Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಡವಟ್ಟಿನಾಟಕೆ ಬೆಲೆತೆತ್ತ ಮೊರಾಕೋ: ಇರಾನ್ ಗೆ 1-0ರ ಜಯ

World Cup 2018, Morocco vs Iran: score and latest updates

ಮಾಸ್ಕೋ, ಜೂ. 15: ಫೀಫಾ ವಿಶ್ವಕಪ್ ಪಂದ್ಯಾಟದ ಮೂರನೇ ಪಂದ್ಯವಾಗಿ ಮೊರಾಕೋ ಮತ್ತು ಇರಾನ್ ತಂಡಗಳು ಎದುರಾಗಿದ್ದು, ಇದರಲ್ಲಿ ಇರಾನ್ ತಂಡ ಮೊರಾಕ್ಕೋ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದೆ. ಕೊನೇ ಹಂತದಲ್ಲಿ ಅಂದರೆ 95ನೇ ನಿಮಿಷದಲ್ಲಿ ಇರಾನ್ ಗೋಲ್ ದಾಖಲಿಸಿ ಗೆಲುವನ್ನು ಸಂಭ್ರಮಿಸಿತು.

ಗೋಲ್ ಪಟ್ಟಿ ವೀಕ್ಷಿಸಲು ಕ್ಲಿಕ್ ಮಾಡಿ

ಇರಾನ್ ಗೋಲ್ ಹೊಡೆಯಿತು ಅನ್ನುವುದಕ್ಕಿಂತ ಇದೊಂದು ರೀತಿಯ ಯಡವಟ್ಟಿನಾಟ. ಮೊರಾಕೋ ತಂಡದ ಅಜೀಜ್ ಬೌಹದ್ದೌಜ್ ಅವರು ಚೆಂಡಿಗೆ ತಲೆ ಕೊಟ್ಟು ಗೋಲನ್ನು ತಮ್ಮದೇ ನೆಟ್ ಒಳಗೆ ದಾಟಿಸಿ ಎದುರಾಳಿಯನ್ನು ಗೆಲ್ಲಿಸಿದರು. ಅಜೀಜ್ ಬೇಕೆಂದೇ ಹೀಗೆ ಮಾಡಿದ್ದಲ್ಲ. ಆದರೆ ಆಟದ ಭರದಲ್ಲಿ ತನ್ನಿಂದಲೇ ಎದುರಾಳಿ ಪರ ಗೋಲ್ ದಾಖಲಾಗಿ ಮೋರಾಕೋ ತಲೆ ಬಾಗುವಂತಾಯ್ತು.

ಪಂದ್ಯ ಆರಂಭಗೊಂಡ 28 ನಿಮಿಷಗಳವರೆಗೆ ಎರಡೂ ತಂಡದಿಂದ ಗೋಲ್ ದಾಖಲಾಗಲಿಲ್ಲ. ಎರಡೂ ತಂಡಗಳ ಜಿದ್ದಾಜಿದ್ದಿಯ ನಡುವೆಯೂ 79 ನಿಮಿಷಗಳವರೆಗೆ ಗೋಲ್ ಪಟ್ಟಿ 0-0 ಆಗಿತ್ತು.

ಇರಾನ್-ಮೊರಾಕೋ ನಡುವಿನ ಈ ಪಂದ್ಯ ಕೊಂಚ ರೋಚಕವಾಗಿ ಕಾಣಿಸಿದ್ದು ಸುಳ್ಳಲ್ಲ. ಪಂದ್ಯದ ವೇಳೆ ಅನೇಕ ಬಾರಿ ಗೋಲ್ ದಾಖಲಾಗುವ ಸನ್ನಿವೇಶ ಬಂದಿತ್ತಾದರೂ ಗೋಲ್ ಕೀಪರ್ ಗಳ ಕೈಚಳಕದಿಂದ ಚೆಂಡು ನೆಟ್ ಒಳಗೆ ಬೀಳಲಿಲ್ಲ.

ಈ ಪಂದ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆಟಗಾರರು ಗಾಯಕ್ಕೆ ತುತ್ತಾಗಿದ್ದು ಕಂಡುಬಂತು. ಎರಡೂ ತಂಡಗಳಿಂದ ಹೆಚ್ಚಿನ ಬದಲಿ ಆಟಗಾರರು ಮೈದಾನಕ್ಕಿಳಿಯಬೇಕಾಯಿತು.

67ನೇ ನಿಮಿಷದಲ್ಲಿ ಇರಾನ್ ನಾಯಕ ಮಸೌದ್ ಶೋಜೆಯಿ ಗಾಯಕ್ಕೊಳಗಾದರು. ಅವರ ಜಾಗಕ್ಕೆ ಮೆಹ್ದಿ ತರೇಮಿ ಸೇರಿಕೊಂಡರು. ಅನಂತರ 76ನೇ ಮತ್ತು 77ನೇ ನಿಮಿಷದಲ್ಲಿ ಮೊರಾಕೋ, 79ನೇ ನಿಮಿಷದಲ್ಲಿ ಇರಾನ್ ಆಟಗಾರರನ್ನು ಬದಲಿಸಿಕೊಂಡಿತು.

ಆಟಗಾರರ ಬದಲಾವಣೆ 84ನೇ ನಿಮಿಷದಲ್ಲೂ ಮುಂದುವರೆಯಿತು. 82ನೇ ನಿಮಿಷದಲ್ಲಿ ಮೊರಾಕೋ ಮೂರನೇ ಬದಲಿ ಆಟಗಾರರಾಗಿ ಡಾ ಕೋಸ್ಟ ಕಣಕ್ಕಿಳಿದರು. 84ನೇ ನಿಮಿಷದಲ್ಲಿ ಇರಾನಿಂದ ಅಲೈರೆಜಾ ಜಹಾನ್ಬಾಶ್ಶ್ ಗಾಯ ಮಾಡಿಕೊಂಡು ಹೊರ ನಡೆದರು. ಅವರ ಜಾಗವನ್ನು ಸಮನ್ ಘೋಡ್ಡೋಸ್ ತುಂಬಿಕೊಂಡರು.

Story first published: Friday, June 15, 2018, 22:51 [IST]
Other articles published on Jun 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+