2026 Hockey World Cup: ಭಾರತ, ಪಾಕಿಸ್ತಾನ ಬಿಗ್ ಫೈಟ್ ಫಿಕ್ಸ್, ಒಂದೇ ಗುಂಪಿನಲ್ಲಿ ಎರಡೂ ತಂಡಗಳು
2026 ರ ಹಾಕಿ ವಿಶ್ವಕಪ್ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಜಂಟಿಯಾಗಿ ಆಯೋಜಿಸಲಿವೆ. ಈ ಟೂರ್ನಿ ಆಗಸ್ಟ್ 15 ರಂದು ಆರಂಭವಾಗಲಿದ್ದು, ಆಗಸ್ಟ್ 30 ರಂದು ಫೈನಲ್ ಪಂದ್ಯ ನಡೆಯಲಿದೆ. ಎಫ್‌ಐಎಚ್ ಹಾಕಿ ವಿಶ್ವಕಪ್‌ಗಾಗಿ ಪುರುಷ ಮತ್ತು ಮಹಿಳಾ ಗುಂಪುಗಳನ್ನು ಘೋಷಿಸಲಾಗಿದೆ. ಪುರುಷರ ಗುಂಪು ವಿಭಾಗದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
2026 ರ ಹಾಕಿ ವಿಶ್ವಕಪ್‌ಗಾಗಿ ಪುರುಷರ ಗುಂಪು ಹಂತದ ವಿಭಾಗದಲ್ಲಿ ಭಾರತ, ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಇಂಗ್ಲೆಂಡ್ ಮತ್ತು ವೇಲ್ಸ್ ಅನ್ನು ಸಹ ಗುಂಪು D ನಲ್ಲಿ ಸೇರಿಸಲಾಗಿದೆ. ಭಾರತ ತಂಡವು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯುವ ಹಾಕಿ ವಿಶ್ವಕಪ್‌ನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದ್ದು, ಶೀಘ್ರದಲ್ಲಿ ಈ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪುರುಷರ ಹಾಕಿ ತಂಡದ ದಾಖಲೆ ಅದ್ಭುತವಾಗಿದೆ. ಎರಡೂ ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಭಾರತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ 2010ರಲ್ಲಿ ಕೊನೆಯ ಬಾರಿಗೆ ಪಾಕ್ ತಂಡದ ವಿರುದ್ಧ ಸೋಲನ್ನು ಕಂಡಿತ್ತು.
ಪುರುಷರ ಹಾಕಿ ವಿಶ್ವಕಪ್ 2026 ಗುಂಪುಗಳು
ಪುರುಷರ ಹಾಕಿ ಎ - ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್.
ಪುರುಷರ ಹಾಕಿ ಬಿ - ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಮಲೇಷ್ಯಾ.
ಪುರುಷ ಸಿ - ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್, ದಕ್ಷಿಣ ಆಫ್ರಿಕಾ.
ಪುರುಷ ಡಿ - ಇಂಗ್ಲೆಂಡ್, ಭಾರತ, ಪಾಕಿಸ್ತಾನ, ವೇಲ್ಸ್.
ಭಾರತೀಯ ಮಹಿಳಾ ತಂಡವು ಪೂಲ್ ಡಿ ನಲ್ಲಿ ಸ್ಥಾನ ಪಡೆದಿದೆ.
2026 ರ ಹಾಕಿ ವಿಶ್ವಕಪ್‌ನಲ್ಲಿ ಮಹಿಳಾ ಸ್ಪರ್ಧೆಯ ಗುಂಪುಗಳನ್ನು ಪ್ರಕಟಿಸಲಾಗಿದ್ದು, ಭಾರತ ಮಹಿಳಾ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳ ವಿರುದ್ಧ ಭಾರತದ ವಿರುದ್ಧ ಕಾದಾಡಲಿದೆ.
ಹಾಕಿ ವಿಶ್ವಕಪ್‌ನಲ್ಲಿ ಮಹಿಳಾ ಗುಂಪುಗಳು
ಪೂಲ್ ಎ - ನೆದರ್‌ಲ್ಯಾಂಡ್ಸ್, ಆಸ್ಟ್ರೇಲಿಯಾ, ಚಿಲಿ, ಜಪಾನ್.
ಪೂಲ್ ಬಿ - ಅರ್ಜೆಂಟೀನಾ, ಜರ್ಮನಿ, ಯುಎಸ್ಎ, ಸ್ಕಾಟ್ಲೆಂಡ್.
ಪೂಲ್ ಸಿ - ಬೆಲ್ಜಿಯಂ, ಸ್ಪೇನ್, ನ್ಯೂಜಿಲೆಂಡ್, ಐರ್ಲೆಂಡ್.
ಪೂಲ್ ಡಿ - ಚೀನಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications