ಫೀಫಾ ವಿಶ್ವಕಪ್: 3ನೇ ಪಂದ್ಯಕ್ಕಾಗಿ ಎದುರಾಗಿವೆ ಇರಾನ್-ಮೊರಾಕೋ

ಮಾಸ್ಕೋ, ಜೂ. 15: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪಂದ್ಯಾಟದ ಮೂರನೇ ಪಂದ್ಯವಾಗಿ ಮೊರಾಕೋ ಮತ್ತು ಇರಾನ್ ತಂಡಗಳು ಎದುರಾಗಿದೆ. ತಂಡದ ಬಲಾಬಲ ಗಮನಿಸಿದರೆ ಇರಾನ್ ಗೆಲ್ಲುವ ಸಾಧ್ಯತೆಯಿದ್ದು, ಪಂದ್ಯ ತಿರುವು ಪಡೆದುಕೊಂಡರೂ ಅಚ್ಚರಿಯಿಲ್ಲ.
ಪಂದ್ಯ ಈಗಾಗಲೇ ಆರಂಭಗೊಂಡಿದ್ದು 40 ನಿಮಿಷಗಳವರೆಗೆ ಎರಡೂ ತಂಡದಿಂದ ಗೋಲ್ ದಾಖಲಾಗದ್ದರಿಂದ 0-0 ಗೋಲ್ ನಿಂದ ಪಂದ್ಯ ಚಾಲ್ತಿಯಲ್ಲಿದೆ.
ಇರಾನ್ ಮತ್ತು ಮೊರಾಕೋ ಬಿ ಗ್ರೂಪಿನಲ್ಲಿದ್ದು ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಯಾವುದು ಗೆಲ್ಲಬಹುದೆಂದು ಸುಲಭವಾಗಿ ಹೇಳುವಂತಿಲ್ಲ. ಆದರೆ ಬಹುತೇಕ ಗೆಲುವು ಇರಾನ್ ಕಡೆಗೆ ಜಾರುವ ಸಾಧ್ಯತೆಯಿದೆ.
ಫೀಫಾ ಕೋಕಾಕೋಲಾ ವರ್ಲ್ಡ್ ರ್ಯಾಂಕಿಂಗ್ ನಲ್ಲಿ ಇರಾನ್ 37ನೇ ಮತ್ತು ಮೊರಾಕೋ 41ನೇ ಸ್ಥಾನದಲ್ಲಿದೆ. ಆದರೆ ಇವತ್ತಿನ ಪಂದ್ಯದಲ್ಲಿ ಈ ರ್ಯಾಂಕಿಂಗ್ ಅವಲಂಬಿಸಿ ಫಲಿತಾಂಶ ಬರಬೇಕೆಂದೇನೂ ಇಲ್ಲ. ಸಂದರ್ಭಗಳನ್ನು ಸದುಪಯೋಗ ಪಡಿಸಿಕೊಂಡು ಜಾಣ ಆಟ ಪ್ರದರ್ಶಿಸುವ ತಂಡದ ಕಡೆ ಗೆಲುವು ಸಾಗಲಿದೆ.
ಇರಾನ್ ತಂಡದಲ್ಲಿ ಅಲಿ ಬೈರನ್ವಾಂಡ್; ಹಜಿಸಾಫಿ, ಚೆಧಿಮಿ, ಪೌರಿಜಿಗನ್ಜಿ, ರೆಝಿಯನ್; ಶೋಜೈಯಿ, ಇಬ್ರಾಮಿಮಿ, ಅಮಿರಿ, ಅನ್ಸಾರಿಫಾರ್ಡ್; ಜಹಾನ್ಬಾಶ್ಶ್, ಅಜ್ಮೊನ್ ಇದ್ದಾರೆ. ಇತ್ತ ಮೊರಾಕೋ ತಂಡದಲ್ಲಿ ಎಲ್ ಕಜೌಯಿ; ಹಕಿಮಿ, ಬೆನೆಟ, ಸೈಸ್; ಬಸೌಫಾ, ಜಿಯಾಚ್, ಎಲ್ ಅಹ್ಮದಿ, ಹರಿತ್; ಎನ್ ಅಮ್ರಾಬಾತ್, ಎಲ್ ಕಾಬಿ, ಬೆಲ್ಹಂಡಾ ಕಾದಾಟಕ್ಕಿಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications