For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡ

By Mahesh
Fifa World Cup Squad 2018 : Ronaldo heads up Portugal squad as Barcas Gomes misses cut

ಬೆಂಗಳೂರು, ಮೇ 22: ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರಕ್ಕೆ ಪೋರ್ಚುಗಲ್ ತಂಡವನ್ನು ಪ್ರಕಟಿಸಲಾಗಿದೆ.

ವಿಶ್ವಕಪ್ ಗೆಲ್ಲುವ ಕನಸು ಹೊತ್ತುಕೊಂಡಿರುವ ತಂಡ, ಕಳೆದ ನೂರು ವರ್ಷಗಳಲ್ಲಿ ಬರಿಗೈಯಲ್ಲಿ ಹಿಂತಿರುಗಿದೆ. ಪ್ರತಿಭಾವಂತರಿದ್ದರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಪ್ರತಿಬಾರಿ ವಿಫಲವಾಗಿದೆ. 1966ರಿಂದ 2014ರ ತನಕ ಆಡಿರುವ ಪೋರ್ಚುಗಲ್ 1966ರಲ್ಲಿ ಮೂರನೇ ಸ್ಥಾನ ಗಳಿಸಿದ್ದೇ ದೊಡ್ಡ ಸಾಧನೆ.

ವಿಶ್ವಕಪ್ ಫುಟ್ಬಾಲ್ 2018 : ಸಂಪೂರ್ಣ ವೇಳಾಪಟ್ಟಿ

ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ತಂಡವನ್ನು ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರು ಮುನ್ನಡೆಸಲಿದ್ದಾರೆ. ನಾಲ್ಕನೇ ಬಾರಿ ವಿಶ್ವಕಪ್ ಆಡುತ್ತಿರುವ ರೊನಾಲ್ಡೋ ಈ ಬಾರಿ ಕಪ್ ಎತ್ತಿ ಹಿಡಿಯಲಿ ಎಂಬುದು ಅಭಿಮಾನಿಗಳ ಹಾರೈಕೆ.

ಆದರೆ, ಕೊನೆ ಗಳಿಗೆಯಲ್ಲಿ ಬಾರ್ಸಿಲೋನಾ ಪರ ಆಡುವ ಮಿಡ್ ಫೀಲ್ಡರ್ ಆಂಡ್ರೆ ಗೋಮ್ಸ್, ರುಬೆನ್ ನೆವೆಸ್ ತಂಡದಿಂದ ಹೊರಗುಳಿದಿರುವುದು ಕೋಚ್ ಫರ್ನಾಂಡೋ ಸ್ಯಾಂಟಸ್ ಅವರ ತಂಡಕ್ಕೆ ಭಾರಿ ಹಿನ್ನಡೆ ಎನ್ನಬಹುದು.

ಅನುಭವಿ ಆಟಗಾರ ನಾನಿ ಕೂಡಾ ತಂಡದಲ್ಲಿಲ್ಲ. ಈ ಬಾರಿ ರೊನಾಲ್ಡೋ ಜತೆಗೆ ಆಂಡ್ರೆ ಸಿಲ್ವ, ಬರ್ನಾಡೋ ಸಿಲ್ವಾ ಜೋಡಿಯಾಗಲಿದ್ದಾರೆ.

ಜೂನ್ 15ರಂದು ಸೋಚಿಯ ಫಿಸ್ಟ್ ಸ್ಟೇಡಿಯಂನಲ್ಲಿ ಸ್ಪೇನ್ ವಿರುದ್ಧ ಮೊದಲ ಪಂದ್ಯವನ್ನು ಪೋರ್ಚು ಗಲ್ ಆಡಲಿದೆ.

23 ಸದಸ್ಯರ ಪೋರ್ಚುಗಲ್ ವಿಶ್ವಕಪ್ ತಂಡ ಹೀಗಿದೆ:
ಗೋಲ್ ಕೀಪರ್ಸ್ : ಅಂಥೋಣಿ ಲೋಪೆಸ್ (ಲಿಯಾನ್), ಬೆಟೋ(ಗೋಜ್ಟೆಪೆ), ರಿಯಿ ಪ್ಯಾಟ್ರಿಸಿಯೋ(ಸ್ಪೋರ್ಟಿಂಗ್ಸ್ ಲಿಸ್ಬನ್)

ಡಿಫೆಂಡರ್ಸ್ : ಬ್ರುನೋ ಆಲ್ವೇಸ್(ರೇಂಜರ್ಸ್), ಸೆಡ್ರಿಕ್ ಸೋರೆಸ್(ಸೌಂಥಾಂಪ್ಟನ್), ಜೋಸ್ ಫಾಂಟೆ(ಡಾಲಿಯಾನ್ ಯುಫಾಂಗ್), ಮಾರಿಯೋ ರಿಯಿ (ನಪೋಲಿ), ಪೆಪೆ( ಬೆಸಿಕ್ಟಾಸ್), ರಾಫೆಲ್ ಗುರೆರಿಯೋ (ಬೊರಸ್ಸಿಯಾ ಡರ್ಟ್ ಮಂಡ್), ರಿಕಾರ್ಡೋ ಪೆರೆರಿಯಾ (ಪೋರ್ಟೋ), ರುಬೆನ್ ಡಿಯಾಸ್ (ಬೆನ್ ಫಿಕಾ)

ಮಿಡ್ ಫೀಲ್ಡರ್ಸ್: ಆಂಡ್ರೆನ್ ಸಿಲ್ವಾ( ಲಿಸ್ಟೆಸ್ಟರ್), ಬ್ರುನೋ ಫರ್ನಾಂಡಿಸ್ (ಸ್ಫೋರ್ಟಿಂಗ್ ಲಿಸ್ಬನ್), ಜೊಯಾವೋ ಮಾರಿಯೋ (ವೆಸ್ಟ್ ಹ್ಯಾಮ್), ಜೋಯಾವೊ ಮೌಂಟಿನ್ಹೋ(ಎಎಸ್ ಮೊನಾಕೊ), ಮ್ಯಾನ್ಯುಯಲ್ ಫರ್ನಾಂಡಿಸ್ (ಲೊಕೊಮೊಟಿವ್ ಮಾಸ್ಕೋ), ವಿಲಿಯಂ ಕರ್ವಾಲೋ(ಸ್ಫೋರ್ಟಿಂಗ್)

ಫಾರ್ವರ್ಡ್ಸ್ : ಆಂಡ್ರೆ ಸಿಲ್ವಾ(ಎಸಿ ಮಿಲಾನ್), ಬರ್ನಾಡೋ ಸಿಲ್ವಾ (ಮ್ಯಾಂಚೆಸ್ಟರ್ ಸಿಟಿ), ಕ್ರಿಸ್ಟಿಯಾನೋ ರೊನಾಲ್ಡೋ(ರಿಯಲ್ ಮ್ಯಾಡ್ರಿಡ್), ಗೆಲ್ಸನ್ ಮಾರ್ಟಿನ್ಸ್ (ಸ್ಫೋರ್ಟಿಂಗ್ ಲಿಸ್ಬನ್), ಗೊನಾಲೊ ಗುಯಿಡೆಸ್ (ವೆಲನ್ಸಿಯಾ), ರಿಕಾರ್ಡೋ ಕ್ವಾರೆಸ್ಮಾ (ಬೆಸಿಕ್ಟಾಸ್).

Story first published: Friday, June 8, 2018, 18:18 [IST]
Other articles published on Jun 8, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+