಾರು ಮಾಡಿದರು.
48ನೇ ನಿಮಿಷದಲ್ಲಿ ಮಾರ್ಕೋ ರೀಸ್ ಅವರು ಗೋಲ್ ಸಿಡಿಸಿ ಜರ್ಮನಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು. 90+5ನೇ ನಿಮಿಷಲ್ಲಿ ಜರ್ಮನಿಯ ಟೋನಿ ಕ್ರೂಸ್ ಗೋಲ್ ಸಿಡಿಸಿ ಜರ್ಮನಿ ಗೆಲುವಿಗೆ ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications