For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್‌ ವಿಜೇತ ಇಟಲಿ ಫುಟ್ಬಾಲರ್ ಪಾವೊಲೊ ರೊಸ್ಸಿ ನಿಧನ

World Cup winner Paolo Rossi dies aged 64

ರೋಮ್: 1982ರಲ್ಲಿ ವಿಶ್ವಕಪ್ ಫುಟ್ಬಾಲ್ ಗೆದ್ದ ಇಟಲಿ ತಂಡದಲ್ಲಿದ್ದ ಟಾಪ್ ಫುಟ್ಬಾಲರ್ ಪಾವೊಲೊ ರೊಸ್ಸಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಈ ಸಂಗತಿಯನ್ನು ಇಟಾಲಿಯನ್ ಟಿವಿ ಚಾನೆಲ್‌ ರಾಯ್ ಸ್ಪೋರ್ಟ್ಸ್ ಗುರುವಾರ (ಡಿಸೆಂಬರ್ 10) ಘೋಷಿಸಿದೆ.

ರಾಯ್ ಸ್ಪೋರ್ಟ್ಸ್‌ನಲ್ಲಿ ಪಾವೊಲೊ ರೊಸ್ಸಿ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 'ಇದೊಂದು ಆಘಾತಕಾರಿ ಮತ್ತು ಬೇಸರದ ಸಂಗತಿ; ಪಾವೊಲೊ ರೊಸ್ಸಿ ನಮ್ಮನ್ನಗಲಿದ್ದಾರೆ,' ಎಂದು ರಾಯ್ ಸ್ಪೋರ್ಟ್ಸ್ ನಿರೂಪಕ ಎನ್ರಿಕೊ ವರ್ರಿಯೇಲ್ ಹೇಳಿದ್ದಾರೆ.

'ಪಾವೊಲೊ ಅವರನ್ನು ಮರೆಯಲಾಗದು. 1982ರ ವಿಶ್ವಕಪ್‌ ಪಂದ್ಯದಲ್ಲಿ ನಾವೆಲ್ಲರೂ ಅವರನ್ನು ಪ್ರೀತಿಸುವಂತೆ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ರಾಯ್ ಜೊತೆ ನನ್ನ ಸಹೋದ್ಯೂಗಿಯೂ ಆಗಿದ್ದರು,' ಎಂದು ಎನ್ರಿಕೊ ತಿಳಿಸಿದ್ದಾರೆ. ರೊಸ್ಸಿ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.

ನಾಲ್ಕು ವರ್ಷಗಳ ಕಾಲ ಯುವೆಂಟಸ್‌ ತಂಡದಲ್ಲಿದ್ದಾಗ ರೊಸ್ಸಿ ಅವರು ಎರಡು ಇಟಾಲಿಯನ್ ಸೀರೀ ಎ ಪ್ರಶಸ್ತಿಗಳು, ಒಂದು ಯುರೋಪಿಯನ್ ಕಪ್, ಕೋಪ್ಪ ಕಪ್‌ಗಳನ್ನು ಗೆದ್ದಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿದ್ದು ವಿಶ್ವಕಪ್‌ ಗೆದ್ದಿದ್ದೇ ರೊಸ್ಸಿ ಶ್ರೇಷ್ಠ ಸಾಧನೆ. ರೊಸ್ಸಿ 6 ಗೋಲ್‌ಗಳು ಇಟಾಲಿ ತಂಡದ ವಿಶ್ವಕಪ್ ಗೆಲುವಿಗೆ ಕಾರಣವಾಗಿತ್ತು.

Story first published: Thursday, December 10, 2020, 11:19 [IST]
Other articles published on Dec 10, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+