ವಿಶೇಷ ಶಕ್ತಿಯ ಈ ಹಂದಿ ಹೇಳಿರುವ ವಿಶ್ವಕಪ್ ಭವಿಷ್ಯ ನಿಜವಾಗಬಲ್ಲದೆ?!

ಮಾಸ್ಕೋ, ಜೂ. 16: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಸೆಮಿಫೈನಲ್ ಪ್ರವೇಶಿಸುವ ತಂಡಗಳನ್ನು ಮಿಸ್ಟಿಕ್ ಹೆಸರಿನ ಈ ವಿಶೇಷ ಶಕ್ತಿಯ ಹಂದಿ ಭವಿಷ್ಯದ ಮೂಲಕ ಹೆಸರಿಸಿದೆ. ಹಂದಿಯೆಂದು ಕಡೆಗಣಿಸುವಂತಿಲ್ಲ; ಯಾಕೆಂದರೆ ಈ ಹಿಂದೆ ಇದೇ ಹಂದಿ ಪ್ರಮುಖ ವಿಚಾರಗಳ ಬಗ್ಗೆ ಹೇಳಿರುವ ಭವಿಷ್ಯ ನಿಜವಾಗಿದೆ.
ಇಂಗ್ಲೆಂಡ್ ನ ಡರ್ಬಿಷೈರ್ ನ ನಗರದ ಹೇಜ್ ಹಳ್ಳಿಯಲ್ಲಿರುವ ಮಿಸ್ಟಿಕ್ ಮರ್ಕ್ಯೂಸ್ ಎನ್ನುವ ಈ ಹಂದಿ ಈ ಬಾರಿಯ ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಸೆಮಿ ಫೈನಲ್ ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದೆ. ಹಂದಿಯ ಭವಿಷ್ಯದ ಪ್ರಕಾರ ಬೆಲ್ಜಿಯಂ, ಅರ್ಜೆಂಟೀನಾ, ನೈಜೀರಿಯಾ ಮತ್ತು ಉರುಗ್ವೆ ತಂಡಗಳು ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿವೆಯಂತೆ.
ದುರದೃಷ್ಟವೆಂದರೆ ಇಂಗ್ಲೆಂಡ್ ನಲ್ಲಿರುವ ಹಂದಿಯ ಫೀಫಾ ವಿಶ್ವಕಪ್ ಸೆಮಿ ಫೈನಲ್ ಭವಿಷ್ಯದಲ್ಲಿ ಇಂಗ್ಲೆಂಡ್ ತಂಡವೇ ಇಲ್ಲ. ಇದು ಇಂಗ್ಲೆಂಡ್ ಫುಟ್ಬಾಲ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಯಾಕೆಂದರೆ ಈ ಹಂದಿ ಹಿಂದೆ ಮಹತ್ವದ ಸಂಗತಿಗಳ ಬಗ್ಗೆ ಹೇಳಿರುವ ಭವಿಷ್ಯ ನಿಜವಾಗಿವೆಯಲ್ಲ!
ಫೀಫಾ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸುವ ತಂಡಗಳ ಭವಿಷ್ಯ ನುಡಿಯುವಂತೆ ಕೋರಿ ಎಲ್ಲಾ 32 ದೇಶಗಳ ಧ್ವಜ ಅಂಟಿಸಿರುವ ಸೇಬುಗಳನ್ನು ಹಂದಿಯ ಮುಂದಿಡಲಾಯಿತು. ಇದರಲ್ಲಿ ನಾಲ್ಕು ತಂಡಗಳನ್ನು ಪ್ರತಿನಿಧಿಸುವ ಆಪಲ್ ಗಳನ್ನಷ್ಟೇ ಹಂದಿ ತಿಂದಿದೆ.
ವಿಶೇಷವೆಂದರೆ ಈ ಹಂದಿ 2014ರ ಫೀಫಾ ವಿಶ್ವಕಪ್ ಭವಿಷ್ಯವನ್ನು ಸರಿಯಾಗಿ ಹೇಳಿತ್ತು. ಅಮೆರಿಕಾ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ ಎಂದಿದ್ದ ಮಿಸ್ಟಿಕ್ ಭವಿಷ್ಯವೂ ಕರೆಕ್ಟಾಗಿತ್ತು. ಸಾಲದಕ್ಕೆ ಬ್ರೆಕ್ಸಿಟ್ ಭವಿಷ್ಯವನ್ನು ನುಡಿದು ಸೈ ಎನಿಸಿಕೊಂಡಿತ್ತು ಎಂದು ಹಂದಿಯ ಒಡತಿ ಜೂಲಿಯೆಟ್ ಹೇಳುತ್ತಾರೆ.
ಹಂದಿಯ ಬಗ್ಗೆ ವಿವರಿಸುತ್ತ ಒಡತಿ ಜೂಲಿಯೆಟ್, 'ಹುಟ್ಟಿರುವ ಏಳು ಹಂದಿ ಮರಿಗಳಲ್ಲಿ ಮರ್ಕ್ಯೂಸ್ ಏಳನೆಯದು. ಇದಕ್ಕೆ ವಿಶೇಷ ಶಕ್ತಿಯಿದೆ. ಹಂದಿಯ ಭವಿಷ್ಯ ಕೌತುಗಳು ನಡೆಯುತ್ತಿರುವುದು ಈ ವಿಶೇಷ ಶಕ್ತಿಯಿಂದಲೇ ಇರಬೇಕು' ಎಂದಿದ್ದಾರೆ.
ಫೀಫಾ ವಿಶ್ವಕಪ್ ಕುರಿತು ಈ ಹಿಂದೆ ಭವಿಷ್ಯ ನುಡಿದು ಪೌಲ್ ಹೆಸರಿನ ಅಕ್ಟೋಪಸ್ ಸಕ್ಕತ್ ಫೇಮಸ್ ಆಗಿತ್ತು. ಈಸಾರಿ ಪೌಲ್ ಜಾಗವನ್ನು ಅಚಿಲ್ಸ್ ಹೆಸರಿನ ಬೆಕ್ಕು ತುಂಬಿದೆ. ಅಚಿಲ್ಸ್ ಈವರೆಗೆ ಹೇಳಿರುವ ಭವಿಷ್ಯವೂ ನಿಜವಾಗಿದ್ದು, ಮಿಸ್ಟಿಕ್ ಭವಿಷ್ಯವೂ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications