ಫೀಫಾ ವಿಶ್ವಕಪ್ ಅಧಿಕೃತ ಲಾಂಛನ ಜಬಿವಾಕಾ ನಿಮ್ಗೊತ್ತಾ?


ಬೆಂಗಳೂರು, ಜೂನ್ 05: ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರಕ್ಕೆ ಸಕಲ ರೀತಿ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ವಿಶ್ವಕಪ್ ನ ಅಧಿಕೃತ ಲಾಂಛನವಾಗಿ ಜಬಿವಾಕಾವನ್ನು ಆಯ್ಕೆ ಮಾಡಲಾಗಿದೆ.
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.
ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.
ಪ್ರತಿ ಬಾರಿಯಂತೆ ಈ ಬಾರಿ ಕೂಡಾ ವಿಶ್ವಕಪ್ ನ ಪ್ರತ್ಯೇಕ ಲಾಂಛನವಾಗಿ ವಿಶಿಷ್ಟ ಪ್ರಾಣಿಯನ್ನು ಆನ್ ಲೈನ್ ವೋಟಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಬಾರಿ ಜವಿವಾಕಾ(Zabivaka) ಹೆಸರಿನ ಲಾಂಛನ ಆಯ್ಕೆಯಾಗಿದೆ. ಇದೊಂದು ತೋಳವಾಗಿದ್ದು, ವಿದ್ಯಾರ್ಥಿ ಡಿಸೈನರ್ ಎಕಟೆರಿನಾ ಬೊಚಾರೊವಾ ಅವರು ವಿನ್ಯಾಸಗೊಳಿಸಿದ್ದಾರೆ.
2016ರ ಅಕ್ಟೋಬರ್ 22ರಂದು ಅಯ್ಕೆಯಾದ ಲಾಂಛನವನ್ನು ಘೋಷಿಸಲಾಯಿತು. ಜಬಾವಿಕಾಗೆ ಶೇ53ರಷ್ಟು ಮತಗಳು ಸಿಕ್ಕರೆ ಹುಲಿಗೆ ಶೇ27ರಷ್ಟು, ಬೆಕ್ಕಿಗೆ ಶೇ20 ರಷ್ಟು ಮತಗಳು ಸಿಕ್ಕಿದ್ದವು. 2016ರ ಸೆಪ್ಟೆಂಬರ್ ನಲ್ಲಿ ನಡೆದ ವೋಟಿಂಗ್ ಪ್ರಕ್ರಿಯೆಯಲ್ಲಿ 10ಲಕ್ಷಕ್ಕೂ ಅಧಿಕ ಮಂದಿ ಮತ ಹಾಕಿದ್ದರು. ಕಳೆದ ಬಾರಿ ಬ್ರೆಜಿಲ್ ನಲ್ಲಿ ನಡೆದ ಫೀಫಾ ವಿಶ್ವಕಪ್ ನಲ್ಲಿ ಫುಲೆಕೋ ಆರ್ಮಡಿಲ್ಲೋ ಅಧಿಕೃತ ಲಾಂಛನವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications